ಬೆಡ್, ವೆಂಟಿಲೇಟರ್ ಇವೆ ಎನ್ನುತ್ತಿದೆ ಬಿಬಿಎಂಪಿ ಪೋರ್ಟಲ್, ಇನ್ನೊಂದೆಡೆ ರೋಗಿಗಳ ಸಾವು: ಟಿಎನ್ಐಇ ರಿಯಾಲಿಟಿ ಚೆಕ್!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೆಬ್ ಸೈಟ್(chbms.bbmpgov.in)ನಲ್ಲಿ ಕೋವಿಡ್-19 ರೋಗಿಗಳಿಗೆ ಬೆಡ್ ಗಳ ಕೊರತೆಯಿಲ್ಲ ಎಂದು ಹಾಕಲಾಗಿದೆಯಾದರೂ ಅಲ್ಲಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೆ ಮೃತಪಟ್ಟ ಘಟನೆಗಳಿವೆ.
ಬೆಂಗಳೂರಿನ ಶಿವಾಜಿನಗರದಲ್ಲಿ ಕೋವಿಡ್-19 ವಾರ್ ರೂಂ ಉದ್ಘಾಟಿಸಿದ ವಸತಿ ಸಚಿವ ವಿ ಸೋಮಣ್ಣ ಮತ್ತು ಇತರರು
ಬೆಂಗಳೂರಿನ ಶಿವಾಜಿನಗರದಲ್ಲಿ ಕೋವಿಡ್-19 ವಾರ್ ರೂಂ ಉದ್ಘಾಟಿಸಿದ ವಸತಿ ಸಚಿವ ವಿ ಸೋಮಣ್ಣ ಮತ್ತು ಇತರರು

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೆಬ್ ಸೈಟ್(chbms.bbmpgov.in)ನಲ್ಲಿ ಕೋವಿಡ್-19 ರೋಗಿಗಳಿಗೆ ಬೆಡ್ ಗಳ ಕೊರತೆಯಿಲ್ಲ ಎಂದು ಹಾಕಲಾಗಿದೆಯಾದರೂ ಅಲ್ಲಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೆ ಮೃತಪಟ್ಟ ಘಟನೆಗಳಿವೆ.

ಕಳೆದ ಮೂರ್ನಾಲ್ಕು ದಿನಗಳಲ್ಲಿ ಬೆಡ್ ಮತ್ತು ವೆಂಟಿಲೇಟರ್ ಸೌಲಭ್ಯವಿಲ್ಲದೆ ನಾಲ್ವರು ರೋಗಿಗಳು ಮೃತಪಟ್ಟಿದ್ದಾರೆ. ರೋಗಿಗಳನ್ನು ನೋಡಿಕೊಳ್ಳುತ್ತಿರುವ ಕಾರ್ಯಕರ್ತರು ಆಸ್ಪತ್ರೆ, ಕೋವಿಡ್-19 ಕೇಂದ್ರಗಳಲ್ಲಿನ ವಾಸ್ತವ ಸಂಗತಿಗಳನ್ನು ಬಿಚ್ಚಿಡುತ್ತಾರೆ.

ಕಳೆದ ಬುಧವಾರ ಸೈಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಕಫ ಮತ್ತು ಉಸಿರಾಟದ ತೊಂದರೆ ಎಂದು ಹೇಳಿಕೊಂಡು 52 ವರ್ಷದ ಗುರಪ್ಪನಪಾಳ್ಯದ ವ್ಯಕ್ತಿಯೊಬ್ಬ ಕೋವಿಡ್-19 ಪರೀಕ್ಷೆಗೆ ಕಾದು ಕುಳಿಯುತ್ತಾ ವೆಂಟಿಲೇಟರ್ ಸೌಲಭ್ಯ ಸಿಗದೆ ಅಸುನೀಗಿ ಹೋದರು.

