ಕೋವಿಡ್-19 ಕರ್ತವ್ಯದಿಂದ ಬಿಡಿಎ ಅಧಿಕಾರಿಗಳಿಗೆ ವಿನಾಯ್ತಿ

ಕೋವಿಡ್-19 ಕರ್ತವ್ಯದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧಿಕಾರಿಗಳಿಗೆ ರಾಜ್ಯ ಸರ್ಕಾರ ವಿನಾಯ್ತಿ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಕರ್ತವ್ಯದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧಿಕಾರಿಗಳಿಗೆ ರಾಜ್ಯ ಸರ್ಕಾರ ವಿನಾಯ್ತಿ ನೀಡಿದೆ.

ಬಿಡಿಎ ಅಧಿಕಾರಿಗಳಿಗೆ ಹಲವು ಜವಾಬ್ದಾರಿಗಳು ಇರುವುದರಿಂದ ವಿನಾಯ್ತಿ ನೀಡಲಾಗಿದೆ ಎಂದು ಆಯುಕ್ತ ಹೆಚ್ ಆರ್ ಮಹದೇವ ತಿಳಿಸಿದ್ದಾರೆ.ಕಾರ್ನರ್ ಸೈಟ್ ಗಳ ಮಾರಾಟ ಮತ್ತು ದಾಖಲಾತಿ ಕೆಲಸ ನೋಡಿಕೊಳ್ಳಬೇಕು. ದೀರ್ಘಾವಧಿಯಿಂದ ಬಾಕಿ ಇರುವ ಅರ್ಕಾವತಿ ಲೇ ಔಟ್ ಸೈಟ್ ಗಳ ಹಂಚಿಕೆ, ರೈತರಿಗೆ ಭೂಮಿ ಮಾರಾಟ ಇತ್ಯಾದಿ ಕೆಲಸಗಳು ಬಾಕಿ ಇರುವಾಗ ಅದರ ಮೇಲೆ ಕೋವಿಡ್-19 ಕರ್ತವ್ಯ ನಿರ್ವಹಿಸುವುದು ಕಷ್ಟವಾಗುತ್ತದೆ ಎಂದು ಮಹದೇವ್ ತಿಳಿಸಿದ್ದಾರೆ.

ಫೆರಿಫೆರಲ್ ರಿಂಗ್ ರಸ್ತೆಗೆ ಭೂಮಿಗಳನ್ನು ವಶೀಕರಣ ಮಾಡುವ ಕೆಲಸದಲ್ಲಿಯೂ ನಮ್ಮ ಅಧಿಕಾರಿಗಳು ನಿರತರಾಗಿದ್ದಾರೆ. ಆದ್ಯತೆ ಮೇಲೆ ನಮಗೆ ಕೆಲಸ ಕೊಡುತ್ತಿದೆ ಸರ್ಕಾರ. ಆಸ್ತಿಗಳ ಮಾರಾಟ, ದಾಖಲಾತಿಯಲ್ಲಿ ಪಾರದರ್ಶಕತೆ ಕಾಪಾಡಲು, ದುರುಪಯೋಗ ಮಾಡಿಕೊಳ್ಳುವುದು ತಪ್ಪಿಸಲು ಬಿಡಿಎ ಡಿಜಿಟಲೀಕರಣಗೊಳಿಸುತ್ತಿದೆ, ಅವುಗಳ ಕೆಲಸವಿರುವಾಗ ಕೋವಿಡ್-19 ಕೆಲಸ ಹೊರೆಯಾಗುತ್ತದೆ ಎಂದು ನಾವು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೆವು, ಅದಕ್ಕೆ ಸರ್ಕಾರ ವಿನಾಯ್ತಿ ನೀಡಿದೆ ಎಂದು ಮಹದೇವ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com