ಮನೇಲೇ ಕುಳಿತು ಸೈಟ್ ನೋಡಿ:  ಬಿಡಿಎ ಸೈಟ್‌ಗಳ ವರ್ಚುವಲ್ ಟೂರ್ ಗೆ ಶೀಘ್ರ ಚಾಲನೆ 

ನೀವು ಖರೀದಿಸಿಲು ಯೋಜಿಸಿದ ಯಾವುದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೈಟ್ ಅನ್ನು ನೀವು ಮನೆಯಲ್ಲೇ ಕುಳಿತು ನೋಡಬಹುದಾದ ವಿನೂತನ ಯೋಜನೆಗೆ ಬಿಡಿಎನಿಂದ ಶೀಘ್ರವೇ ಚಾಲನೆ ದೊರಕಲಿದೆ. ತನ್ನ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿರುವ ಇ-ಮ್ಯಾಪಿಂಗ್ ತಂತ್ರಜ್ಞಾನವನ್ನು ಭವಿಷ್ಯದಲ್ಲಿ ಹರಾಜು ಮಾಡಲಾಗುವ ಬಿಡಿಎ ಸೈಟ್‌ಗಳ ಜಿಯೋ-ಟ್ಯಾಗ್ ಮಾಡಲಾಗುತ್ತದೆ ಎಂದು ಬಿಡಿಎ ಅಧ
ಮನೇಲೇ ಕುಳಿತು ಸೈಟ್ ನೋಡಿ:  ಬಿಡಿಎ ಸೈಟ್‌ಗಳ ವರ್ಚುವಲ್ ಟೂರ್ ಗೆ ಶೀಘ್ರ ಚಾಲನೆ 

ಬೆಂಗಳೂರು: ನೀವು ಖರೀದಿಸಿಲು ಯೋಜಿಸಿದ ಯಾವುದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೈಟ್ ಅನ್ನು ನೀವು ಮನೆಯಲ್ಲೇ ಕುಳಿತು ನೋಡಬಹುದಾದ ವಿನೂತನ ಯೋಜನೆಗೆ ಬಿಡಿಎನಿಂದ ಶೀಘ್ರವೇ ಚಾಲನೆ ದೊರಕಲಿದೆ. ತನ್ನ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿರುವ ಇ-ಮ್ಯಾಪಿಂಗ್ ತಂತ್ರಜ್ಞಾನವನ್ನು ಭವಿಷ್ಯದಲ್ಲಿ ಹರಾಜು ಮಾಡಲಾಗುವ ಬಿಡಿಎ ಸೈಟ್‌ಗಳ ಜಿಯೋ-ಟ್ಯಾಗ್ ಮಾಡಲಾಗುತ್ತದೆ ಎಂದು ಬಿಡಿಎ ಅಧಿಕೃತ ಪ್ರಕಟಣೆ ತಿಳಿಸಿದೆ.

ಸೈಟ್ ಗಳ ಜಿಯೋ-ಟ್ಯಾಗ್ ಮಾಡಲಾಗಿರುವುದರಿಂದ ಜನರು ತಾವು ಖರೀದಿಸಲು ಆಸಕ್ತಿ ಹೊಂದಿರುವ ಸೈಟ್ ಸಂಖ್ಯೆಯನ್ನು ಕ್ಲಿಕ್ ಮಾಡುವುದರ ಮೂಲಕ ಹರಾಜಿನಲ್ಲಿರುವ ಸೈಟ್‌ಗಳನ್ನು ಪ್ರವೇಶಿಸಿ ಮನೆಯಲ್ಲೇ ಇದ್ದೂ ವೀಕ್ಷಿಸಲು ಅನುಕೂಲವಾಗಲಿದೆ. ಲೇಔಟ್ ಗಳು ಹಾಗೂ ಡೈಮೆನ್ಶನ್ಸ್ ಗಳ್ಂತಹಾ ವಿವರಗಳೊಂದಿಗೆ ಸೈಟ್‌ಗಳು ಗೂಗಲ್ ಮ್ಯಾಪ್ ನಲ್ಲಿ ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ ಎಂದು  ಪ್ರಕಟಣೆ ತಿಳಿಸಿದೆ.

ಸೋಮವಾರ ಇ-ಹರಾಜು ಮಾಡಲಿರುವ 308 ಸೈಟ್‌ಗಳ  ಬ್ಯಾಚಿನೊಂದಿಗೆ ಈ ತಂತ್ರಜ್ಞಾನಕ್ಕೆ ಚಾಲನೆ ಸಿಕ್ಕಲಿದೆ. ಪ್ರಸ್ತುತ ನಡೆಯುತ್ತಿರುವ ಕೊರೋನಾ ಪ್ರೇರಿತ ಲಾಕ್‌ಡೌನ್ ಕಾರಣದಿಂದಾಗಿ, ಯಾವುದೇ ಸಂಭಾವ್ಯ ಖರೀದಿದಾರರು ಯಾವುದೇ ಆಸ್ತಿಯನ್ನು ಖರೀದಿಸುವ ಮೊದಲು ಈ ಸೈಟ್‌ಗಳನ್ನು ಸ್ಥಳಕ್ಕೆ ತೆರಳಿ ನೋಡುವುದು ಕಠಿಣವಾಗಿದೆ. ಜಿಯೋ-ಟ್ಯಾಗ್ ಮಾಡಲಾದ ಸೈಟ್ ಪಟ್ಟಿಯನ್ನು ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಮತ್ತು ವಿಶ್ವದ ಯಾವುದೇ ಭಾಗದ ಜನರು ಈ ಮಾಹಿತಿಯನ್ನು ತಾವು ಕುಳಿತಲ್ಲೇ ಪಡೆದುಕೊಳ್ಳಬಹುದು  ಎಂದು ಬಿಡಿಎ ಹೇಳಿದೆ. ಅಲ್ಲದೆ ಭವಿಷ್ಯದಲ್ಲಿ  ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com