ಮಗನಂತೆ ಸಾಕಿದ್ದವನೇ ಎದೆಗೆ ಚೂರಿ ಇಟ್ಟ! ಇದು ಬೆಳಗಾವಿ ತ್ರಿಬಲ್ ಮರ್ಡರ್ ಕೇಸ್ ರೋಚಕ ಕಥೆ

ಬೈಲಹೊಂಗಲ ತಾಲೂಕಿನ ದೊಡ್ಡವಾಡದಲ್ಲಿ ಕಳೆದ ಜನವರಿ 18ರಂದು ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮಗನಂತೆ ಸಾಕಿದ್ದವನೇ ಎದೆಗೆ ಚೂರಿ ಇಟ್ಟ! ಇದು ಬೆಳಗಾವಿ ತ್ರಿಬಲ್ ಮರ್ಡರ್ ಕೇಸ್ ರೋಚಕ ಕಥೆ
Updated on

ಬೆಳಗಾವಿ:  ಬೈಲಹೊಂಗಲ ತಾಲೂಕಿನ ದೊಡ್ಡವಾಡದಲ್ಲಿ ಕಳೆದ ಜನವರಿ 18ರಂದು ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಜ.18ರಿಂದ 19ರ ಬೆಳಗ್ಗೆ ದೊಡ್ಡವಾಡ ಗ್ರಾಮದ ರಾಮಲಿಂಗೇಶ್ವರ ಓಣಿಯ ಮನೆಯೊಂದರಲ್ಲಿ ಮಲಗಿದ್ದ ಶಿವಾನಂದ ಬಸವಂತಪ್ಪ ಅಂದಾನಶೆಟ್ಟಿ (60), ಅವರ ಎರಡನೇ ಹೆಂಡತಿ ಶಾಂತವ್ವಾ (40) ಹಾಗೂ ಅವರ ಮಗ ವಿನೋದ (26) ಎಂಬವರನ್ನು ಮಾರಕಾಯುಧಗಳಿಂದ ತಲೆ, ಮುಖಕ್ಕೆ ಹಲ್ಲೆ‌ ನಡೆಸಿ ಕೊಲೆ‌ ಮಾಡಲಾಗಿತ್ತು.

ಪ್ರಕರಣದ ಕುರಿತು ಬೆಳಗಾವಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಜಮೀನು ವಿವಾದ ಸಂಬಂಧ ಈ ಕೊಲೆ ನಡೆದಿತ್ತು. ತ್ರಿವಳಿ ಕೊಲೆ ಮಾಡಿದ್ದ ಆರೋಪಿಗಳ ಬಂಧನಕ್ಕಾಗಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು ಎಂದರು.

ಬಂಧಿತರನ್ನು ಮುಖ್ಯ ಆರೋಪಿ ಶಿವಪ್ಪ ಬಸಪ್ಪ ಭಗವಂತನವರ್, ಸಹಾಯಕರಾಗಿದ್ದ ಗೋವಿಂದ ಶಿ ಸಂಗೊಳ್ಳಿ, ಬಸವಂತಪ್ಪ ಆನಂದಕಟ್ಟಿ, ಮಲ್ಲಿಕಾರ್ಜುನ ಆನಂದಕಟ್ಟಿ ಎಂದು ಗುರುತಿಸಲಾಗಿದೆ

ಘಟನೆ ವಿವರ

ಕೊಲೆಯಾಗಿರ್ಯುವ ಶಿವಾನಂದ ಆನಂದಕಟ್ಟಿಗೆ ಮೊದಲೊಂದು ವಿವಾಹವಾಗಿದ್ದು ಆಕೆಗೆ ಮಕ್ಕಳಾಗಿರಲಿಲ್ಲ.ಇದರಿಂದ ಅವರು ಇಬ್ಬರು ಮಕ್ಕಳಿರುವ ವಿಧವೆಯನ್ನು ಮರುವಿವಾಹವಾಗಿದ್ದರು.ಶಾಂತವ್ವ ಎಂಬಾಕೆಯನ್ನು ಶಿವಾನಂದ ಎರಡನೇ ವಿವಾಹವಾಗಿದ್ದರು.ದಂಪರಿಗಳು ಒಟ್ತಾಗಿ ಜೀವನ ನಡೆಸುತ್ತಿದ್ದದ್ದಲ್ಲದೆ ಶಾಂತವ್ವಳ ಮೊದಲ ಪತಿಯ ಇಬ್ಬರು ಮಕ್ಕಳೂ ಸಹ ಶಿವಾನಂದ ದಂಪತಿಗಳೊಡನೆ ಇದ್ದರು.

