ಮೈಸೂರು-ಬೆಂಗಳೂರು ಹೈವೇ ಕಾಮಗಾರಿಗೂ ತಟ್ಟಿದ ಕೋವಿಡ್ ಬಿಸಿ, ಕಾರ್ಮಿಕರ ಕೊರತೆಯಿಂದ ಯೋಜನೆ ವಿಳಂಬ

ಬೆಂಗಳುರು ಹಾಗೂ ಮೈಸೂರು-ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 90 ನಿಮಿಷಗಳಿಗೆ ಇಳಿಸುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಕಾಮಗಾರಿಗೆ ಸಹ ಕೋವಿಡ್ ಬಿಸಿ ತಟ್ಟಿದೆ.  ಯೋಜನೆಯು ಕೋವಿಡ್ ಮತ್ತು ಲಾಕ್‌ಡೌನ್‌ನಿಂದ ಕಾರ್ಮಿಕರ ಕೊರತೆ ಎದುರಿಸುತ್ತಿದೆ. . ಗುತ್ತಿಗೆದಾರರಿಗೆ ಮೂಲ ಕಾರ್ಮಿಕರನ್ನು ಕರೆತರಲು ಆಗುತ್ತಿಲ್ಲ ಏಕೆಂದರೆ ಅವರಲ್ಲಿ ಹೆಚ್ಚಿನ ಮಂದಿ ತಮ್ಮ ಸ್
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ
Updated on

ಬೆಂಗಳೂರು: ಬೆಂಗಳುರು ಹಾಗೂ ಮೈಸೂರು-ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 90 ನಿಮಿಷಗಳಿಗೆ ಇಳಿಸುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಕಾಮಗಾರಿಗೆ ಸಹ ಕೋವಿಡ್ ಬಿಸಿ ತಟ್ಟಿದೆ.  ಯೋಜನೆಯು ಕೋವಿಡ್ ಮತ್ತು ಲಾಕ್‌ಡೌನ್‌ನಿಂದ ಕಾರ್ಮಿಕರ ಕೊರತೆ ಎದುರಿಸುತ್ತಿದೆ. . ಗುತ್ತಿಗೆದಾರರಿಗೆ ಮೂಲ ಕಾರ್ಮಿಕರನ್ನು ಕರೆತರಲು ಆಗುತ್ತಿಲ್ಲ ಏಕೆಂದರೆ ಅವರಲ್ಲಿ ಹೆಚ್ಚಿನ ಮಂದಿ ತಮ್ಮ ಸ್ವಂತ ಊರುಗಳಿಗೆ ಮರಳಿದ್ದಾರೆ. ಅಗತ್ಯವಿರುವ ಕಾರ್ಮಿಕರ ಅರ್ಧದಷ್ಟು ಮಂದಿ ಮಾತ್ರ ಇದೀಗ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ನಿಗದಿಯಂತೆ  2022 ರ ವೇಳೆಗೆ ಯೋಜನೆ ಪೂರ್ಣವಾಗುವುದು ಅನುಮಾನ ಎನ್ನಲಾಗುತ್ತಿದೆ.

ಬೆಂಗಳೂರು ನೈಸ್ ರಸ್ತೆ ಪ್ರವೇಶದ್ವಾರದಿಂದ 117 ಕಿ.ಮೀ ಅಂತರದ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ (ಎಸ್‌ಎಚ್ -88) ಅನ್ನು 10 ಪಥಗಳ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್ -275) ಆಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮಾರ್ಚ್ 2014 ರಲ್ಲಿ ಘೋಷಿಸಿತ್ತು.  ಆದರೆ ಭೂಸ್ವಾಧೀನ,  ಮತ್ತು ಕಾನೂನು ಅಂಶಗಳು ಸೇರಿದಂತೆ ಸಮಸ್ಯೆಗಳಿದ್ದಕಾರಣ 2018 ರ ಬದಲು 2019 ರ ಆರಂಭದಲ್ಲಿ ಯೋಜನೆಯ ಪ್ರಾರಂಭವಾಗಿತ್ತು.

ಎನ್‌ಎಚ್‌ಎಐ ಅಂದಾಜು 7,400 ಕೋಟಿ ರೂ. ವಿಸ್ತರಣೆಯಲ್ಲಿ ಒಂಬತ್ತು ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು ನಾಲ್ಕು ರೋಡ್ ಓವರ್ ಬ್ರಿಡ್ಜ್ ಗ:ಳು ಸೇರಿದೆ.  ಯೋಜನೆಯನ್ನು ಎರಡು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ, ಬೆಂಗಳೂರಿನಿಂದ ಮದ್ದೂರಿನ ನಿಡಘಟ್ಟ (56.2 ಕಿ.ಮೀ) ಮತ್ತು ನಿಡಘಟ್ಟದಿಂದ ಬೆಂಗಳೂರು(60 ಕಿ.ಮೀ). ಮೊದಲ ಪ್ಯಾಕೇಜ್‌ನಲ್ಲಿ, 50% ಕೆಲಸವನ್ನು ಮಾಡಲಾಗಿದ್ದರೆ ಎರಡನೇ ಪ್ಯಾಕೇಜ್‌ನಲ್ಲಿ 25%.ರಷ್ಟು ಕೆಲಸಗಳಾಗಿದೆ,

ಲಾಕ್ ಡೌನ್ ಸಮಯದಲ್ಲಿ ಕೆಲಸ ನಿಂತುಹೋಗಿದ್ದು  ಕೆಲವು ವಾರಗಳ ಹಿಂದೆ ಅದನ್ನು ಪುನಾರಂಭಿಸಿದ ನಂತರ , ಅಧಿಕಾರಿಗಳು ಕಾರ್ಮಿಕ ಕೊರತೆಯನ್ನು ಎದುರಿಸುತ್ತಿದ್ದಾರೆ. ಎರಡೂ ಪ್ಯಾಕೇಜ್‌ಗಳಿಂದ, 8,000 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು, ಆದರೆ ಈಗ 4,000 ಜನರು  ಸಹ ಇಲ್ಲ"ಪಿಡಬ್ಲ್ಯೂಡಿ ಮೂಲಗಳು ತಿಳಿಸಿವೆ. ಗುತ್ತಿಗೆದಾರರು ಕ್ರೇನ್‌ಗಳು, ಬುಲ್ಡೋಜರ್‌ಗಳು, ಅಗೆಯುವ ಯಂತ್ರಗಳು ಮತ್ತು ಇತರ ಹೈಟೆಕ್ ವಾಹನಗಳನ್ನು ನಿರ್ವಹಿಸಲು ನುರಿತ ಕಾರ್ಮಿಕರ ಅಗತ್ಯವಿದ್ದು ಇದಕ್ಕಾಗಿ ಸ್ಥಳೀಯ ಕಾರ್ಮಿಕರಿಗೆ ತರಬೇತಿ ನೀಡಲಾಗುತ್ತಿದೆ. ಆದರೆ ಅದು ಹೆಚ್ಚಿನ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ, ಕಾಮಗಾರಿ ಪ್ರಗತಿಯಲ್ಲಿದೆ, ಆದರೆ ಇದು ನಿಧಾನಗತಿಯಲ್ಲಿ ಸಾಗುತ್ತಿದೆ  ಎಂದು ಎನ್‌ಎಚ್‌ಎಐನ ಯೋಜನಾ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com