
ಮೈಸೂರು: ವೆಜ್ ಬಿರಿಯಾನಿ ಆರ್ಡರ್ ಮಾಡಿದ ಪ್ರಯಾಣಿಕನಿಗೆ ಮೈಸೂರಿನ ಶತಾಬ್ದಿ ಎಕ್ಸ್ ಪ್ರೆಸ್ ಚಿಕನ್ ಬಿರಿಯಾನಿ ನೀಡಿರುವ ಘಟನೆ ನಡೆದಿದೆ.
ಮೈಸೂರಿನ ನಿವಾಸಿ, ಸುಮಂತ್ ಸಿ.ವಿ ಬೆಂಗಳೂರಿನಿಂದ ಮೈಸೂರಿಗೆ ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದರು, ಈ ವೇಳೆ ಅವರು ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದರು, ಆದರೆ ರೈಲು ಸಿಬ್ಬಂದಿ ಅವರಿಗೆ ಚಿಕನ್ ಬಿರಿಯಾನಿ ನೀಡಿದ್ದಾರೆ. ಈ ಸಂಬಂಧ ಅವರು ಲಿಖಿತ ದೂರು ದಾಖಲಿಸಿದ್ದಾರೆ.
ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇದೊಂದು ಪ್ರಯಾಣಿಕನಿಗೆ ಮಾಡಿದ ಅವಮಾನ, ಇದೊಂದು ರೀತಿಯ ಕಿರುಕುಳ ಎಂದು ಹೇಳಿದ್ದಾರೆ.
ಸಸ್ಯಾಹಾರಿ ಪ್ರಯಾಣಿಕರಿಗೆ ಮಾಂಸಾಹಾರಿ ಆಹಾರವನ್ನು ನೀಡುವುದು ಸೇವೆಯ ಕೊರತೆಗೆ ಕಾರಣವಾಗಿದೆ ಎಂದು ವಿವಿಧ ಗ್ರಾಹಕ ನ್ಯಾಯಾಲಯಗಳು ತನ್ನ ಆದೇಶಗಳಲ್ಲಿ ಗಮನಿಸಿವೆ.
ಸುಮಂತ್ ಅವರು ಫೋನ್ ಕರೆ ಮೂಲಕ ಹಿರಿಯ ರೈಲ್ವೆ ಅಧಿಕಾರಿಯ ಗಮನಕ್ಕೆ ತಂದಿದ್ದಾರೆ.
"ರೈಲು ಮೈಸೂರು ತಲುಪಿದಾಗ, ಡಿಆರ್ಎಂ ಮೈಸೂರು ಕಳುಹಿಸಿದ ರೈಲ್ವೆ ಅಧಿಕಾರಿಯೊಬ್ಬರು ನನ್ನೊಂದಿಗೆ ಮಾತನಾಡಿ ಈ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಾನು ಅದನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ ಆದರೂ ಈ ವಿಷಯದ ಬಗ್ಗೆ ನಾನು ಖಂಡಿತವಾಗಿ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.
Advertisement