ಬೆಂಗಳೂರು: ಶಾಸಕ ಜಮೀರ್ ಅಹಮದ್ ಖಾನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿರುವ ಹಿನ್ನಲೆಯಲ್ಲಿ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಮೀರ್ ಅವರ ಪಿ ಎ ಅಯೂಬ್ ಪಾಷಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಸ್ಟ್ ಪ್ರಕಟಿಸಿದ್ದಾರೆ ಎನ್ನಲಾದ ಶರತ್ ಐಟಿಐಹಾಗೂ ಋಷಿಕುಮಾರ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು. ಎನ್ ಆರ್ ಸಿ ಕಾಯ್ದೆ ಸಂಬಂಧ ಜಮೀರ್ ಅವರನ್ನು ಗುರಿಯಾಗಿಸಿಕೊಂಡು ಪೋಸ್ಟ್ ಹಾಕಲಾಗಿತ್ತು, ಈ ಪೋಸ್ಟ್ ವೈರಲ್ ಆಗಿತ್ತು,.
‘ಅವಹೇಳನಕಾರಿ ಪೋಸ್ಟ್‌ನಿಂದಾಗಿ ಶಾಸಕ ಜಮೀರ್ ಅಹಮದ್ ಖಾನ್ ಗೌರವಕ್ಕೆ ಧಕ್ಕೆ ಉಂಟಾಗಿದೆ. ಮುಸ್ಲಿಂ ಸಮುದಾಯದವರನ್ನು ಪ್ರಚೋದಿಸುವ ಪೋಸ್ಟ್ ಇದಾಗಿದೆ ಎಂದು ಅಯೂಬ್ ಪಾಷಾ ಆರೋಪಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿದರು.
Advertisement