ಮೂಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 5 ಕೋಟಿ ಮೌಲ್ಯದ ಚಿನ್ನದ ಪಲ್ಲಕ್ಕಿ ಸಮರ್ಪಣೆ

ಉಡುಪಿಯ ಗುಜ್ಜಾಡಿಯ ಸ್ವರ್ಣ ಜ್ಯುವೆಲ್ಲರ್ಸ್ ನಲ್ಲಿ 11 ಕೆಜಿ ಚಿನ್ನದಿಂದ ತಯಾರಾದ ಚಿನ್ನದ ಪಲ್ಲಕ್ಕಿಯನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಬಪ್ಪನಾಡು  ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಸಮರ್ಪಿಸಲಾಗಿದೆ.
ಚಿನ್ನದ ಪಲ್ಲಕ್ಕಿ
ಚಿನ್ನದ ಪಲ್ಲಕ್ಕಿ
Updated on

ಉಡುಪಿ: ಉಡುಪಿಯ ಗುಜ್ಜಾಡಿಯ ಸ್ವರ್ಣ ಜ್ಯುವೆಲ್ಲರ್ಸ್ ನಲ್ಲಿ 11 ಕೆಜಿ ಚಿನ್ನದಿಂದ ತಯಾರಾದ ಚಿನ್ನದ ಪಲ್ಲಕ್ಕಿಯನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಬಪ್ಪನಾಡು  ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಸಮರ್ಪಿಸಲಾಗಿದೆ.

ಸುಮಾರು ಐದು ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸ್ವರ್ಣ ಪಲ್ಲಕ್ಕಿಯನ್ನು ಮಂಗಳವಾರ ಮುಂಜಾನೆ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಸ್ಥಾನದ ಆಡಳಿತಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ. ಇದಕ್ಕೆ ಮುನ್ನ ಪಲ್ಲಕ್ಕಿಯನ್ನು . ವಿಧ್ಯುಕ್ತ ಮೆರವಣಿಗೆಯ ಮೂಲಕ ತರಲಾಗಿದೆ. ಜಿಎಸ್‌ಜೆ ಅಧ್ಯಕ್ಷರಾದ ಗುಜ್ಜಾಡಿ ಭಾಕರ್ ನಾಯಕ್, ಜಿಎಸ್‌ಜೆ ನಿರ್ದೇಶಕ ಗುಜ್ಜಾಡಿ  ರಾಮದಾಸ ನಾಯಕ್, ದತ್ತಸಂಚಯ ವಿಭಾಗದ ಸಹಾಯಕ ಆಯುಕ್ತ ವೆಂಕಟೇಶ್ ಮತ್ತಿತರರು ಈ ಸಮಯ ಹಾಜರಿದ್ದರು.

ಚಿನ್ನದ ಪಲ್ಲಕ್ಕಿ ಕುರಿತು ಮಾಹಿತಿ ನೀಡಿದ ಗುಜ್ಜಾಡಿ ಮದಾಸ ನಾಯಕ್, ಇದು 11 ಕೆಜಿ ಚಿನ್ನದಿಂದ ತಯಾರಾಗಿದೆ. ಚಿನ್ನವು 22 ಕ್ಯಾರೆಟ್ ಗುಣಮಟ್ಟದ್ದಾಗಿದೆ.  ‘’ ಎಲ್ಲಾ ಭಾಗಗಳನ್ನು ಬಿಐಎಸ್ ಹಾಲ್ಮಾರ್ಕ್ಚಿನ್ನದಿಂದ ತಯಾರಿಸಲಾಗಿದೆ. ತೂಕವನ್ನು ದೇವಾಲಯದ ಅಧಿಕಾರಿಗಳು ಖಚಿತಪಡಿಸಿದ್ದಾರೆ.  ಈ ಪಲ್ಲಕ್ಕಿಯನ್ನು 550 ದಿನಗಳಲ್ಲಿ ತಯಾರಿಸಲಾಯಿತು. ಗುಜ್ಜಾಡಿಯ ಸ್ವರ್ಣ ಜ್ಯುವೆಲ್ರ್ಸ್ ನಲ್ಲಿ ಈ ಪಲ್ಲಕ್ಕಿ ತಯಾರಾಗಿದೆ. ಈ ಉದ್ಯಮದ ಘಟಕ ಉಡುಪಿಯ ಕೆಳರ್ಕಳ ಬೆಟ್ಟುವಿನಲ್ಲಿದೆ" 

ಸ್ವರ್ಣೀದ್ಯಮದಲ್ಲಿ ಕಂಪನಿಯು ಎಲ್ಲಾ ಹಂತದ ಆಭರಣಗಳ ಪರಿಣಿತ ಕುಶಲಕರ್ಮಿಗಳನ್ನು ಒಂದೇ ಸೂರಿನಡಿ ಕೆಲಸ ಮಾಡಲು ಹೇಳಳಾಗಿತ್ತು.ಸಂಕೀರ್ಣವಾದ ವಿನ್ಯಾಸಗಳನ್ನು ಹೊಂದಿರುವ ಚಿನ್ನದ ಪಲ್ಲಕ್ಕಿಯನ್ನು ತಯಾರಿಸುವಲ್ಲಿ ವಿವಿಧ ಹಂತಗಳಿಗೆ ಬೇಕಾದ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲಾಗಿತ್ತು.ಪ್ರತಿಯೊಬ್ಬ ಕುಶಲಕರ್ಮಿಗಳು ಇಲ್ಲಿ ಸ್ವತಂತ್ರವಾಗಿ ಕೆಲಸ ಮಾಡಿದ್ದಾರೆ. ಆದರೆ ಪರಸ್ಪರ ಎಲ್ಲರೂ ಒಬ್ಬರಿಗೊಬ್ಬರು ಅವಲಂಬಿತರು. ಇದನ್ನು ಕ್ಲಸ್ಟರ್ ಮಾದರಿ ಪ್ರೊಡಕ್ಷನ್  ಎಂದು ಹೇಳಬಹುದು. ಎಂದು ಅವರು ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com