
ನಿಪ್ಪಾಣಿ;: ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಕಳ್ಳನನ್ನು ಬಂಧಿಸಿ ಆತನಿಂದ ೧.೭೮ ಕೋಟಿ ರೂಪಾಯಿ ಮೌಲ್ಯದ ವಾಹನಗಳನ್ನು ವಶೊಡಿಸಿಕೊಂಡ ಘಟನೆ ನಿಪ್ಪಾಣಿ ಯಲ್ಲಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಇಂದಿರಾ ನಗರ ನಿವಾಸಿ ಕಲ್ಲಪ್ಪ ಸುನೀಲ ಕದಮ (24) ಬಂಧಿತ ಆರೋಪಿಯಾಗಿದ್ದಾನೆ
ಆರೋಪಿಯಿಂದ ಎರಡು ಕಾರು ಒಂಭತ್ತು ಟಿಪ್ಪರ ಸೇರಿ ೧೩ ವಾಹನಗಳನ್ನು ಹಾಗೂ ವೆಲ್ಡಿಂಗ್ ಮತ್ತು ಪೇಂಟಿಂಗ್ ಮಶೀನ ವಶಪಡಿಸಿಕೊಂಡಿದ್ದು ಇವುಗಳ ಮೌಲ್ಯ ೧.೭೮ ಕೋಟಿಯಷ್ಟಾಗಿದೆ.
ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಕಳ್ಳತನ
ಬೆಳಗಾವಿ ಎಎಸ್.ಪಿ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಡಿಎಸ್ಪಿ ಮನೋಜ ಕುಮಾರ ನಾಯಕ್ ನೇತೃತ್ವದ ತಂಡದಲ್ಲಿ ನಿಪ್ಪಾಣಿ ಸಿ.ಪಿ.ಐ ಎಸ್.ಡಿ.ಸತ್ಯನಾಯಿಕ,ಪಿ.ಎಸ್.ಐ ಕುಮಾರ ಹಾಡಕರ ತಂಡ ರಚಿಸಿ ಕಳ್ಳನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಜಿಲ್ಲೆಯ ಹಿಂಡಲಗಾ ಕಾರ್ಯಾಗ್ರಹಕ್ಕೆ ರವಾನಿಸಲಾಗಿದ್ದು ಈ ಕುರಿತು ನಿಪ್ಪಾಣಿ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement