ಬೆಳಗಾವಿ: ಬಂಧಿತ ಕಳ್ಳನಿಗೆ ಕೊರೋನಾ ಸೋಂಕು; ಪೊಲೀಸ್ ಠಾಣೆ ಸೀಲ್ ಡೌನ್

ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದ ಆರೋಪಿಯೊಬ್ಬನಿಗೆ ಕೊರೋನಾ ಸೋಂಕು ಇರೋದು ದೃಢಪಟ್ಟಿದ್ದು. ಕ್ಯಾಂಪ್ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಿ, ಪಿಎಸ್ಐ ಸೇರಿ 11 ಜನ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದ ಆರೋಪಿಯೊಬ್ಬನಿಗೆ ಕೊರೋನಾ ಸೋಂಕು ಇರೋದು ದೃಢಪಟ್ಟಿದ್ದು. ಕ್ಯಾಂಪ್ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಿ, ಪಿಎಸ್ಐ ಸೇರಿ 11 ಜನ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ.

ಜೂನ್ ತಿಂಗಳ 27ರಂದು ವಿಜಯನಗರದ ಬಳಿಯ  ಜ್ಯೂವೆಲರಿ ಅಂಗಡಿಗೆ ಚಿನ್ನಾಭರಣ ಖರೀದಿಗೆ ವ್ಯಕ್ತಿಯೊಬ್ಬ ಬಂದಿದ್ದನು. ಚಿನ್ನಾಭರಣ ತೋರಿಸಲು ಅಂಗಡಿ ಮಾಲೀಕನಿಗೆ ಹೇಳಿದ್ದಾನೆ. ಅದರಂತೆ ನಾಲ್ಕೈದು ಆಭರಣವನ್ನು ನೋಡಿದ ನಂತರ ಅಂಗಡಿ ಮಾಲೀಕನಿಗೆ ಪಿಸ್ತೂಲ್ ತೋರಿಸಿ ಹೆದರಿಸಿ, ಆಭರಣ ಕಳ್ಳತನ ಮಾಡಿದ್ದನು.

ಕದ್ದ ಚಿನ್ನವನ್ನು ಮಾರಾಟ ಮಾಡಲು ಹೋದಾಗ ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು, ಕ್ಯಾಂಪ್ ಠಾಣೆ ಪೊಲೀಸರು ಆತನನ್ನು ಠಾಣೆಯಲ್ಲಿಯೇ ಇರಿಸಿಕೊಂಡಿದ್ದರು. ಅಣದಾದ ನಂತರ ಅದೇ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸುದ್ದಿಗೋಷ್ಠಿ ನಡೆಸಿ ಆರೋಪಿ ಬಗ್ಗೆ ಮಾಹಿತಿ ನೀಡಿದ್ದರು.

ಆರೋಪಿಯ ವರದಿ ಇಂದು ಬಂದಿದ್ದು, ಕೊರೋನಾ ಪಾಸಿಟಿವ್ ಇರೋದು ಖಚಿತವಾಗಿದ್ದು, ಕ್ಯಾಂಪ್ ಪೊಲೀಸ್ ಠಾಣೆಯ ಸಿಬ್ಬಂದಿಗೆ ಆತಂಕ ಹುಟ್ಟಿಸಿದೆ. ಠಾಣೆಯ ಓರ್ವ   ಪಿಎಸ್ಐ ಸೇರಿ ಪೊಲೀಸ್ ಸಿಬ್ಬಂದಿಯನ್ನು  ಕ್ವಾರಂಟೈನ್ ಒಳಪಡಿಸಲಾಗಿದೆ. ಜತೆಗೆ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಸ್ಯಾನಿಟೈಸ್  ಮಾಡಲಾಗಿದೆ.

ಪೊಲೀಸ್ ಪೇದೆ ಕುಟುಂಬಸ್ಥರಿಗೂ ಇದು ಆತಂಕ ತಂದಿದೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯ 29 ವರ್ಷದ ನರ್ಸ್ ಗೆ  ಕೊರೋನಾ ಪಾಸಿಟಿವ್ ಖಚಿತವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನರ್ಸ್ ಕೊರೋನಾ
ಸೋಂಕಿತರ ವಾರ್ಡ್​ನಲ್ಲಿ ಕೆಲಸ ಮಾಡಿದ್ದರು. ಸದಾಶಿವನಗರದಲ್ಲಿ ಪತಿ ಹಾಗೂ ಇಬ್ಬರು ಮಕ್ಕಳ ಜತೆಗೆ ವಾಸವಿದ್ದರು. ಇದೀಗ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿದೆ. ನರ್ಸ್ ವಾಸವಿದ್ದ ಮನೆಯ ಸುತ್ತಮುತ್ತ ಕಂಟೈನಮೆಂಟ್ ಝೋನ್ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com