ಹೊಸಪೇಟೆ: ದೇಶದಲ್ಲೇ ಮೊದಲ ಬಾರಿಗೆ ಸರ್ವಧರ್ಮ ರಥೋತ್ಸವಕ್ಕೆ ಚಾಲನೆ! 

ಸರ್ವಧರ್ಮಗಳ ಸಾಮರಸ್ಯ ಸಾರುವ ದೃಷ್ಠಿಯಿಂದ ಹೊಸಪೇಟೆ ನಗರದ ಕೊಟ್ಟೂರೇಶ್ವರ ಮಠದ ಸಂಗನಬಸವ ಶ್ರೀಗಳು ಪ್ರಾರಂಭಿಸಿರುವ ಸರ್ವಧರ್ಮ ರಥೋತ್ಸವ ಮೂರನೆ ವರ್ಷಕ್ಕೆ ಕಾಲಿಡಲಿದೆ.
ಹೊಸಪೇಟೆ: ದೇಶದಲ್ಲೇ ಮೊದಲ ಬಾರಿಗೆ ಸರ್ವಧರ್ಮ ರಥೋತ್ಸವಕ್ಕೆ ಚಾಲನೆ!
ಹೊಸಪೇಟೆ: ದೇಶದಲ್ಲೇ ಮೊದಲ ಬಾರಿಗೆ ಸರ್ವಧರ್ಮ ರಥೋತ್ಸವಕ್ಕೆ ಚಾಲನೆ!
Updated on

ಹೊಸಪೇಟೆ: ಸರ್ವಧರ್ಮಗಳ ಸಾಮರಸ್ಯ ಸಾರುವ ದೃಷ್ಠಿಯಿಂದ ಹೊಸಪೇಟೆ ನಗರದ ಕೊಟ್ಟೂರೇಶ್ವರ ಮಠದ ಸಂಗನಬಸವ ಶ್ರೀಗಳು ಪ್ರಾರಂಭಿಸಿರುವ ಸರ್ವಧರ್ಮ ರಥೋತ್ಸವ ಮೂರನೆ ವರ್ಷಕ್ಕೆ ಕಾಲಿಡಲಿದೆ.

ಮಾರ್ಚ್ ತಿಂಗಳ 16ನೇ ತಾರೀಕಿನಂದು ನಡೆಯುವ ಈ ರಥೋತ್ಸವಕ್ಕೆ ಫೆ.27 ರಂದು ಚಾಲನೆ ನೀಡಲಾಯಿತು. ರಥೋತ್ಸವದ ಪ್ರಯುಕ್ತ ಮಠದಲ್ಲಿ 18ದಿನಗಳ ಕಾಲ ಸರ್ವಧರ್ಮ ದರ್ಶನ ಪ್ರವಚನ ಕಾರ್ಯಕ್ರಮವನ್ನ ಪ್ರಾರಂಭಿಸಲಾಗಿದ್ದು ಯಡ್ರಾಮಿಯ ವಿರಕ್ತ ಮಠದ ಸಿದ್ದಲಿಂಗ ಮಹಾಸ್ವಾಮಿಗಳು 18ದಿನಗಳ ಕಾಲ ಸಕಲ ಧರ್ಮಗಳ ಕುರಿತು ಪ್ರವಚನ ನೀಡಲಿದ್ದಾರೆ.

ಪುರಾಣ ಮಹಾಮಂಗಲ ದಿನದಂದು ಹೊಸಪೇಟೆ ನಗರದ ಮೇನ್ ಬಜಾರದಲ್ಲಿ ರಥೋತ್ಸವ ನಡೆಯಲಿದ್ದು, ಈ ರಥೋತ್ಸವ ಹತ್ತು ಹಲವು ವಿಶೇಷಗಳಿಂದ ಕೂಡಿದೆ. ಪ್ರಮುಖವಾಗಿ ರಥದ ಮೇಲೆ ಭಗವದ್ಘೀತೆ ಮತ್ತು ಕುರಾನ್, ಮೆಕ್ಕಾ-ಮಸೀದಿಯ ದರ್ಗಾ ಮತ್ತು ಬೈಬಲ್, ಏಸು ಕ್ರಿಸ್ತರ ಪ್ರತಿಮೆಗಳು ಸೇರಿದಂತೆ ಸಕಲ ಧರ್ಮಗಳ ಧರ್ಮ ಗ್ರಂಥಗಳನ್ನ ಹಾಗೂ ದಾರ್ಶನಿಕರ ಮೂರ್ತಿಗಳನ್ನ ಕೆತ್ತನೆಮಾಡಲಾಗಿದೆ. 

ಈ ರಥದಲ್ಲಿ ಯಾವುದೇ ದೇವರ ವಿಗ್ರಹವನ್ನ ಸ್ಥಾಪನೆಮಾಡುವ ಬದಲು ಪ್ರತಿಯೊಂದು ಧರ್ಮ ಗ್ರಂಥವನ್ನ ಇಟ್ಟು ರಥೋತ್ಸವ ನಡೆಸಲಾಗುತ್ತೆ. ಇನ್ನು ಈ ರೀತಿಯಾಗಿ ಸರ್ವಧರ್ಮಗಳ ಗ್ರಂಥವನ್ನ ಇಟ್ಟು ರಥ ಎಳೆಯುವ ರಥೋತ್ಸವ ದೇಶದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. ಅಂದಾಜು 38ಅಡಿ ಎತ್ತರ ಇರುವ ಈ ರಥ ಉಡುಪಿಯ ರಾಜಶೇಖರ್ ಹೆಬ್ಬಾರ ಎಂಬ ಕಲಾವಿಧರಿಂದ ವಿಭಿನ್ನ ಕಲಾಕೃತಿಯಲ್ಲಿ ಕತ್ತಲ್ಪಟ್ಟಿದೆ. ಅಂದಾಜು 45ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ರಥ ಮೂರನೆ ವರ್ಷದ ವರ್ಷಾಚಣೆಯನ್ನ ಆಚರಿಸಿಕೊಳ್ಳುತಿದ್ದು ಈ ರಥೋತ್ಸವ ಕಳೆದ ವರ್ಷ ಸಾಕಷ್ಟು ವಿರೋಧಗಳನ್ನ ಸಹ ಎದುರಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com