ಅಮೂಲ್ಯ ಲಿಯೋನಾ
ರಾಜ್ಯ
ಆಯೋಜಕರು ಆಹ್ವಾನ ನೀಡಿಲ್ಲ ಎಂದ ಮೇಲೆ ಅಮೂಲ್ಯ ಕೈಗೆ ಮೈಕ್ ಕೊಟ್ಟಿದ್ದು ಯಾರು?
ಪಾಕ್ತಿಸಾನ ಪರವಾಗಿ ಘೋಷಣೆ ಕೂಗಿರುವುದು ದುರದೃಷ್ಟಕರ. ಅದು ಕೂಡಾ ಫ್ರೀಡಂ ಪಾರ್ಕ್‌ನಂತಹ ಪವಿತ್ರ ಸ್ಥಳದಲ್ಲಿ ಕೂಗಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ಗದಗ: ಪಾಕ್ತಿಸಾನ ಪರವಾಗಿ ಘೋಷಣೆ ಕೂಗಿರುವುದು ದುರದೃಷ್ಟಕರ. ಅದು ಕೂಡಾ ಫ್ರೀಡಂ ಪಾರ್ಕ್‌ನಂತಹ ಪವಿತ್ರ ಸ್ಥಳದಲ್ಲಿ ಕೂಗಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೂಲ್ಯಗೆ ಕಾರ್ಯಕ್ರಮ ಆಯೋಜಕರು ಆಹ್ವಾನ ನೀಡಿಲ್ಲ ಎಂದು ಹೇಳಿದ್ದಾರೆ. ಆದರೆ ಅವಳ ಕೈಯಲ್ಲಿ ಮೈಕ್ ಹೇಗೆ ಬಂತು ? ಎಂದು ಪ್ರಶ್ನಿಸಿದರು.
ಇತ್ತಿಚಿನ ದಿನಗಳಲ್ಲಿ ಕೆಲವು ದೇಶದ್ರೋಹ ಸಂಘಟನೆಗಳ ಜೊತೆಗೆ ಯುವ ಜನಾಂಗ ಕೈ ಜೊಡಿಸುತ್ತಿರುವುದು ವಿಷಾದನೀಯ. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ದೇಶದ್ರೂಹದ ಕಾನೂನು ಅಡಿಯಲ್ಲಿ ಅವಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ದೇಶ ಪ್ರೇಮದ ವಿಷಯದಲ್ಲಿ ಯಾವುದೇ ರಾಜೀ ಇಲ್ಲ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಎಲ್ಲ ವಿಷಯವೂ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಾಗಿದೆ. ಈ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ. ದೇಶ ದ್ರೋಹದ ಕಾನೂನು ಅಡಿಯಲ್ಲಿ ಅವಳ ಮೇಲೆ ಕ್ರಮ ಕೈಗೊಳುತ್ತೆವೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