ಕೋವಿಡ್-19: 200 ಮಹಿಳೆಯರ ಸ್ಟಾರ್ಟ್ ಅಪ್ ನಿಂದ ಮಾಸ್ಕ್ ತಯಾರಿ, ಬೇಡಿಕೆಯ ಮಹಾಪೂರ!

ಅವಳಿನಗರ ಹುಬ್ಬಳ್ಳಿ-ಧಾರವಾಡದಲ್ಲಿ 200 ಮಹಿಳೆಯರನ್ನೊಳಗೊಂಡ ಸ್ಟಾರ್ಟ್ ಅಪ್ ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದು, ಈಗ ಮಾಸ್ಕ್ ಪೂರೈಕೆಗಾಗಿ ಭರಪೂರ ಬೇಡಿಕೆ ಬರಲಾರಂಭಿಸಿದೆ. 
ಕೋವಿಡ್-19:  200 ಮಹಿಳೆಯರ ಸ್ಟಾರ್ಟ್ ಅಪ್ ನಿಂದ ಮಾಸ್ಕ್ ತಯಾರಿ, ಬೇಡಿಕೆಯ ಮಹಾಪೂರ!
ಕೋವಿಡ್-19:  200 ಮಹಿಳೆಯರ ಸ್ಟಾರ್ಟ್ ಅಪ್ ನಿಂದ ಮಾಸ್ಕ್ ತಯಾರಿ, ಬೇಡಿಕೆಯ ಮಹಾಪೂರ!
Updated on

ಅವಳಿನಗರ ಹುಬ್ಬಳ್ಳಿ-ಧಾರವಾಡದಲ್ಲಿ 200 ಮಹಿಳೆಯರನ್ನೊಳಗೊಂಡ ಸ್ಟಾರ್ಟ್ ಅಪ್ ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದು, ಈಗ ಮಾಸ್ಕ್ ಪೂರೈಕೆಗಾಗಿ ಭರಪೂರ ಬೇಡಿಕೆ ಬರಲಾರಂಭಿಸಿದೆ. 

ಕೋವಿಡ್-19 ರ ಪರಿಣಾಮವಾಗಿ ಕೆಲಸ ಕಳೆದುಕೊಂಡು, ವೇತನ ಕಡಿತ ಎದುರಿಸುತ್ತಿರುವ ಗಂಡಸರಿಗೆ ಮನೆ ನಿರ್ವಹಿಸಲು ನೆರವಾಗಲು ಈ ಮಹಿಳೆಯರು ಮಾಸ್ಕ್ ತಯಾರಿಕೆಯ ಮಾರ್ಗ ಕಂಡುಕೊಂಡಿದ್ದರು. ಮಾಸ್ಕ್ ತಯಾರಿಸಲು ಚಿಂತನೆ ನಡೆಸಿದ್ದ ಮಹಿಳೆಯರನ್ನು ಒಗ್ಗೂಡಿಸಿ, ಯೋಜನೆ ಸ್ಪಷ್ಟ ರೂಪ ಪಡೆಯುವುದಕ್ಕೆ ಸಹಕಾರಿಯಾಗಿದ್ದು ದೇಶಪಾಂಡೆ ಫೌಂಡೇಷನ್.

ಮಾಸ್ಕ್ ಗಳಿಗೆ ಬೇಡಿಕೆ ಹೆಚ್ಚಿದ್ದು ಈಗ ಸ್ಟಾರ್ಟ್ ಅಪ್ ನಲ್ಲಿರುವ ಮಹಿಳೆಯರು ತಿಂಗಳಿಗೆ 9,000 ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯುವುದಕ್ಕಾಗಿ ಈ ಮಹಿಳೆಯರ ಸ್ಟಾರ್ಟ್ ಅಪ್ ಶೀಘ್ರವೇ ಸ್ವಾವಲಂಬಿ ಸಖಿ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಹೆಸರಿನಲ್ಲಿ ನೋಂದಣಿಯೂ ಆಗಲಿದೆ.