ಪಿಲನ್ನ ಗಾರ್ಡನ್ ನ 57 ವರ್ಷದ ಮಹಿಳೆ ಉಸಿರಾಟದ ತೊಂದರೆಯಿಂದ ಕೋವಿಡ್-19 ಪರೀಕ್ಷೆ ಮಾಡಿಸಿ ಪಾಸಿಟಿವ್ ಬಂದ ಮೇಲೆ 12 ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಅಲೆಯಬೇಕಾಯಿತು, ನಂತರ ನಿನ್ನೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ತೀರಿಹೋದರು. ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್-19 ಮತ್ತೊಬ್ಬ ಶಂಕಿತ ರೋಗಿ ಬೆಡ್ ಸೌಲಭ್ಯ ಹೊಂದಿದ್ದರು, ಆದರೆ ವೆಂಟಿಲೇಟರ್ ಸೌಲಭ್ಯ ಸಿಗದೆ ತೀರಿಹೋದರು.

ಬೆನ್ಸನ್ ಟೌನ್ ನ 63 ವರ್ಷದ ವ್ಯಕ್ತಿ ಹೃದಯ ಬೇನೆ ಮತ್ತು ಉಸಿರಾಟದ ತೊಂದರೆ ಎಂದು ಹೇಳಿಕೊಂಡು ಕೋವಿಡ್ ಪರೀಕ್ಷೆ ಕೂಡ ಮಾಡಿಸಿಕೊಳ್ಳಲಾಗದೆ ನಿನ್ನೆ ನಸುಕಿನ ಜಾವ 3 ಗಂಟೆ ಸುಮಾರಿಗೆ ಅಸುನೀಗಿದ್ದಾರೆ. ಬಿಬಿಎಂಪಿ ವೆಬ್ ಸೈಟ್ ನೋಡಿಕೊಂಡು ಹೋದರೆ ಏನೂ ಪ್ರಯೋಜನವಾಗುವುದಿಲ್ಲ. ಕೋವಿಡ್-19 ಸಹಾಯ ಟೆಲಿಗ್ರಾಂ ಗ್ರೂಪ್ ನ ಮೂಲಕ ಕಾರ್ಯಕರ್ತರು ರೋಗಿಗಳಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾರೆ. ನಾವು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಕಾರ್ಮಿಕ ಇಲಾಖೆ ಸಹಾಯವಾಣಿಗೆ ಸಂಪರ್ಕಿಸಿದೆವು, ಆದರೆ ಯಾರೂ ವೆಂಟಿಲೇಟರ್ ಬೆಡ್ ಕೊಡಿಸಲು ಸಾಧ್ಯವಾಗಲಿಲ್ಲ ಎಂದು ಮರ್ಸಿ ಮಿಷನ್ ಎನ್ ಜಿಒದ ಕಾರ್ಯಕರ್ತ ಫತಹೀನ್ ಮಿಸ್ಬಾ ತಿಳಿಸಿದ್ದಾರೆ.

ಸರ್ಕಾರ ಆರ್ಡರ್ ಕೊಡುವುದಕ್ಕಿಂತ ಐಸಿಯು ಬೆಡ್ ಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ರೋಗಿಗಳು ಕಷ್ಟದ ಪರಿಸ್ಥಿತಿಯಲ್ಲಿ ಕರೆ ಮಾಡಿ 080-22660000ಗೆ ಕೇಳಿದಾಗ 40 ನಿಮಿಷ ಉತ್ತರವೇ ಇಲ್ಲ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಹೇಳುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಕೋವಿಡ್-19 ರೋಗಿಗಳಿಗೆ ಶೇಕಡಾ 50ರಷ್ಟು ಬೆಡ್ ಗಳನ್ನು ಕಡ್ಡಾಯವಾಗಿ ನೀಡಬೇಕೆಂದು ಸರ್ಕಾರ ಆದೇಶ ಮಾಡಿದೆ. ಕೋವಿಡ್-19 ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗಬೇಕೆಂಬುದೇ ಸರ್ಕಾರದ ಉದ್ದೇಶ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com