ಕೊರೋನಾಗೆ ರಾಜ್ಯ ಕಾಂಗ್ರೆಸ್ ಕೌನ್ಸಿಲರ್ ನಿಂದ ಮನೆ ಮದ್ದು! 

ಮನುಕುಲ ಕೊರೋನಾ ಗುಣಪಡಿಸುವ ಲಸಿಕೆಗೆ ಕಾಯುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಕೌನ್ಸಿಲರ್ ಒಬ್ಬರು ಕೊರೋನಾಗೆ ಮನೆ ಮದ್ದು ಸಲಹೆ ನೀಡಿದ್ದಾರೆ
ಕೊರೋನಾಗೆ ರಾಜ್ಯ ಕಾಂಗ್ರೆಸ್ ಕೌನ್ಸಿಲರ್ ನಿಂದ ಮನೆ ಮದ್ದು!
ಕೊರೋನಾಗೆ ರಾಜ್ಯ ಕಾಂಗ್ರೆಸ್ ಕೌನ್ಸಿಲರ್ ನಿಂದ ಮನೆ ಮದ್ದು!
Updated on

ಬೆಂಗಳೂರು: ಮನುಕುಲ ಕೊರೋನಾ ಗುಣಪಡಿಸುವ ಲಸಿಕೆಗೆ ಕಾಯುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಕೌನ್ಸಿಲರ್ ಒಬ್ಬರು ಕೊರೋನಾಗೆ ಮನೆ ಮದ್ದು ಸಲಹೆ ನೀಡಿದ್ದಾರೆ. 

ರವೀಂದ್ರ ಗತ್ತಿ ಅವರು ನೀಡಿರುವ ಮನೆ ಮದ್ದಿನ ವಿಡಿಯೋ ಸಲಹೆ ವೈರಲ್ ಆಗತೊಡಗಿದೆ. ಕಾಂಗ್ರೆಸ್ ನ ಕೌನ್ಸಿಲರ್ ನೀಡಿರುವ ಮನೆ ಮದ್ದು ಸಲಹೆ ಹೀಗಿದೆ: 90 ಎಂಎಲ್ ರಮ್ ಗೆ ಮೆ ಒಂದು ಟೀ ಸ್ಪೂನ್ ಮೆಣಸು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ. ಅರ್ಧ ಹುರಿದ ಎರಡು ಮೊಟ್ಟೆ, ಆಮ್ಲೆಟ್ ನ್ನು ತಿನ್ನಿ ಇದರಿಂದಾಗಿ ಕೊರೋನಾ ಕಣ್ಮರೆಯಾಗುತ್ತದೆ ಎಂದು ಉಲ್ಲಾಳದ ಟೌನ್ ನಲ್ಲಿರುವ ಕೌನ್ಸಿಲರ್ ಹೇಳಿದ್ದಾರೆ.  

ಕೋವಿಡ್ ಗಾಗಿ ತಾವು ಹಲವಾರು ಔಷಧಗಳನ್ನು ಪ್ರಯತ್ನಿಸಿದೆ ಆದರೆ ರಮ್ ಹಾಗೂ ಮೊಟ್ಟೆಗಳು ಮಾತ್ರ ಉತ್ತಮ ಫಲಿತಾಂಶ ನೀಡಬಲ್ಲದು ಎಂದು ಗತ್ತಿ ಹೇಳಿದ್ದಾರೆ. "ನಾನು ಇದನ್ನು ರಾಜಕಾರಣಿಯಾಗಿ ಸಲಹೆ ನೀಡುತ್ತಿಲ್ಲ, ಆದರೆ ಕೊರೋನಾ ಸಮಿತಿಯ ಸದಸ್ಯನಾಗಿ ಈ ಸಲಹೆ ನೀಡುತ್ತಿದ್ದೇನೆ ಎಂದು ರವೀಂದ್ರ ಗತ್ತಿ ತಿಳಿಸಿದ್ದಾರೆ.

ಬೆಂಗಳೂರು, ಮಡಿಕೇರಿಯಲ್ಲಿ ಹಲವು ಜನರು ರಮ್ ಕುಡಿಯುವವರಿದ್ದಾರೆ. ಆದರೆ ನಾನು ಕುಡಿಯುವುದಿಲ್ಲ, ಮೀನು ತಿನ್ನುವುದಿಲ್ಲ ಎಂದು ಗತ್ತಿ ಹೇಳಿದ್ದಾರೆ. 15 ವರ್ಷಗಳಿಂದ ಗತ್ತಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದು, ಮಂಗಳೂರಿನ ಕಾಂಗ್ರೆಸ್ ನಾಯಕರು ಈ ಸಲಹೆ ಬಗ್ಗೆ ಚರ್ಚೆ ಮಾಡುವವರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com