ಮಾಜಿ ಸಚಿವ ಎಂಬಿ ಪಾಟೀಲ್ ಐತಿಹಾಸಿಕ ಸಾಧನೆ:  ದುಬೈನಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆ

ಮಾಜಿ ಸಚಿವ ಎಂಬಿ ಪಾಟೀಲ್ ಐತಿಹಾಸಿಕ ಸಾಧನೆ:  ದುಬೈನಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆ

ಕ್ರಾಂತಿಕಾರಿ ಬಸವಣ್ಣನವರ ವಚನಗಳು ಬಸವ ಸಾಹಿತ್ಯದ ಮಹತ್ವ ಹಾಗೂ ಬಸವೇಶ್ವರರ ವಿಚಾರಧಾರೆಗಳು ದೇಶದ ಗಡಿಯಾಚೆಯೂ ಪಸರಿಸುತ್ತಿವೆ. ಲಂಡನ್ ನ ಥೇಮ್ಸ್ ನದಿ ದಂಡೆ ಮೇಲೆ ವಿಶ್ವ ಗುರು ಬಸವಣ್ಣ ಪ್ರತಿಮೆ ಪ್ರತಿಷ್ಠಾಪಿಸಿದ್ದು ಇತಿಹಾಸವಾದರೂ ಇದೀಗ ಲಿಂಗಾಯತ ಸಮುದಾಯದ ಮುಖಂಡ ಮಾಜಿ ಸಚಿವ ಎಂ.ಬಿ.ಪಾಟೀಲ್ ಇದೀಗ ಮತ್ತೊಂದು ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ.
Published on

ಬೆಂಗಳೂರು: ಕ್ರಾಂತಿಕಾರಿ ಬಸವಣ್ಣನವರ ವಚನಗಳು ಬಸವ ಸಾಹಿತ್ಯದ ಮಹತ್ವ ಹಾಗೂ ಬಸವೇಶ್ವರರ ವಿಚಾರಧಾರೆಗಳು ದೇಶದ ಗಡಿಯಾಚೆಯೂ ಪಸರಿಸುತ್ತಿವೆ. ಲಂಡನ್ ನ ಥೇಮ್ಸ್ ನದಿ ದಂಡೆ ಮೇಲೆ ವಿಶ್ವ ಗುರು ಬಸವಣ್ಣ ಪ್ರತಿಮೆ ಪ್ರತಿಷ್ಠಾಪಿಸಿದ್ದು ಇತಿಹಾಸವಾದರೂ ಇದೀಗ ಲಿಂಗಾಯತ ಸಮುದಾಯದ ಮುಖಂಡ ಮಾಜಿ ಸಚಿವ ಎಂ.ಬಿ.ಪಾಟೀಲ್ ಇದೀಗ ಮತ್ತೊಂದು ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ.

ಇದೀಗ ಎಂ.ಬಿ.ಪಾಟೀಲ್ ಸಹಾಯ ಮತ್ತು ಸಹಕಾರದಿಂದ ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಬಸವಣ್ಣನರ ಪ್ರತಿಮೆ ಸ್ಥಾಪನೆಯಾಗಿದೆ. ಆ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಬಸವಣ್ಣನವರ ಚಿಂತನೆಗಳು ಹರಡುವಂತಾಗಿದೆ.

ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ದುಬೈ ಬಸವ ಸಮಿತಿ ವತಿಯಿಂದ ಬಸವಣ್ಣನವರ ಪಂಚಲೋಹದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com