ಬೆಂಗಳೂರಿನಲ್ಲಿ ಮಾನವ ಕಳ್ಳಸಾಗಣೆ ಜಾಲ ಪತ್ತೆ, ಬಾಂಗ್ಲಾ ಪ್ರಜೆ ಬಂಧನ

ಬಾಂಗ್ಲಾದ ಬಡ ಯುವತಿಯರನ್ನು ಮಲೇಷಿಯಾಗೆ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದನೆಂದು ಶಂಕಿಸಲಾಗಿರುವ  50 ವರ್ಷದ ಬಾಂಗ್ಲಾದೇಶದ ವ್ಯಕ್ತಿಯೊಬ್ಬನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬಾಂಗ್ಲಾದ ಬಡ ಯುವತಿಯರನ್ನು ಮಲೇಷಿಯಾಗೆ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದನೆಂದು ಶಂಕಿಸಲಾಗಿರುವ  50 ವರ್ಷದ ಬಾಂಗ್ಲಾದೇಶದ ವ್ಯಕ್ತಿಯೊಬ್ಬನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ.

ಶುಕ್ರವಾರ ಬಾಂಗ್ಲಾದೇಶಕ್ಕೆ ಸೇರಿದ್ದ ಮಹಿಳೆಯೊಬ್ಬಳನ್ನು ಕಳ್ಳ್ಸಾಗಣೆ ಮೂಲಕ ಮಲೇಷಿಯಾಗೆ ಕಳಿಸಲು ಯತ್ನಿಸುತ್ತಿದ್ದಾಗಆತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾನೆ. ವಿಮಾನ ನಿಲ್ದಾಣದ ಪೊಲೀಸರು ಪಾಸ್‌ಪೋರ್ಟ್ ಕಾಯ್ದೆ, ವಿದೇಶಿಯರ ಕಾಯ್ದೆ ಮತ್ತು ಮಾನವ ಕಳ್ಳಸಾಗಣೆ ಕಾಯ್ದೆಯಡಿ ರಕೀಬ್ ಎಚ್‌ಎಂ  ಎನ್ನುವವವನವಿರುದ್ಧ ಪ್ರಕರಣ ದಾಖಲಿಸಿದ್ದು ಮಹಿಳೆಯನ್ನು ರಕ್ಷಿಸಿದ್ದು ದೇವನಹಳ್ಳಿಯ ಮಹಿಳಾ ಆಶ್ರಯ ಮನೆಗೆ ರವಾನಿಸಲಾಗಿದೆ.

ಮುಂಜಾನೆ  2.45 ಕ್ಕೆ ರಕೀಬ್ ಸಿಕ್ಕಿಬಿದ್ದಿದ್ದಾನೆ ಎಂದು ವಿಮಾನ ನಿಲ್ದಾಣ ಪೊಲೀಸರು ತಿಳಿಸಿದ್ದಾರೆ. "ಅವನು  26 ವರ್ಷದ ಮಹಿಳೆಯನ್ನು ತನ್ನ ಪತ್ನಿಯೆಂದು ಇತರ ಮಹಿಳೆಯ ಪಾಸ್ ಪೋರ್ಟ್ ಮತ್ತು ದಾಖಲೆಗಳನ್ನು ಬಳಸಿ ಬೇರೆ ದೇಶಕ್ಕೆ ಕಳಿಸಲು  ಪ್ರಯತ್ನಿಸಿದ್ದ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ವಲಸೆ ಅಧಿಕಾರಿಗಳು ಇಬ್ಬರನ್ನೂ ವಿಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರಿಸಿದರು.

“ಮಹಿಳೆಗೆ ಬಂಗಾಳಿ ಹೊರತುಪಡಿಸಿ ಬೇರೆ ಭಾಷೆ ತಿಳಿದಿರಲಿಲ್ಲ. ಆದ್ದರಿಂದ ನಾವು ಪ್ರಕರಣದಲ್ಲಿ ಯಾವುದೇ ಪರಿಶೀಲನೆ ನಡೆಸಲು ಸಾಧ್ಯವಾಗಿಲ್ಲ ಶನಿವಾರ ಭಾಷಾಂತರಕಾರನನ್ನು ವ್ಯವಸ್ಥೆ ಮಾಡಲಾಗಿ ಸಾಕಷ್ಟು ಸಹಕಾರದ ನಂತರ ಮಲೇಷಿಯಾದಲ್ಲಿ ಉತ್ತಮ ಉದ್ಯೋಗದ ಭರವಸೆ ನೀಡುವ ಮೂಲಕ ಅವನು ಅವಳನ್ನುಢಾಕಾ ಸಮೀಪದ ಅವಳ ಗ್ರಾಮದಿಂದ ಕರೆತಂದಿದ್ದನ್ನು ಬಹಿರಂಗಪಡಿಸಿದಳು. ಆರೋಪಿ ತನ್ನ ಕುಟುಂಬ ಸದಸ್ಯರಿಗೆ ಮುಂಗಡ ಹಣವನ್ನು ನೀಡಿದ್ದನೆಂದೂ ಆಕೆ ಬಹಿರಂಗಪಡಿಸಿದ್ದಾಳೆ"

