ಶೃಂಗೇರಿ: ವಿದ್ಯಾರ್ಥಿನಿ ಅತ್ಯಾಚಾರ ಕೊಲೆ, ಇಬ್ಬರು ಕಾಮುಕರಿಗೆ ಗಲ್ಲು

 ಶ್ರೂಂಗೇರಿ ಸೇರಿದಂತೆ ಮಲೆನಾಡಿನ ಪರಿಸರವನ್ನೇ ಬೆಚ್ಚಿ ಬೀಳಿಸಿದ್ದ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಇಬ್ಬರು ಕಾಮುಕರಿಗೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ 
ಶೃಂಗೇರಿ: ವಿದ್ಯಾರ್ಥಿನಿ ಅತ್ಯಾಚಾರ ಕೊಲೆ, ಇಬ್ಬರು ಕಾಮುಕರಿಗೆ ಗಲ್ಲು
ಶೃಂಗೇರಿ: ವಿದ್ಯಾರ್ಥಿನಿ ಅತ್ಯಾಚಾರ ಕೊಲೆ, ಇಬ್ಬರು ಕಾಮುಕರಿಗೆ ಗಲ್ಲು
Updated on

ಶೃಂಗೇರಿ: ಶ್ರೂಂಗೇರಿ ಸೇರಿದಂತೆ ಮಲೆನಾಡಿನ ಪರಿಸರವನ್ನೇ ಬೆಚ್ಚಿ ಬೀಳಿಸಿದ್ದ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಇಬ್ಬರು ಕಾಮುಕರಿಗೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ

ಶೃಂಗೇರಿಯ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸಂತೋಷ್ ಮತ್ತು ಪ್ರದೀಪ್ಎಂಬ ಆರೋಪಿಗಳಿಗೆ ಚಿಕ್ಕಮಗಳೂರು ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.ಸತತ ನಾಲ್ಕು ವರ್ಷಗಳ ವಿಚಾರಣೆ ನಂತರ ಎಲ್ಲಾ ದಾಖಲೆಗಳನ್ನ ಪರಿಗಣಿಸಿ ನ್ಯಾಯಮೂರ್ತಿ ಉಮೇಶ್ ಎಂ ಅಡಿಗ ಅವರಿದ್ದ ಏಕಸದಸ್ಯ ಪೀಠ ಆರೋಪಿಗಳಿಗೆ ಮರಣದಂಡನೆ ವಿಧಿಸಿದೆ.

ಘಟನೆ ವಿವರ

2016ರ ಫೆಬ್ರವರಿ 16ರಂದು ಶೃಂಗೇರಿಯ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯಂದು ಪರೀಕ್ಷೆ ಮುಗಿಸಿಕೊಂಡು ಕಾಲು ದಾರಿ ಹಿಡಿದು ಗ್ರಾಮಕ್ಕೆ ಹಿಂತಿರುಗುತ್ತಿದ್ದ ವೇಳೆ ದೀಪ್ ಹಾಗೂ ಸಂತೋಷ್ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿದ್ದಾರೆ. ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕರು ಅವಳನ್ನು ವೇಲ್​ನಿಂದ ಆಕೆಯ ಕುತ್ತಿಗೆ ಬಿಗಿದು ಕೊಂದದ್ದಲ್ಲದೆ ಗಿಡಗಂಟೆಗಳಿಂದ ತುಂಬಿದ್ದ 50 ಅಡಿಯ ಪಾಳು ಬಾವಿಗೆ ಶವವನ್ನೆಸೆದು ಪರಾರಿಯಾಗಿದ್ದರು.

ಇತ್ತ ಕಾಲೇಜಿನಿಂದ ಮನೆಗೆ ಮರಳದ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚುವಂತೆ ಯುವತಿಯ ಪೋಷಕರು ಪೋಲೀಸರಿಗೆ ದೂರು ಕೊಟ್ಟಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೋಲೀಸರು ತನಿಖೆ ಚುರುಕಾಗಿಸಿದಂತೆ ಓರ್ವ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದರೆ ಇನ್ನೊಬ್ಬ ಪೋಲೀಸರಿಗೆ ಸಿಕ್ಕು ಬಿದ್ದಿದ್ದ. ಇನ್ನು ಈ ಇಬ್ಬರ ವಿರುದ್ಧ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ಮಾತ್ರವಲ್ಲದೆ ಇನ್ನೂ ಹಲವು ಪ್ರಕರಣಗಳಿರುವುದು ಪತ್ತೆಯಾಗಿತ್ತು.

4 ವರ್ಷಗಳಿಂದ ಈ ಪ್ರಕರಣದ ವಿಚಾರ ನಡೆದು ಇಂದು ಮರಣದಂಡನೆ ಶಿಕ್ಷೆ ಪ್ರಕಟವಾಗಿದೆ. ಸಂತ್ರಸ್ಥ ಯುವತಿಯ ಪರ ಹಿರಿಯ ವಕೀಲ ವಿ.ಜಿ. ಯಲಕೇರಿ ವಾದ ಮಾಂಡಿಸಿದ್ದರು.

ಇನ್ನು ಮರಣದಂಡನೆ ತೀರ್ಪು ಪ್ರಕಟವಾಗುತ್ತಿದ್ದಂತೆ ವಿದ್ಯಾರ್ಥಿನಿಯ ತಂದೆ ಮಾದ್ಯಮದೆದುರು ಮಾತನಾಡಿ ಮಗಳನ್ನು ನೆನೆದು ಕಣ್ಣೀರು ಗೆರೆದಿದ್ದಾರೆ, "ಇಂದು ನಾವು ಕಣ್ತುಂಬ ನಿದ್ರೆ ಮಾಡುತ್ತೇವೆ. ನನಗೆ ತೃಪ್ತಿಯಾಗಿದೆ.ಕಳೆದ ನಾಲ್ಕು ವರ್ಷದಿಂದ ನಾವು ಸರಿಯಾಗಿ ಊಟ, ನಿದ್ರೆ ಮಾಡಿಲ್ಲ. ಇಂದು ನೆಮ್ಮದಿಯಾಗಿದೆ. ನಮ್ಮ ಸ್ಥಿತಿ ಇನ್ನಾರಿಗೂ ಬರಬಾರದು" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com