ಮಲೆಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆಯಲ್ಲಿ 3.5 ಕೋಟಿ ರೂ. ಆದಾಯ ಸಂಗ್ರಹ

ಜಿಲ್ಲೆಯ ಹಾನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ. 21ರಂದು ನಡೆದ ಮಹಾಶಿವರಾತ್ರಿ ಜಾತ್ರೆಯಲ್ಲಿ ಒಟ್ಟು 3.5 ಕೋಟಿ ರೂ. ಆದಾಯ ಸಂಗ್ರಹವಾಗಿದೆ. 
ಮಲೆ ಮಹದೇಶ್ವರ ಬೆಟ್ಟ
ಮಲೆ ಮಹದೇಶ್ವರ ಬೆಟ್ಟ

ಚಾಮರಾಜನಗರ: ಜಿಲ್ಲೆಯ ಹಾನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ. 21ರಂದು ನಡೆದ ಮಹಾಶಿವರಾತ್ರಿ ಜಾತ್ರೆಯಲ್ಲಿ ಒಟ್ಟು 3.5 ಕೋಟಿ ರೂ. ಆದಾಯ ಸಂಗ್ರಹವಾಗಿದೆ. 

ಫೆ.20ರಿಂದ 25ರವರೆಗೆ ನಡೆದ ಐದು ದಿನಗಳ ಮಹೋತ್ಸವಕ್ಕೆ ರಾಜ್ಯಾದ್ಯಂತದ ಲಕ್ಷಾಂತರ ಭಕ್ತರು ಆಗಮಿಸಿದ್ದರು. 

ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಕ್ಕೆ, ವಿವಿಧ ಸೇವೆಗಳು, ವಾಹನ ನಿಲುಗಡೆ ಶುಲ್ಕ ಮತ್ತು ವಿಶೇಷ ಪ್ರವೇಶದ ಶುಲ್ಕಗಳಿಂದ ಒಟ್ಟು 3.54 ಕೋಟಿ ರೂ. ಸಂಗ್ರಹವಾಗಿದೆ. ಇದರಲ್ಲಿ ದೇಗುಲದ ಕಾಣಿಕೆ ಹಣ ಒಳಗೊಂಡಿಲ್ಲ. ಕಳೆದ ವರ್ಷ ಈ ಉತ್ಸವದಲ್ಲಿ 2.57 ಕೋಟಿ ರೂ. ಸಂಗ್ರಹವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com