ತುಮಕೂರು: ಟೈಮ್ಸ್ ಆಫ್ ಇಂಡಿಯಾ ದೈನಿಕ ಪತ್ರಿಕೆಯ ವರದಿಗಾರ, ಪ್ರತಿಭಾನ್ವಿತ ಪತ್ರಕರ್ತ ರೋಹಿತ್ ಬಿ.ಆರ್(36ವ) ನಿಧನರಾಗಿದ್ದಾರೆ.
ಇಲ್ಲಿನ ಸದರನಹಳ್ಳಿಯ ತಮ್ಮ ತೋಟದ ಮನೆಯ ಬಾವಿಯಲ್ಲಿ ಈಜಲು ತೆರಳಿದ್ದ ರೋಹಿತ್ ನೀರಿನಲ್ಲಿ ಕಲ್ಲಿಗೆ ತಲೆ ಬಡಿದು ರಕ್ತಸ್ರಾವವಾಗಿ ನಿನ್ನೆ ಮೃತಪಟ್ಟಿದ್ದಾರೆ.
ಶಿವರಾತ್ರಿ ಮತ್ತು ವಾರಾಂತ್ಯದ ರಜೆ ಕಳೆಯಲು ಊರಿಗೆ ಆಗಮಿಸಿದ್ದ ರೋಹಿತ್ ಅಕಾಲಿಕವಾಗಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಗ್ನಿಶಾಮಕ ಸಿಬ್ಬಂದಿ, ಕ್ಯಾತ್ಸಂದ್ರ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮೇಲಕ್ಕೆತ್ತಿದರು.
Advertisement