ಆನೆಗೊಂದಿ ಉತ್ಸವ: ಪಾರಂಪರಿಕ ನಡಿಗೆಗೆ ಡಿಸಿ, ಶಾಸಕ ಚಾಲನೆ

ಆನೆಗೊಂದಿ ಉತ್ಸವದ ಭಾಗವಾಗಿ ಭಾನುವಾರ ಅಂಜನಾದ್ರಿ ಬೆಟ್ಟದಿಂದ ಆನೆಗೊಂದಿವರೆಗೆ ಹಮ್ಮಿಕೊಳ್ಳಲಾಗಿದ್ದ ಪಾರಂಪರಿಕ ನಡಿಗೆಗೆ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ ಹಾಗೂ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.
ಆನೆಗೊಂದಿ ಉತ್ಸವ: ಪಾರಂಪರಿಕ ನಡಿಗೆಗೆ ಡಿಸಿ, ಶಾಸಕ ಚಾಲನೆ
ಆನೆಗೊಂದಿ ಉತ್ಸವ: ಪಾರಂಪರಿಕ ನಡಿಗೆಗೆ ಡಿಸಿ, ಶಾಸಕ ಚಾಲನೆ

ಗಂಗಾವತಿ: ಆನೆಗೊಂದಿ ಉತ್ಸವದ ಭಾಗವಾಗಿ ಭಾನುವಾರ ಅಂಜನಾದ್ರಿ ಬೆಟ್ಟದಿಂದ ಆನೆಗೊಂದಿವರೆಗೆ ಹಮ್ಮಿಕೊಳ್ಳಲಾಗಿದ್ದ ಪಾರಂಪರಿಕ ನಡಿಗೆಗೆ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ ಹಾಗೂ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.

ಬಳ್ಳಾರಿಯ ನೋಪಾಸನ ಸಂಸ್ಥೆ ಆಯೋಜಿಸಿದ್ದ ಪಾರಂಪರಿಕ ನಡಿಗೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಣಾಪುರ, ಆನೆಗೊಂದಿ, ಮಲ್ಲಾಪುರ ಗ್ರಾಮದ ಸಕರ್ಾರಿ ಶಾಲೆಯ ಮಕ್ಕಳು, ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಅಂಜನಾದ್ರಿ ಬೆಟ್ಟದಿಂದ ಆರಂಭಿಸಲಾದ ನಡಿಗೆ ಪಂಪಾಸರೋವರ, ಗವಿರಂಗನಾಥ ದೇಗುಲ, ದುಗರ್ಾದೇವಸ್ಥಾನ, ಅಗಸಿ, ರಂಗನಾಥ ದೇಗುಲ, ಗಗನ ಮಹಲ್, ಜೈನಬಸಿದಿ, ಚಿಂತಾಮಣಿ, ತುಂಗಭದ್ರಾ ನದಿ ದಂಡೆ ಮೂಲಕ ಸಾಗಿ ವೇದಿಕೆಯ ಮುಂಭಾಗದಲ್ಲಿ ಸಮಾರೋಪ ಮಾಡಲಾಯಿತು. ಒಟ್ಟು ಐದು ಕಿ.ಲೋ ನಡಿಗೆ ಆಯೋಜಿಸಲಾಗಿತ್ತು.

ವಿಜಯನಗರ ಕಾಲದ ಅಡುಗೆ ಸ್ಪರ್ಧೆಗೆ  ಹೊಲೆ ಹೊತ್ತಿಸಿ ಚಾಲನೆ ನೀಡಿದ ಜಿಲ್ಲಾಧಿಕಾರಿ

ಆನೆಗೊಂದಿಬುತ್ಸವದ ಭಾಗವಾಗಿ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯ ಆವರಣದಲ್ಲಿ ವಿಜಯನಗರ ಕಾಲದ ಪಾರಂಪರಿಕಾ ಅಡುಗೆ ಹಾಗೂ ಅಧುನಿಕ ಅಡುಗೆ ಸ್ಪರ್ಧೆ ಭಾನುವಾರ ಏರ್ಪಡಿಸಲಾಗಿತ್ತು. 

ಜಿಲ್ಲಾಧಿಕಾರಿ ಪಿ. ಸುನಿಲ್‌ಕುಮಾರ್ ಹೊಲೆ ಹೊತ್ತಿಸುವ ಮೂಲಕ ಅಡುಗೆ ಸ್ಪರ್ಧೆ ಗೆ ಚಾಲನೆ ನೀಡಿದರು. ಒಟ್ಟು 72  ಜನ ಮುಖ್ಯ ಹಾಗೂ ಸಹಾಯಕ ಅಡುಗೆಯವರು ಪಾಲ್ಗೊಂಡಿದ್ದರು. ಈ ಪೈಕು ಹತ್ತು ತಂಡ ವಿಜಯನಗರ ಕಾಲದ ಅಡುಗೆ ಹಾಗೂ 22 ಜನ ಸ್ಥಳಿಯ ಅಡುಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆಹಾರ ಮತ್ತು ನಾಗರಿಕ ಇಲಾಖೆ ಉಪ ನಿರ್ದೇಶಕ ನಾರಾಯಣ ಕನಕರಡ್ಡೆ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿ ಅಡುಗೆ ಸ್ಪರ್ಧೆಗೆ ಅಚ್ಚು ಕಟ್ಟಾದ ವ್ಯವಸ್ಥೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com