ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿರುವ ಯಡವಟ್ಟಿನಿಂದ ಈ ವರ್ಷ 10 ನೇ ತರಗತಿ ವಿದ್ಯಾರ್ಥಿಗಳು ಎರಡು ಪೂರ್ವಸಿದ್ಧತಾ ಪರೀಕ್ಷೆಗಳನ್ನೆದುರಿಸಬೇಕಿದೆ.
ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್ಇಇಬಿ) ಫೆ.17-24 ವರೆಗೆ ಮೊದಲ ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲಿದೆ. ಈ ಬೆನ್ನಲ್ಲೇ ಮುಖ್ಯ ಉಪಾಧ್ಯಾಯರ ಸಂಘ (ಹೆಚ್ಎಂಎ) ಮಾರ್ಚ್ 2-7 ವರೆಗೆ ಎರಡನೇ ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೊಎಸಲಿದೆ. ಶುಕ್ರವಾರದಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಕಳೆದ 46 ವರ್ಷಗಳಿಂದ ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸುತ್ತಿದ್ದ ಮುಖ್ಯ ಉಪಾಧ್ಯಾಯರ ಸಂಘಕ್ಕೆ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿತ್ತು.
ಒಂದೇ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಕೆಎಸ್ಇಇಬಿಯಿಂದ ನಡೆಸಬೇಕೆಂಬ ಆದೇಶ ನೀಡಿದ ಕೆಲವೇ ದಿನಗಳಲ್ಲಿ, ಇತ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಸಹ ಮುಖ್ಯ ಉಪಾಧ್ಯಾಯರ ಸಂಘಕ್ಕೆ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿದೆ. ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಬೇಕೆಂಬ ಹೆಚ್ ಎಂಎ ಉದ್ದೇಶವನ್ನು ರಾಜ್ಯಾದ್ಯಂತ 2,000 ಶಾಲೆಗಳು ನ.17ರ ವೇಳೆಗೆ ಪ್ರಶ್ನಿಸಿದ್ದವು.
ಆದರೆ ಈ ವರ್ಷ ಹೆಚ್ಎಂಎ ಗೂ ಸಹ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಲಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿರುವ ಯಡವಟ್ಟಿನಿಂದ ಈ ವರ್ಷ 10 ನೇ ತರಗತಿ ವಿದ್ಯಾರ್ಥಿಗಳು ಎರಡು ಪೂರ್ವಸಿದ್ಧತಾ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ.
Advertisement