ಹೊಸಪೇಟೆಯಲ್ಲೊಂದು ಪವಾಡ ಸದೃಶ್ಯ ಘಟನೆ: ಸತ್ತ ವ್ಯಕ್ತಿ ಮರಳಿ ಬಂದ ಮನೆಗೆ!
ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲೊಂದು ಪವಾದ ಸದೃಶ್ಯ ಘಟನೆ ನಡೆದಿದೆ. ಸತ್ತ ವ್ಯಕ್ತಿ ಮರಳಿ ಮನೆಗೆ ಬಂದಿದ್ದಾನೆ. ನಗರದ ನೆಹರೂ ಕಾಲೊನಿಯ ನಿವಾಸಿ ಮುನಿ 32 ವರ್ಷ ಮತ್ತೆ ಬದುಕಿ ಬಂದ ವ್ಯಕ್ತಿ.
ಹೊಟ್ಟೆ ನೋವಿನಿಂದ ಕಳೆದ ನಾಲ್ಕನೆ ತಾರೀಖಿನಂದು ಹೊಸಪೇಟೆ ನಗರದ ಸಿಟಿ ಆಸ್ಪತ್ರೆಗೆ ಮುನಿಯನ್ನು ದಾಖಲಿಸಲಾಗಿತ್ತು.ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್ ಎಸ್ ಆಸ್ಪತ್ರೆಗೆ ಸಂಬಂಧಿಕರು ಕರೆದುಕೊಂಡು ಹೋದಾಗ ಅವರು ಅಲ್ಲಿನ ವೈದ್ಯರು ಮಣಿಪಾಲ್ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ.
ಉದರ ಶಸ್ತ್ರ ಚಿಕಿತ್ಸೆಮಾಡಿದ ಬಳಿಕ ಮುನಿ ಬದುಕುಳಿಯುವುದು ಕಷ್ಟ ಸಾಧ್ಯ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯರು ಹೇಳಿದ್ದರಿಂದ ಮನೆಗೆ ಕರೆದೊಯ್ಯಲು ಸಂಬಂಧಿಕರು ಮುಂದಾಗಿದ್ದರು. ಆಸ್ಪತ್ರೆಯಿಂದ ಹೊರಬಂದ ಮೇಲೆ ಮುನಿ ಕೋಮಸ್ಥಿತಿಗೆ ಜಾರಿದ್ದ. ಆದರೆ, ಆತ ಸಾವನ್ನಪ್ಪಿದ್ದಾನೆ ಎಂದುಕೊಂಡ ಸಂಬಂಧಿಕರು ಮನೆಗೆ ಕರೆತರುತ್ತಿದ್ದರು.
ಮಣಿಪಾಲ್ ನಿಂದ ಹೊಸಪೇಟೆ ಬರುವ ದಾರಿ ಮಧ್ಯ ಹಗರಿಬೊಮ್ಮನಹಳ್ಳಿ ಬಳಿಯಲ್ಲಿ ಎಚ್ಚರವಾಗಿ ಮಾತಾಡಿ ಸಂಬಂಧಿಕರಿಗೆ ಆಶ್ಚರ್ಯ ಮೂಡಿಸಿದ್ದಾನೆ.
ಇತ್ತ ಹೊಸಪೇಟೆ ನಗರದಲ್ಲಿ ಮುನಿ ಸಂಬಂಧಿಕರು, ಸ್ನೇಹಿತರು ಶ್ರದ್ದಾಂಜಲಿ ಸಲ್ಲಿಸಲು ಮುಂದಾಗಿದ್ದರು,ಪ್ರತಿಯೊಬ್ಬ ಸ್ನೇಹಿತನ ಮೊಬೈಲ್ ವಾಟ್ಸ್ ಸ್ಟೇಟಸ್ ಗೆ ಮುನಿ ಪೊಟೊ ಹಾಕಿ ಗೌರವ ಸೂಚಿಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಹುಟ್ಟಿ ಬಾ ಎಂಬ ಸಂದೇಶ ಸರ್ವೇ ಸಾಮಾನ್ಯವಾಗಿತ್ತು.ಮುನಿ ಬದುಕಿ ಮನೆಗೆ ಬರುತಿದ್ದಂತೆ ಎಲ್ಲರ ವಾಟ್ಸಪ್ ಸ್ಟೇಟಸ್ ಗಳು ಸಡನ್ನಾಗಿ ಬದಲು ಆಗಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