ಲಲಿತ ವಿವಿ ಸ್ಥಾಪನೆಗೆ ಮನಸ್ಸು ಮಾಡದ ಮಾಜಿ ಸಿಎಂ ಸಿದ್ದರಾಮಯ್ಯ

ಪ್ರವಾಸೋದ್ಯಮ ನೀರಾವರಿ, ಶಿಕ್ಷಣ, ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ಸಾವಿರಾರು ಕೋಟಿ ರೂ. ಅನುದಾನ ತರುತ್ತಿರುವ ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅದೇಕೋ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಲಲಿತ ಕಲಾ ವಿಶ್ವ ವಿದ್ಯಾಲಯ ಆರಂಭಕ್ಕೆ ಮನಸ್ಸು ಮಾಡುತ್ತಿಲ್ಲ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬಾಗಲಕೋಟೆ: ಪ್ರವಾಸೋದ್ಯಮ ನೀರಾವರಿ, ಶಿಕ್ಷಣ, ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ಸಾವಿರಾರು ಕೋಟಿ ರೂ. ಅನುದಾನ ತರುತ್ತಿರುವ ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅದೇಕೋ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಲಲಿತ ಕಲಾ ವಿಶ್ವ ವಿದ್ಯಾಲಯ ಆರಂಭಕ್ಕೆ ಮನಸ್ಸು ಮಾಡುತ್ತಿಲ್ಲ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡ ಬಳಿಕ ಕ್ಷೇತ್ರದ ಚಿತ್ರಣವೇ ಬದಲಾಗುತ್ತಿದೆ. ಅಭಿವೃದ್ಧಿ ವೇಗ ತೀವ್ರಗೊಂಡಿದೆ. ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಚಾಲನೆ ಸಿಕ್ಕಿದೆ. 

ಬಾದಾಮಿ ಮತ್ತು ಕೆರೂರ ಪಟ್ಟಣ ಸೇರಿದಂತೆ ೧೮ ಹಳ್ಳಿಗಳಿಗೆ ಶಾಶ್ವತ ಕುಡಿವ ನೀರು ಕಲ್ಪಿಸಲು ಆಲಮಟ್ಟಿಯಿಂದ ನೀರು ತರುವ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಅಲ್ಲಲ್ಲಿ ಸರ್ಕಾರಿ ಕಾಲೇಜ್‌ಗಳು ಸ್ಥಾಪನೆಗೊಂಡಿವೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸಾಕಷ್ಟು ಆದ್ಯತೆ ನೀಡಲಾಗುತ್ತಿದೆ. ಬಾದಾಮಿಯ ಬನಶಂಕರಿ ಬಳಿ ತ್ರಿಸ್ಟಾರ್ ಹೋಟೆಲ್ ಆರಂಭಕ್ಕೆ ಅನುಮತಿ ಸಿಕ್ಕಿದೆ. 

ಹೀಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಕ್ಕಿದ್ದು, ಇದೀಗ ೬೦೦ ಕೋಟಿ ರೂ. ವೆಚ್ಚದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಬಜೆಟ್‌ನಲ್ಲಿ ೫೨೦ ಕೋಟಿ ರೂ. ವೆಚ್ಚದ ಕೆರೂರ ಏತ ನೀರಾವರಿಗೆ ಮಂಜೂರಾತಿ ಸಿಕ್ಕುವ ಸಾಧ್ಯತೆಗಳು ಇವೆ.

ಏತನ್ಮಧ್ಯೆ ಕಳೆದ ೧೦ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಹತ್ವಾಕಾಂಕ್ಷಿ ಲಲಿತಕಲಾ ವಿಶ್ವ ವಿದ್ಯಾಲಯ ಸ್ಥಾಪನೆಗೆ ಸಿದ್ದರಾಮಯ್ಯ ಏಕೆ ಮನಸ್ಸು ಮಾಡುತ್ತಿಲ್ಲ ಎನ್ನುವುದೇ ಇದುವರೆಗೂ ಯಕ್ಷ ಪ್ರಶ್ನೆಯಾಗಿ ಜನತೆಯನ್ನು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ಬಾದಾಮಿ ಬಳಿಯ ಖ್ಯಾಡ್‌ನಲ್ಲಿ ಲಲಿತ ಕಲಾ ವಿಶ್ವ ವಿದ್ಯಾಲಯ ಸ್ಥಾಪನೆಗೆ ೨೦೦೮- ೨೦೧೩ ರ ವರೆಗೆ ಇದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಇಂದಿನ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರ ಪ್ರಯತ್ನದಿಂದ ಖ್ಯಾಡ ಬಳಿ ವಿವಿ ಸ್ಥಾಪನೆಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ. 

ಇದಕ್ಕಾಗಿ ೪೦೦ ಎಕರೆ ಜಾಗೆ ಕೂಡ ಮೀಸಲಿರಿಸಲಾಗಿದೆ. ವಿವಿ ಸ್ಥಾಪನೆಗೆ ಬೇಕಾದ ಅಗತ್ಯತೆಗಳನ್ನು ಪೂರೈಸಲು ಸರ್ಕಾರ ವಿಶೇಷ ಅಧಿಕಾರಿಗಳನ್ನು ಕೂಡ ನೇಮಕ ಮಾಡುತ್ತಲೇ ಬಂದಿದೆ. 

