ಬೆಂಗಳೂರು: ಕೋಟಿ ವೃಕ್ಷ ಆಂದೋಲನಕ್ಕೆ ಅಲಸೂರು ಕೆರೆಯಲ್ಲಿ ಚಾಲನೆ

ಬೆಂಗಳೂರನ್ನು ಉದ್ಯಾನ ನಗರಿಯನ್ನಾಗಿ ಪುನರ್ ಸ್ಥಾಪಿಸಲು ಮುಂದಾಗಿರುವ ಬಿಬಿಎಂಪಿ ಹಾಗೂ ಸಾರ್ವಜನಿಕರು ಶನಿವಾರ ಅಲಸೂರು ಕೆರೆ ವ್ಯಾಪ್ತಿಯಲ್ಲಿ ಅರಣ್ಯ ಬೆಳೆಸುವ ಕಾಯಕಕ್ಕೆ ಮುಂದಾಗಿದ್ದಾರೆ. ಅನೇಕ ನಾಗರಿಕರು ಮತ್ತು ಸರ್ಕಾರಿ ಅಧಿಕಾರಿಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಬೆಂಗಳೂರು: ಕೋಟಿ ವೃಕ್ಷ ಆಂದೋಲನಕ್ಕೆ ಅಲಸೂರು ಕೆರೆಯಲ್ಲಿ ಚಾಲನೆ
ಬೆಂಗಳೂರು: ಕೋಟಿ ವೃಕ್ಷ ಆಂದೋಲನಕ್ಕೆ ಅಲಸೂರು ಕೆರೆಯಲ್ಲಿ ಚಾಲನೆ

ಬೆಂಗಳೂರು: ಬೆಂಗಳೂರನ್ನು ಉದ್ಯಾನ ನಗರಿಯನ್ನಾಗಿ ಪುನರ್ ಸ್ಥಾಪಿಸಲು ಮುಂದಾಗಿರುವ ಬಿಬಿಎಂಪಿ ಹಾಗೂ ಸಾರ್ವಜನಿಕರು ಶನಿವಾರ ಅಲಸೂರು ಕೆರೆ ವ್ಯಾಪ್ತಿಯಲ್ಲಿ ಅರಣ್ಯ ಬೆಳೆಸುವ ಕಾಯಕಕ್ಕೆ ಮುಂದಾಗಿದ್ದಾರೆ. ಅನೇಕ ನಾಗರಿಕರು ಮತ್ತು ಸರ್ಕಾರಿ ಅಧಿಕಾರಿಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಕೆರೆ ಸುತ್ತಲೂ  1 ಕಿ.ಮೀ ಉದ್ದದವರೆಗೆ ಸುಮಾರು  8,000 ಸಸಿಗಳನ್ನು 2 ಸಾವಿರ ನಾಗರಿಕರು, ವಿವಿಧ ಎನ್‌ಜಿಒಗಳ ಸ್ವಯಂಸೇವಕರು, ಕಾರ್ಪೊರೇಟರ್‌ಗಳು, ಬಿಬಿಎಂಪಿ ಅಧಿಕಾರಿಗಳು ಮತ್ತು ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ಮತ್ತು ಮೇಯರ್ ಎಂ ಗೌತಮ್ ಕುಮಾರ್ ಅವರುಗಳು ನೆಟ್ಟು ಬೆಂಗಳೂರಿನ ವನಸಿರಿಯನ್ನು ಬೆಳೆಸಲು ಮುಂದಾಗಿದ್ದಾರೆ.

ನಗರವನ್ನು ಹಸಿರಾಗಿ ಮಾಡಲು "ಕೋಟಿ ವೃಕ್ಷ ಆಂದೋಲನ"ಸೈನ್ಯದ  ಸಂಸ್ಥಾಪಕ ಟಿ.ವಿ.ಸುರಭಿ, ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಬೆಂಗಳೂರಿನಾದ್ಯಂತ ಸಣ್ಣ ದಟ್ಟ ಕಾಡುಗಳನ್ನು ರಚಿಸುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com