ಆಗಸ್ಟ್ 1ರಿಂದ ರಾಷ್ಟ್ರೀಯ ಶೂಟಿಂಗ್ ಶಿಬಿರ ಆರಂಭ

ಮುಂಬರುವ ಟೋಕಿಯೊ ಒಲಿಂಪಿಕ್ಸ್ ಗೆ ಪ್ರಕಟಿಸಲಾಗಿರುವ 34 ಭಾರತೀಯ ಶೂಟರ್ ಗಳ ಸಂಭಾವ್ಯ ತಂಡವು ಆಗಸ್ಟ್ 1ರಿಂದ ಅಭ್ಯಾಸ ಶಿಬಿರವನ್ನು ಪುನರಾರಂಭಿಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮುಂಬರುವ ಟೋಕಿಯೊ ಒಲಿಂಪಿಕ್ಸ್ ಗೆ ಪ್ರಕಟಿಸಲಾಗಿರುವ 34 ಭಾರತೀಯ ಶೂಟರ್ ಗಳ ಸಂಭಾವ್ಯ ತಂಡವು ಆಗಸ್ಟ್ 1ರಿಂದ ಅಭ್ಯಾಸ ಶಿಬಿರವನ್ನು ಪುನರಾರಂಭಿಸಲಿದೆ.

''ಮುಂದಿನ ತಿಂಗಳನಿಂದ ಎಚ್ಚರಿಕೆ ಮತ್ತು ಹಂತ ಹಂತವಾಗಿ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸುವ'' ಉದ್ದೇಶದಿಂದ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ರೈಫಲ್ಸ್ ಸಂಸ್ಥೆ (ಎನ್ಆರ್ ಎಐ) ಗುರುವಾರ ಪ್ರಕಟಿಸಿದೆ.

ಪ್ರಕಟಣೆಯಲ್ಲಿ ವಿಸ್ತೃತ ವಿವರ ನೀಡಿರುವ ಎನ್ಆರ್ ಎಐ, ಕೋವಿಡ್-19 ಹರಡುವುದನ್ನು ತಡೆಗಟ್ಟಲು ಸುರಕ್ಷತೆಯ ಕ್ರಮಗಳೊಂದಿಗೆ ಆಡಳಿತ ಮಂಡಳಿ, ಅಭ್ಯಾಸ ಶಿಬಿರವನ್ನು ಪುನರಾರಂಭಿಸುವ ನಿರ್ಧಾರ ಕೈಗೊಂಡಿದೆ. 

ರಾಷ್ಟ್ರ ರಾಜಧಾನಿ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ಈ ಶಿಬಿರ ನಡೆಯಲಿದೆ.

ಸದ್ಯ ಹೊಸದಿಲ್ಲಿಯಲ್ಲಿ 1 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com