ಯಲ್ಲಾಪುರದಲ್ಲಿ ವಶಪಡಿಸಿಕೊಂಡ ಶ್ರೀಗಂಧದೊಂದಿಗೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ
ರಾಜ್ಯ
ಉ.ಕ: ಯಲ್ಲಾಪುರದಲ್ಲಿ ಶ್ರೀಗಂಧ ಕಳ್ಳಸಾಗಣೆದಾರರ ಬಂಧನ, ಇಬ್ಬರು ಸೆರೆ
ಅಂತಾರಾಜ್ಯ ಶ್ರೀಗಂಧ ಕಳ್ಳರನ್ನು ಬಂಧಿಸಿದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಅರಣ್ಯ ವಿಭಾಗ ಪೊಲೀಸರು 150 ಕೆಜಿ ಶ್ರೀಗಂಧ ಮತ್ತು ಅವುಗಳನ್ನು ಸಾಗಿಸಲು ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಯಲ್ಲಾಪುರ: ಅಂತಾರಾಜ್ಯ ಶ್ರೀಗಂಧ ಕಳ್ಳರನ್ನು ಬಂಧಿಸಿದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಅರಣ್ಯ ವಿಭಾಗ ಪೊಲೀಸರು 150 ಕೆಜಿ ಶ್ರೀಗಂಧ ಮತ್ತು ಅವುಗಳನ್ನು ಸಾಗಿಸಲು ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀಗಂಧ ಕದ್ದು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಯಲ್ಲಾಪುರದ ಮಂಚಿಕೇರಿ ಬಳಿ ವಾಹನವನ್ನು ಬೆನ್ನಟ್ಟಿಕೊಂಡು ಹೋಗಿ ಹಿಡಿದಿದ್ದಾರೆ.
ನಿಖರ ಮೂಲಗಳಿಂದ ಮಾಹಿತಿ ಪಡೆದು ಇಬ್ಬರು ಶಂಕಿತರ ಮೇಲೆ ಕಣ್ಣಿಟ್ಟು ಅವರನ್ನು ತುಮಕೂರಿನ ಶಿರಾ ಬಳಿ ಬೆನ್ನಟ್ಟಿಕೊಂಡು ಹೋದೆವು. ನಂತರ ವಾಹನ ವಶಪಡಿಸಿಕೊಂಡು 15 ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧ, ವಾಹನ ಮತ್ತು ಇತರ ವಸ್ತುಗಳು ಸೇರಿ 25 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಗೋಪಾಲಕೃಷ್ಣ ತಿಳಿಸಿದರು.
ಹಾಸನದ ಇಕ್ಬಾಲ್ ಮತ್ತು ತುಮಕೂರಿನ ದೇವರಾಜ್ ಆರೋಪಿಗಳಾಗಿದ್ದಾರೆ.


