ಬೆಂಗಳೂರು ಕೊರೋನಾ ನಿಯಂತ್ರಣಕ್ಕೆ 8 ವಲಯ ವಿಂಗಡಣೆ: ವಯಲಕ್ಕೆ ಓರ್ವ ಸಚಿವರ ಉಸ್ತುವಾರಿ

ಕೊರೊನಾ ನಿಯಂತ್ರಣ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 8 ವಲಯ ರಚನೆ ಮಾಡಿ ಒಬ್ಬೊಬ್ಬ ಸಚಿವರಿಗೆ ಒಂದೊಂದು ವಲಯದ ಉಸ್ತುವಾರಿಯಾಗಿ ನೇಮಕ ಮಾಡಲು ತೀರ್ಮಾನಿಸಲಾಗಿದೆ.
ಜೆಸಿ ಮಾಧುಸ್ವಾಮಿ
ಜೆಸಿ ಮಾಧುಸ್ವಾಮಿ
Updated on

ಬೆಂಗಳೂರು: ಕೊರೊನಾ ನಿಯಂತ್ರಣ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 8 ವಲಯ ರಚನೆ ಮಾಡಿ ಒಬ್ಬೊಬ್ಬ ಸಚಿವರಿಗೆ ಒಂದೊಂದು ವಲಯದ ಉಸ್ತುವಾರಿಯಾಗಿ ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕರೋನಾ ತಡೆಗಟ್ಟಲು ಎಲ್ಲ ರೀತಿಯ ಚರ್ಚೆ ಮಾಡಿದ್ದೇವೆ. ಬೆಂಗಳೂರುನಲ್ಲಿ ಎಂಟು ವಲ ಯಗಳಿವೆ. ಬೆಂಗಳೂರಿಗೆ ಸೇರಿದ ಸಚಿವರು ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಅವರಿಗೆ ಉಸ್ತುವಾರಿ ನೀಡಲಾಗಿದೆ.ಇಂದು ಸಂಜೆ ವೇಳೆಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವ ಸಚಿವರಿಗೆ ಯಾವ ವಲಯ ನೀಡಬೇಕು ಎಂದು ಚೆರ್ಚಿಸಿ ವಿಂಗಡಣೆ ಮಾಡಲಿದ್ದಾರೆ ಎಂದರು.

ಆಯಾ ವಲಯದಲ್ಲಿ ಜನಸಂದಣಿ ಪ್ರದೇಶಗಳ ನಿಯಂತ್ರಣ ಮಾಡುವುದು. ಆಯಾ ಭಾಗಗಳನ್ನು ಆಯಾ ಸಚಿ ವರೇ ಕಾರ್ಯ ನಿರ್ವಹಿಸಬೇಕು. ಅಂತೆಯೇ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಕ್ರಮಕೈಗೊಳ್ಳಲಾಗಿದೆ. ಲಾಕ್ ಡೌನ್ ಬಗ್ಗೆ ಸದ್ಯ ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳಿದರು.

ಜಿಲ್ಲಾವಾರು ನಿಗಾವಹಿಸಲು ಮುಖ್ಯಮಂತ್ರಿಗಳು ಉಸ್ತುವಾರಿ ಸಚಿವರಿಗೆ ಸೂಚಿಸಿದ್ದಾರೆ. ವೀಕೆಂಡ್ ಲಾಕ್‌ ಡೌನ್ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ತಂಡ ರಚನೆ ಮಾಡಲಾಗಿದ್ದು, ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.

ಬೆಂಗಳೂರಿನಲ್ಲಿ‌ ಒಟ್ಟು ಎಂಟು‌ ವಲಯಗಳಿವೆ.ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ವಲಯಗಳಿಗೆ ಸಚಿವರುಗಳು ಭೇಟಿ ನೀಡಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚೆರ್ಚೆ ನಡೆಸಿ ಮುನ್ನಚ್ಚರಿಕೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಲಭ್ಯ ಮಾಹಿತಿ ಪ್ರಕಾರ ಡಿಸಿಎಂ ಅಶ್ವಥ್ ನಾರಾಯಣ್, ಕಂದಾಯ ಸಚಿವ ಆರ್.ಅಶೋಕ್, ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವಸತಿ ಸಚಿವ ವಿ.ಸೋಮಣ್ಣ, ಆಹಾರ ಸಚಿವ ಗೋಪಾಲಯ್ಯ, ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು, ಹಾಗೂ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಗೆ ವಲಯವಾರು ಹಂಚಿಕೆ ಮಾಡಲಿದ್ದಾರೆ ಎನ್ನಲಾಗಿದೆ. 

ಬೆಂಗಳೂರು ನಗರದಲ್ಲಿರುವ 8 ವಲಯಗಳು ಹಾಗೂ ವಾರ್ಡಗಳ ಸಂಖ್ಯೆ ಇಂತಿದೆ:-
ಬಿಬಿಎಂಪಿ ಪೂರ್ವ ವಲಯ - 44 ವಾರ್ಡ್
ಬಿಬಿಎಂಪಿ ಪಶ್ಚಿಮ ವಲಯ- 44 ವಾರ್ಡ್ 
ಬಿಬಿಎಂಪಿ ದಕ್ಷಿಣ ವಲಯ - 44 ವಾರ್ಡ್
ಬಿಬಿಎಂಪಿ ಮಹಾದೇವಪುರ ವಲಯ - 17 ವಾರ್ಡಗಳು 
ಬಿಬಿಎಂಪಿ ಯಲಹಂಕ ವಲಯ - 11 ವಾರ್ಡ್ ಗಳು
ಬಿಬಿಎಂಪಿ ಆರ್ ಆರ್ ನಗರ ವಲಯ -14 ವಾರ್ಡ್ ಗಳು 
ಬಿಬಿಎಂಪಿ ದಾಸರಹಳ್ಳಿ ವಲಯ - 08 ವಾರ್ಡ್ ಗಳು
ಬಿಬಿಎಂಪಿ ಬೊಮ್ಮನಹಳ್ಳಿ ವಲಯ- 16 ವಾರ್ಡ್ ಗಳು ಬರಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com