ಖ್ಯಾಡ್ ಬಳಿ ಲಲಿತ ಕಲಾ ವಿವಿ ಸ್ಥಾಪಿಸಿ ಆ ಮೂಲಕ ಚಾಲುಕ್ಯರ ಕಾಲದ ಕಲೆ,ವಾಸ್ತುಶಿಲ್ಪದ ಕುರಿತು ಅಧ್ಯಯನ, ಸಂಶೋಧನೆ ಅವಕಾಶ ಕಲ್ಪಿಸಬೇಕು ಎನ್ನುವ ಮಹದುದ್ದೇಶವನ್ನು ಸರ್ಕಾರ ಹೊಂದಿದೆಯಾದರೂ ಆರಂಭಕ್ಕೆ ಮನಸ್ಸು ಮಾಡುತ್ತಿಲ್ಲ.  ಲಲಿತಕಲಾ ವಿವಿ ಮೈಸೂರಿನಲ್ಲಿ ಸ್ಥಾಪನೆ ಆಗಬೇಕು ಎನ್ನುವ ಹಿನ್ನೆಲೆಯಲ್ಲಿ ಇದುವರೆಗೂ ವಿವಿ ಸ್ಥಾಪನೆ ನನೆಗುದಿಗೆ ಬಿದ್ದಿದೆ.

ಕ್ಷೇತ್ರದ ಶಾಸಕ ಸಿದ್ದರಾಮಯ್ಯ ವಿವಿ ಸ್ಥಾಪನೆಗೆ ಸ್ಥಳೀಯ ಮುಖಂಡರು, ಪ್ರವಾಸಿ ಪ್ರೀಯರು, ಸಂಶೋಧಕರು ಮತ್ತು ಸಾಹಿತಿಗಳೊಂದಿಗೆ ಆರಂಭದಲ್ಲಿ ಸಭೆ ನಡೆಸಿ ಚರ್ಚಿಸಿದರಾದರೂ ಬಳಿಕ ಮೌನಕ್ಕೆ ಶರಣಾಗಿದ್ದಾರೆ. ಸ್ವಂತ ಜಿಲ್ಲೆ ಮೈಸೂರಿನಲ್ಲಿ ವಿವಿ ಸ್ಥಾಪನೆ ಆಗಬೇಕು ಎನ್ನುವ ಆಶಯದಿಂದ ಆ ವಿಷಯ ಕೈ ಬಿಟ್ಟಿದ್ದಾರೋ ಏನೋ ಎನ್ನುವ ಅನುಮಾನ ಬಹುತೇಕರನ್ನು ಕಾಡುತ್ತಿದೆ.

ಜಿಲ್ಲೆಯ ಜನತೆಯಲ್ಲಿ ಮನೆ ಮಾಡುತ್ತಿರುವ ಅನುಮಾನ ಹೋಗಲಾಡಿಸಲು ಸಿದ್ದರಾಮಯ್ಯ ಅವರು ಪ್ರಸಕ್ತ ಬಜೆಟ್‌ನಲ್ಲಿ ವಿವಿ ಸ್ಥಾಪನೆಗೆ ಮಂಜೂರಾತಿ ಪಡೆದುಕೊಳ್ಳುವ ಪ್ರಯತ್ನ ಮಾಡಬೇಕಿದೆ. ಒಂದೊಮ್ಮೆ ವಿವಿ ಸ್ಥಾಪನೆ ಆದಲ್ಲಿ ಈ ಭಾಗದ ಅಭಿವೃದ್ಧಿ ಬಾಗಿಲು ತೆರೆಯಲಿದೆ. 

ಬಾದಾಮಿ ಚಾಲುಕ್ಯರ ಆಳ್ವಿಕೆ, ಅವರ ಕಾಲದಲ್ಲಿನ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ ಅಧ್ಯಯನ, ಸಂಶೋಧನೆಯೊAದಿಗೆ ಇನ್ನು ಹೆಚ್ಚಿನ ಬೆಳಕು ಚೆಲ್ಲಲು ಸಾಧ್ಯವಾಗಲಿದೆ. ಜತೆಗೆ ಪ್ರವಾಸೋದ್ಯಮ ಬೆಳವಣಿಗೆಗೂ ವಿವಿ ಪೂರಕವಾಗಿ ಕೆಲಸ ಮಾಡಲು ಅನುಕೂಲವಾಗಲಿದೆ. ಇವುಗಳ ಜನತೆಗೆ ಸ್ಥಳೀಯರಿಗೆ ಒಂದಿಷ್ಟು ಉದ್ಯೋಗಾವಕಾಶಗಳು ಹೆಚ್ಚಲಿವೆ. ಈ ಬಗ್ಗೆ ಶಾಸಕ ಸಿದ್ದರಾಮಯ್ಯ ಎಷ್ಟರ ಮಟ್ಟಿಗೆ ಮನಸ್ಸು ಮಾಡುತ್ತಾರೆ ಎನ್ನುವುದನ್ನು ಬಜೆಟ್ ಮಂಡನೆವರೆಗೂ ಕಾಯ್ದು ನೋಡಬೇಕಷ್ಟೆ !.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com