ಪ್ರಧಾನಿ ಮೋದಿಯ 'ಪರೀಕ್ಷಾ ಪೇ ಚರ್ಚಾ ಗೆ ತುಮಕೂರು ವಿದ್ಯಾರ್ಥಿಗಳು ಆಯ್ಕೆ

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿದ್ಯಾರ್ಥಿ ಸಂವಾದ "ಪರೀಕ್ಷಾ ಪೇ ಚರ್ಚಾ" ಕಾರ್ಯಕ್ರಮಕ್ಕೆ ರಾಜ್ಯದ ತುಮಕೂರು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 
ವಿದ್ಯಾರ್ಥಿಗಳಾದ ಸಾಗರ್ ಹಾಗೂ ದೀಪಿಕಾ
ವಿದ್ಯಾರ್ಥಿಗಳಾದ ಸಾಗರ್ ಹಾಗೂ ದೀಪಿಕಾ
Updated on

ತುಮಕೂರು: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿದ್ಯಾರ್ಥಿ ಸಂವಾದ "ಪರೀಕ್ಷಾ ಪೇ ಚರ್ಚಾ" ಕಾರ್ಯಕ್ರಮಕ್ಕೆ ರಾಜ್ಯದ ತುಮಕೂರು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಹಳ್ಳಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಾಗರ್ ಹಾಗೂ ಚಂಗಾವರ ಪ್ರೌಢ ಶಾಲೆಯ ವಿದ್ಯಾರ್ಥಿನಿ ದೀಪಿಕಾ.ಆರ್ ಪ್ರಧಾನಿಗಳ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು. 

 ಜ.20ರಂದು ಮೋದಿ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದ್ದು ವಿದ್ಯಾರ್ಥಿಗಳು ನೇರವಾಗಿ ಪ್ರಧಾನಿಗಳೊಡನೆ ಚರ್ಚೆ ನಡೆಸಲು ಅವಕಾಶ ನೀಡಲಾಗುತ್ತದೆ. ಹತ್ತನೇ ತರಗತಿ ವಿದ್ಯಾರ್ಥಿಗಳು ಚರ್ಚೆಯಲ್ಲಿ ಭಾಗವಹಿಸಲಿದ್ದು ಪರೀಕ್ಷೆಗೆ ಹೇಗೆಲ್ಲಾ ತಯಾರಿ ನಡೆಸಬೇಕೆಂದು ಪ್ರಧಾನಿ ಮೋದಿ ಕೆಲವು ಸಲಹೆಗಳನ್ನು ನಿಡಲಿದ್ದಾರೆ.

ಇನ್ನು ಈ ಚರ್ಚೆಗೆ ಆಯ್ಕೆಯಾಗಿರುವ ಸಾಗರ್ ಹಾಗೂ ದೀಪಿಕಾ ಇಬ್ಬರೂ ಗ್ರಾಮೀಣ ಹಿನ್ನೆಲೆಯವರಾಗಿದ್ದಾರೆ. ಸಾಗರ್ ತಂದೆ ಆಟೋ ಚಾಲಕನಾಗಿದ್ದರೆ ದೀಪಿಕಾ ತಂದೆ ರೈತರಾಗಿದ್ದಾರೆ.ಸದ್ಯ ಇಬ್ಬರೂ ವಿದ್ಯಾರ್ಥಿಗಳಿಗೆ ಪ್ರಧಾನಿ ಕಾರ್ಯಕ್ರಮಕ್ಕೆ ಆಯ್ಕೆಗೊಂಡಿರುವುದು ಖುಷಿ ಹೆಚ್ಚುವಂತೆ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com