ಅದ್ದೂರಿ ಉಡುಗೊರೆಗಳ ಬದಲು ವನ್ಯಜೀವಿಗಳ ಚಿಕಿತ್ಸೆಗೆ ನೆರವು ಬೇಡಿದ ಟೆಕ್ಕಿ
ಅದ್ದೂರಿ ಉಡುಗೊರೆಗಳ ಬದಲು ವನ್ಯಜೀವಿಗಳ ಚಿಕಿತ್ಸೆಗೆ ನೆರವು ಬೇಡಿದ ಟೆಕ್ಕಿ

ಬೆಂಗಳೂರಿನಲ್ಲಿ ಹೀಗೊಂದು ಮಾದರಿ ವಿವಾಹ- ಅದ್ದೂರಿ ಉಡುಗೊರೆಗಳ ಬದಲು ವನ್ಯಜೀವಿಗಳ ಚಿಕಿತ್ಸೆಗೆ ನೆರವು ಬೇಡಿದ ಟೆಕ್ಕಿ

ಭಾನುವಾರ ಮದುವೆಯಾದ 29 ವರ್ಷದ ಐಟಿ ಉದ್ಯೋಗಿ ಶ್ರುತಿ ಪಾರ್ಥಸಾರಥಿ ತಮ್ಮ ಈ ಮಹತ್ವದ ದಿನವನ್ನು ಆಚರಿಸುವುದಕ್ಕೆ ಒಂದು ದೊಡ್ಡ ಉಡುಗೊರೆಯ ನಿರೀಕ್ಷೆಯಲ್ಲಿದ್ದರು. ಆದರೆ ಅದಾವುದೇ ಅದ್ದೂರಿ ಉಡುಗೊರೆಯಾಗಿರದೆ ತಮ್ಮ ಬಂಧು, ಬಾಂಧವರು ವನ್ಯಜೀವಿಗಳಿಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ನೆರವಾಗಬೇಕೆಂದು  ಆಕೆ ಬಯಸಿದ್ದಳು. ತನ್ನ ಮದುವೆಯ ಕಾರ್ಡ್‌ನಲ್ಲಿ, ಪೀಪಲ್ ಫಾರ್ ಅನಿಮಲ್ಸ್
Published on

ಬೆಂಗಳೂರು: ಭಾನುವಾರ ಮದುವೆಯಾದ 29 ವರ್ಷದ ಐಟಿ ಉದ್ಯೋಗಿ ಶ್ರುತಿ ಪಾರ್ಥಸಾರಥಿ ತಮ್ಮ ಈ ಮಹತ್ವದ ದಿನವನ್ನು ಆಚರಿಸುವುದಕ್ಕೆ ಒಂದು ದೊಡ್ಡ ಉಡುಗೊರೆಯ ನಿರೀಕ್ಷೆಯಲ್ಲಿದ್ದರು. ಆದರೆ ಅದಾವುದೇ ಅದ್ದೂರಿ ಉಡುಗೊರೆಯಾಗಿರದೆ ತಮ್ಮ ಬಂಧು, ಬಾಂಧವರು ವನ್ಯಜೀವಿಗಳಿಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ನೆರವಾಗಬೇಕೆಂದು  ಆಕೆ ಬಯಸಿದ್ದಳು. ತನ್ನ ಮದುವೆಯ ಕಾರ್ಡ್‌ನಲ್ಲಿ, ಪೀಪಲ್ ಫಾರ್ ಅನಿಮಲ್ಸ್ ವನ್ಯಜೀವಿ ಆಸ್ಪತ್ರೆ ಮತ್ತು ಪಾರುಗಾಣಿಕಾ ಕೇಂದ್ರಕ್ಕೆ ಹಣವನ್ನು ದಾನ ಮಾಡುವಂತೆ ಸಂಬಂಧಿಕರು ಮತ್ತು ಸ್ನೇಹಿತರನ್ನು ಆಕೆ ಕೇಳಿಕೊಂಡಿದ್ದರು.

ಸುಮಾರು ಮೂರು ತಿಂಗಳ ಹಿಂದೆ ಶ್ರುತಿ ಬನಶಂಕರಿಯಲ್ಲಿ ಗಾಯಗೊಂಡಿದ್ದ ಅಳಿಲೊಂದನ್ನು ಕಂಡಿದ್ದರು.ತಕ್ಷಣ  ಸಹಾಯಕ್ಕಾಗಿ ಪಿಎಫ್‌ಎ  ಅವರನ್ನು ಸಮ್ಪರ್ಕಿಸಿದ್ದಾರೆ. ಆಗ ಪಿಎಫ್‌ಎ ಸ್ವಯಂಸೇವಕನೊಬ್ಬ ತಕ್ಷಣ ಸ್ಥಳಕ್ಕೆ ಬಂದು ಅಳಿಲನ್ನು ಕಿತ್ಸೆಗಾಗಿ ಕರೆದೊಯ್ದನು. ಮೂರು ದಿನಗಳ ನಂತರ ಆ ಚಿಕ್ಕ ಅಳಿಲು ಹೇಗಿದೆ ಎಂದು ಪರೀಕ್ಷಿಸಲು ಶ್ರುತಿ ಆಸ್ಪತ್ರೆಗೆ ಹೋದರು,ಆಗ ಲ್ಲಿನ ಸಿಬ್ಬಂದಿ ಅದನ್ನು ಉತ್ತಮವಾಗಿ ಶುಶ್ರೂಷೆ ಮಾಡುತ್ತಿರುವುದು ಕಂಡು ಸಂತಸಗೊಂಡಿದ್ದಾರೆ.

ಶ್ರುತಿ ತಾವು ವಿವಾಹವಾಗಲು ನಿಶ್ಚಯಿಸುತ್ತಿರುವಾಗಲೇ ಪಿಎಫ್‌ಎಗೆ ಕರೆ ಮಾಡಿದ್ದಾರ್ರೆ ಹಾಗೆ ಆಸ್ಪತ್ರೆಯ ಹೊರಗೆ ಶಾಪ್ ತೆರೆಯಲು ಸಿದ್ದವೇ ಎಂದೂ ಕೇಳಿದ್ದಾರೆ.ಮತ್ತು ತಮ್ಮ ವಿವಾಹ ಕಾರ್ಯಕ್ರಮದಲ್ಲಿ ಬರುವ ಅತಿಥಿಗಳು ತಮ್ಮ ಇಷ್ಟದ ಮೊತ್ತವನ್ನು ಆಸ್ಪತ್ರೆಗೆ ದಾನ ನೀಡಬಹುದು ಎಂದು ಹೇಳಿದ್ದಾಳೆ. ಶ್ರುತಿಯವರ ಈ ಕಾರ್ಯಯೋಜನೆಯು ಆಸ್ಪತ್ರೆಯವರಿಗೆ ಸಂತಸ ಮೂಡಿಸಿದೆ.

“ನಾನು ಯಾವಾಗಲೂ ಪ್ರಾಣಿ ಪ್ರೇಮಿಯಾಗಿದ್ದೇನೆ. ನನ್ನಲ್ಲಿ ಮೂರು ನಾಯಿಗಳಿವೆ. ಅವೆಲ್ಲವನ್ನೂ ರಕ್ಷಿಸಿದ್ದೇನೆ. ಕೆಲವು ಹಳೆಯ ನಾಯಿಗಳು ಮೂರು ಮರಿಗಳ ಮೇಲೆ ದಾಳಿ ಮಾಡುತ್ತಿದ್ದವು ಮತ್ತು ನಾವು ಅದನ್ನು  ರಕ್ಷಿಸಿ ನಮ್ಮೊಂದಿಗೆ ಇಟ್ಟುಕೊಂಡಿದ್ದೇವೆ. ಈಗ, ಮೂವರೂ ಆರು ವರ್ಷ ವಯಸ್ಸಿನವಾಗಿದ್ದು  ನಾನು ಪ್ರಾಣಿಗಳಿಗಾಗಿ ಏನನ್ನಾದರೂ ಮಾಡಲು ಬಯಸಿದ್ದೇನೆ ಮತ್ತು ಇದಕ್ಕಿಂತ ಉತ್ತಮವಾದ ದಾರಿ ಯಾವುದು? ಇದನ್ನು ಮಾಡುವುದರಿಂದ ಜನರಲ್ಲಿ ಜಾಗೃತಿ ಮೂಡಿಸಬಹುದು ”ಶ್ರುತಿ ಹೇಳಿದ್ದಾರೆ.