ದೇಶಪಾಂಡೆ ಫೌಂಡೇಷನ್ ನ ಸಣ್ಣ ಉದ್ಯಮಶೀಲತೆ ಯೋಜನೆ ವಿಭಾಗದ ಉಪ ವ್ಯವಸ್ಥಾಪಕರಾದ ರಾಜೇಶ್ವರಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, 200 ಮಹಿಳೆಯರಿಗೆ ಡಬ್ಲ್ಯೂಹೆಚ್ಒ ಪ್ರಮಾಣಿಕೃತ ಮಾನದಂಡದ ಪ್ರಕಾರ ಮಾಸ್ಕ್ ತಯಾರಿಕೆಗೆ ತರಬೇತಿ ನೀಡಲಾಗಿದೆ. ಇತ್ತೀಚೆಗಷ್ಟೇ ಬೆಂಗಳೂರು ಮೂಲದ ಸಂಸ್ಥೆಯಿಂದ ಶಾಲಾ ಮಕ್ಕಳಿಗಾಗಿ ಕಾರ್ಟೂನ್ ಚಿತ್ರಗಳಿರುವ 10,000 ಮಾಸ್ಕ್ ಗಳ ಪೂರೈಕೆಗೆ ಬೇಡಿಕೆ ಬಂದಿತ್ತು. ಜೊತೆಗೆ ವಿವಿಧ ಕಂಪನಿಗಳು ಹಾಗೂ ಸಂಸ್ಥೆಗಳಿಗೆ ಒಂದು ಲಕ್ಷ ಮಾಸ್ಕ್ ಪೂರೈಕೆಯ ಬೇಡಿಕೆಯೂ ಬಂದಿದೆ ಎಂದು ತಿಳಿಸಿದ್ದಾರೆ. 

"ಹತ್ತಿ ಹಾಗೂ ಖಾದಿ ಬಟ್ಟೆಗಳನ್ನು ಸ್ಥಳೀಯವಾಗಿ ಖರೀದಿಸುತ್ತೇವೆ. ಸೋಡಿಯಂ ಹೈಪೋಕ್ಲೋರೈಟ್ ಜೊತೆಯಲ್ಲಿ ಬಟ್ಟೆಗಳನ್ನು ಮೊದಲ ಹಂತದ ಪ್ರಕ್ರಿಯೆಗಳಿಗಾಗಿ ಕಳಿಸಿಕೊಡಲಾಗುತ್ತದೆ. ಮೊದಲ ಹಂತದ ಪ್ರಕ್ರಿಯೆ ನಡೆದ ಬಳಿಕ ಎರಡನೇ ತಂಡಕ್ಕೆ ಬಟ್ಟೆಗಳನ್ನು ಅಳತೆಗೆ ಅನುಗುಣವಾಗಿ ಕತ್ತರಿಸಿ ಹೊಲೆಯುವ ಕೆಲಸಕ್ಕೆ ಮತ್ತೊಂದು ತಂಡಕ್ಕೆ ಕಳಿಸಲಾಗುತ್ತದೆ. ಮಾಸ್ಕ್ ಗಳನ್ನು ಹೊಲಿದ ನಂತರ ಅವುಗಳನ್ನು ದೇಶಪಾಂಡೆ ಫೌಂಡೇಶನ್ ಸ್ಟಾರ್ಟ್ ಅಪ್ ಸೆಂಟರ್ ಗೆ ಸ್ಯಾನಿಟೈಸೇಷನ್ ಗಾಗಿ ಕಳಿಸಲಾಗುತ್ತದೆ. ಅಲ್ಲಿಂದ ಸಿಗುವ ಮಾಸ್ಕ್ ಗಳನ್ನು ಗ್ರಾಹಕರು ನೇರವಾಗಿ ಕಳಿಸಲಾಗುತ್ತದೆ" ಎಂದು ರಾಜೇಶ್ವರಿ ತಿಳಿಸಿದ್ದಾರೆ.

ಪ್ರಾರಂಭದ ದಿನಗಳಲ್ಲಿ ಮಾಸ್ಕ್ ಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು. ಗುಣಮಟ್ಟದ ಬಗ್ಗೆ ಭರವಸೆ ಮೂಡಿದ ಬಳಿಕ ಈಗ ಭರಪೂರ ಬೇಡಿಕೆಗಳು ಬರಲಾರಂಭಿಸಿದ್ದು, ಈಗ ಪ್ರತಿ ಮಾಸ್ಕ್ ಗೆ 15 ರೂಪಾಯಿ ದರ ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com