ಮಾರ್ಚ್ 5ಕ್ಕೆ ರಾಜ್ಯ ಬಜೆಟ್, ಕೃಷಿ ಕ್ಷೇತ್ರಕ್ಕೆ ಪ್ರಧಾನ ಆದ್ಯತೆ: ಸಿಎಂ ಬಿ.ಎಸ್.ಯಡಿಯೂರಪ್ಪ
ಶಿಕಾರಿಪುರ: ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡನೆಯಾಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶಿಕಾರಿಪುರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ತಾವು ಅಧಿಕಾರಕ್ಕೆ ಬಂದ ಮೇಲೆ ಇದು ಮೊದಲ ಬಜೆಟ್ ಆಗಿದೆ. ಮುಖ್ಯಮಂತ್ರಿಯಾಗಿ ಇದು ತಮ್ಮ ಏಳನೇ ಬಜೆಟ್ ಆಗಿರಲಿದೆ ಎಂದರು.
ಬಜೆಟ್ ತಯಾರಿ ನಡೆಯುತ್ತಿದೆ ಮತ್ತು ರೈತರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ಕೃಷಿ ಕ್ಷೇತ್ರಕ್ಕೆ ವಿಶೇಷ ಗಮನ ಹರಿಸಲಾಗುತ್ತದೆ. ಅಲ್ಲದೆ ಎಸ್‌ಸಿ / ಎಸ್‌ಟಿ ಮತ್ತು ಇತರ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಪ್ರೋತ್ಸಾಹ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.
"ಬಜೆಟ್ ಮಂಡಿಸಲು ಈಗಾಗಲೇ ಸಿದ್ಧತೆಗಳು ನಡೆಯುತ್ತಿದ್ದು, ಫೆಬ್ರವರಿ ಕೊನೆಯ ವಾರದೊಳಗೆ ಇದು ಅಂತಿಮ ಆಕಾರವನ್ನು ಪಡೆಯಲಿದೆ. " ಸಿಎಂ ಹೇಳಿದ್ದಾರೆ.
ಇನ್ನು ಸಚಿವ ಸಂಪುಟ ವಿಸ್ತರಣೆ ಬಗೆಗೆ ಕೇಳಿದಾಗ "ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಲಿದ್ದು ಶಾ ಅವರೊಂದಿಗೆ ಸಮಾಲೋಚಿಸಿದ ನಂತರ ವಷ್ಟೇ ಸಚಿವ ಸಂಪುಟ ವಿಸ್ತರಣೆ ಬಗೆಗೆ ತೀರ್ಮಾನಿಸಲಾಗುತ್ತದೆ" ಎಂದಿದ್ದಾರೆ.
ರಾಜೀನಾಮೆ ಕುರಿತು ಮಂಗಳವಾರ ನೀಡಿದ್ದ ಹೇಳಿಕೆ ಬಗೆಗೆ ಮುಖ್ಯಮಂತ್ರಿಗಳನ್ನು ಕೇಳಿದಾಗ ಅವರು ಪ್ರತಿಕ್ರಯಿಸಲು ನಿರಾಕರಿಸಿದ್ದಾರೆ. ಲಿಂಗಾಯತ ಸಮುದಾಯದ ಪಂಚಮಾಸಲಿ ಪಂಥಕ್ಕೆ ಮೀಸಲಾತಿ ನೀಡುವ ಕುರಿತು ಮಾತನಾಡಲು ಅವರು ನಿರಾಕರಿಸಿದ್ದಾರೆ.
ಹೂಡಿಕೆದಾರರ ಭೇಟಿಯಲ್ಲಿ ಪಾಲ್ಗೊಳ್ಳಲು ಜನವರಿ 19 ರಂದು ದಾವೋಸ್‌ಗೆ ತೆರಳಲಿದ್ದೇನೆ ಮತ್ತು ಜನವರಿ 23 ರೊಳಗೆ ಮರಳಲಿದ್ದೇನೆ ಎಂದು ಅವರು ಹೇಳಿದರು
ಸುದ್ದಿಗೋಷ್ಟಿಯ ವೇಳೆ ಸಿಎಂ ಅವರ ಪುತ್ರ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಸಹ ಉಪಸ್ಥಿತರಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