ಶ್ರುತಿ ತನ್ನ ಮದುವೆಯ ಕಾರ್ಡ್ ಅನ್ನು ಮುದ್ರಿಸುವ ವೇಳೆ : “ನಮಗೆ ಯಾವುದೇ ಉಡುಗೊರೆಗಳ ಅಗತ್ಯವಿಲ್ಲ, ದಯವಿಟ್ಟು ನಮಗೆ ಆಶೀರ್ವಾದ ನೀಡಿ. ವನ್ಯಜೀವಿ ಮತ್ತು  ಪ್ರಕೃತಿ ಮಾತೆಯ ಸಂರಕ್ಷಣೆಗೆ  ಸಹಾಯ ಮಾಡಲು, ನಾವು ವಿವಾಹದ ವೇಳೆ ಪಿಎಫ್‌ಎಗಾಗಿ ನಿಧಿಸಂಗ್ರಹವನ್ನು ಆಯೋಜಿಸಿದ್ದೇವೆ, ಅದಕ್ಕೆ ಕೊಡುಗೆ ನೀಡಿ. ” ಎಂಬ ಸಾಲನ್ನು ಹಾಕಿಸಿದ್ದರು.ಮದುವೆಯ ದಿನದಂದು, ಅತಿಥಿಗಳು ಸ್ಟಾಲ್ ಒಂದನ್ನು ಕಂಡಾಗ ಆಶ್ಚರ್ಯಚಕಿತರಾದರು. ಅನೇಕರು ಪಿಎಫ್‌ಎ ಸ್ವಯಂಸೇವಕರೊಂದಿಗೆ ಮಾತನಾಡಿದರು ಮತ್ತು ಆಸ್ಪತ್ರೆಗೆ ಕೊಡುಗೆ ನೀಡಿದ್ದರು."ಸ್ಟಾಲ್ ನೋಡಿದ ನಂತರ ಅನೇಕರು ದಾನ ಮಾಡಲು ಸಂತೋಷಪಟ್ಟರು. ಈ ಕೊಡುಗೆ ಅನೇಕ ಪ್ರಾಣಿಗಳಿಗೆ ಸಹಾಯ ಮಾಡುತ್ತದೆ. ಇದಲ್ಲದೆ, ನನ್ನ ಅನೇಕ ಸಂಬಂಧಿಕರು ತಮ್ಮ ವಿವಾಹಗಳಲ್ಲಿಯೂ ಇದನ್ನು ಬಯಸುತ್ತಾರೆ, "ಎಂದು ಅವರು ಹೇಳಿದರು.

ಶ್ರುತಿಯ ತಾಯಿ ಮತ್ತು ಅವರ ಸಹೋದ್ಯೋಗಿಗಳು ಆಸ್ಪತ್ರೆಗೆ 25 ಸಾವಿರ ರೂ ನೀಡಿದ್ದರು. ಅಲ್ಲದೆ ವಿವಾಹದ ದಿನ ಹೆಚ್ಚುವರಿಯಾಗಿ  17,000 ರೂ.ಸಂಗ್ರಹಿಸಲಾಗಿತ್ತು. , ಖಾಸಗಿಯಾಗಿ ನಡೆಸುವ ಪಾರುಗಾಣಿಕಾ ಸೇವೆಯಾದ ವಾಯ್ಸ್ ಆಫ್ ಸ್ಟ್ರೇ ಡಾಗ್ಸ್‌ಗಾಗಿ ಶ್ರುತಿ ಆನ್‌ಲೈನ್‌ನಲ್ಲಿ ಹಣವನ್ನು ಸಂಗ್ರಹಿಸಿದ್ದರು, ಅಲ್ಲಿ ಅವರು ಕ್ರೌಡ್‌ಫಂಡಿಂಗ್ ಮೂಲಕ ಇನ್ನೂ 25 ಸಾವಿರ ರೂ.ಕಲೆ ಹಾಕಿದ್ದರು.

ಪಿಎಫ್‌ಎದ ಜನರಲ್ ಮ್ಯಾನೇಜರ್ ಕರ್ನಲ್ (ಡಾ) ನವಾಜ್ ಷರೀಫ್,  ಮಾತನಾಡಿ , “ಇದು ಶ್ರುತಿಯವರ ಕಡೆಯಿಂದ ಹೃದಯಸ್ಪರ್ಶಿ ತೀರ್ಮಾನವಾಗಿದೆ. ಬೆಂಗಳೂರಿನಲ್ಲಿ ಜನ ಇಂತಹಾ ಕಾರ್ಯಕ್ಕೆ ಹಣ ನೀಡುವುದು ಕಡಿಮೆ. ಈಗ, ಶ್ರುತಿ ಅನೇಕ ಜನರಿಗೆ ಸ್ಫೂರ್ತಿ ನೀಡಿದ್ದಾರೆ, ನಮ್ಮ ಸ್ವಂತ ಉದ್ಯೋಗಿಯೊಬ್ಬರು ಸಹ ಅವರ ನಿಶ್ಚಿತಾರ್ಥಕ್ಕೆ ಇದೇ ರೀತಿಯ ಏರ್ಪಾಡು ಮಾಡಲು ಯೋಜಿಸಿದ್ದಾರೆ. ಎಲ್ಲಾ ಹಣವನ್ನು ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು. ” ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com