"ಆರೋಪಿಯು ಯಾರಾದರೂ ಪ್ರಶ್ನಿಸಿದರೆ ಆಕೆ ತನ್ನ ಪತ್ನಿ ಎಂದು ಉತ್ತರಿಸುತ್ತಿದ್ದ. ಹಾಗೆಂದು ಹೇಳಲು ಆಕೆಗೂ ಸಹ ಪದೇ ಪದೇ ಪೀಡಿಸಿದ್ದ. "ಪೊಲೀಸ್ ಅಧಿಕಾರಿ ಹೇಳಿದರು. “ಆರೋಪಿಗಳು ಗೋವಾ ತಲುಪುವ ಮುನ್ನ ಪಶ್ಚಿಮ ಬಂಗಾಳ ಮತ್ತು ನಂತರ ಉತ್ತರ ಪ್ರದೇಶ ಬಿಹಾರ ಮೂಲಕ ರಸ್ತೆ ಮಾರ್ಗದಲ್ಲಿ ಆಗಮಿಸಿದ್ದಾರೆ. ಗೋವಾದಿಂದ ಅವರು ಬೆಂಗಳೂರಿಗೆ ವಿಮಾನದಲ್ಲಿ ಬಂದಿದ್ದಾರೆ.. ಅವರು ಜನವರಿ 1 ರಂದು ಬಾಂಗ್ಲಾದೇಶದಿಂದ ತಮ್ಮ ಪ್ರಯಾಣ ಪ್ರಾರಂಭಿಸಿದ್ದರು" ಎಂದು ಅವರು ಹೇಳಿದರು.

ರಶೀಬ್  ಪಾಸ್‌ಪೋರ್ಟ್ ಪರಿಶೀಲಿಸಿದಾಗ, ಅವನು ಆಗಾಗ್ಗೆ ಮಲೇಷಿಯಾಗೆ ಹೋಗುತ್ತಿರುವುದನ್ನು ಅವರು ಕಂಡುಕೊಂಡರು. ಅವನು ಹವ್ಯಾಸಿ ಅಪರಾಧಿ ಮಾನವ ಕಳ್ಳಸಾಗಣೆಯ ವಾಹಕಮತ್ತು ದೊಡ್ಡ ಕಳ್ಳಸಾಗಣೆ ದಂಧೆಯ ಭಾಗ ಎಂದು  ಆತ ಒಪ್ಪಿಕೊಂಡಿದ್ದಾನೆ. ಸದ್ಯ ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ಮಹಿಳೆಯನ್ನು ತಾತ್ಕಾಲಿಕವಾಗಿ ದೇವನಹಳ್ಳಿಯ ಉಜ್ವಲಮಹಿಳಾ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ. "ಅವಳ ನಿಜವಾದ ಗುರುತನ್ನು  ಬಹಿರಂಗಕ್ಕೆ ತರಲು ಅವಳ ಬಳಿ ಯಾವ ದಾಖಲೆಗಳಿಲ್ಲ. ನಾವು ಅವಳನ್ನು ವಾಪಸ್ ಕಳುಹಿಸಲು ಪಾಸ್ ಪೋರ್ಟ್ ನೊಂದಿಗೆಸಹಾಯ ಮಾಡಲು ಬಾಂಗ್ಲಾದೇಶ ರಾಯಭಾರ ಕಚೇರಿಯನ್ನು ಸಂಪರ್ಕಿಸುತ್ತಿದ್ದೇವೆ. ನಾವು ಅವಳನ್ನು ಸಂತ್ರಸ್ಥೆ ಎಂದು ಪರಿಗಣಿಸುತ್ತಿದ್ದೇವೆ ಮತ್ತು ಅವಳು ನಿರಪರಾಧಿ ”ಎಂದು ಅವರು ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com