ಇನ್ನು ಶಿವಾನಂದ ತಮಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ತಮ್ಮ ಅಕ್ಕನ ಮಗನಾಗಿದ್ದ ಶಿವಪ್ಪ ಭಗವಂತನವರ್ ನನ್ನು ಮನೆಯಲ್ಲಿ ಸಾಕುಮಗನಂತೆ ಇರಿಸಿಕೊಂಡಿದ್ದರು. ಹದಿನೈದು ವರ್ಷ ಕಾಲ ಆತನನ್ನು ಮನೆ ಮಗನಂತೆ ಸಾಕಿದ್ದರು.

ಇನ್ನು ಶಿವಾನಂದ ತಮ್ಮ ಪುತ್ರ ವಿನೋದ್ (ಶಾಂತವ್ವಳ ಮೊದಲ ಪತಿ ಮಗ) ಮದುವೆಗೆ ನಿಶ್ಚಯಿಸಿದ್ದ್ರು ಇದೇ ಜನವರಿ ೩೦ರಂದು ವಿವಾಹ ಇದ್ದಿತ್ತು. ಇದ್ರ ನಡುವೆ ಶಿವಾನಂದ , ಪುತ್ರ ವಿನೋದ್ ಗೆ ಮದುವೆ ನಂತರ ತನ್ನ ಹನ್ನೆರಡು ಎಕರೆ ಆಸ್ತಿಯನ್ನು ನೀಡಲು ಮುಂದಾಗಿದ್ದಾರೆ. ಇದರಿಂದ ಶಿವಾನಂದ್ ಅಕ್ಕನ ಮಗ ಶಿವಪ್ಪ ಆಕ್ರೋಶಿತನಾಗಿದ್ದ. 

ಕೊಲೆಯ ಹಿಂದಿನ ರಾತ್ರಿ ವಿನೋದ್ ಹಾಗೂ ಶಿವಪ್ಪ ಒಂದೇ ಕೋಣೆಯಲ್ಲಿ ಒಟ್ತಾಗಿ ಮಲಗಿದ್ದರು. ಆ ವೇಳೆ ನಡುರಾತ್ರಿ ಎದ್ದ ಶಿವಪ್ಪ ವಿನೋದ್ ಹಾಗೂ ಶಿವಾನಂದ, ಶಾಂತವ್ವ ದಂಪತಿಗಳನ್ನು ಕೊಚ್ಚಿ ಕೊಂದು ಪರಾರಿಯಾಗಿದ್ದ.  ಇನ್ನು ಆರೋಪಿ ಶಿವಪ್ಪ ಕೃತ್ಯ ನಡೆಸಲು ಆತನ ಮೂವರು ಸಂಬಂಧಿಗಳು ಸಹ ಪ್ರ್ಚೋದನೆ ನೀಡಿದ್ದರು. ಇದಕ್ಕೆ ಹಿಂದೆ ಸಹ ಮನೆ ಪಕ್ಕದ ಜಾಗದ ವಿಚಾರವಾಗಿ ಶಿವಾನಂದ್-ಶಾಂತವ್ವ ಪುತ್ರ ವಿನೋದ್ ಹಾಗೂ ಈ ಮೂವರ ನಡುವೆ ನಡೆದಿದ್ದ ಜಗಳ ಕಾರಣವಾಗಿದೆ. ಎರಡು ವರ್ಷದ ಹಿಂದೆ ಈ ಮೂವರೂ ವಿನೋದ್ ಹತ್ಯೆಗೆ ಸಹ ಪ್ರಯತ್ನಿಸಿದ್ದರು.ಆದರೆ ಸ್ವಲ್ಪದರಲ್ಲಿ ವಿನೋದ್ ಕೊಲೆಯಾಗುವುದರಿಂದ ತಪ್ಪಿಸಿಕೊಂಡಿದ್ದ.  ಆದರೆ ಈ ಬಾರಿ ಶಿವಪ್ಪನನ್ನು ಪ್ರಚೋದಿಸಿದ ಆರೋಪಿಗಳು ಹದಿನೈದು ವರ್ಷಗಳಿಂದ ಸಾಕಿದ್ದವರನ್ನೇ ಹತ್ಯೆ ಮಾಡಲು ಕಾರಣವಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com