ಮೈಸೂರಿನಲ್ಲಿ ರಾಪಿಡ್ ಟೆಸ್ಟ್: ಶೇ.30ರಷ್ಟು ಕೊರೋನಾ ಪಾಸಿಟಿವ್ ಕೇಸುಗಳು ಪತ್ತೆ!

ನಗರದ ಈಶಾನ್ಯ ಭಾಗಗಳಲ್ಲಿ ನಡೆಸಿದ ಕ್ಷಿಪ್ರ ಕೋವಿಡ್-19 ಪರೀಕ್ಷೆಯಿಂದ ಕೇವಲ ಎರಡೇ ದಿನಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ನಗರದ ಈಶಾನ್ಯ ಭಾಗಗಳಲ್ಲಿ ನಡೆಸಿದ ಕ್ಷಿಪ್ರ ಕೋವಿಡ್-19 ಪರೀಕ್ಷೆಯಿಂದ ಕೇವಲ ಎರಡೇ ದಿನಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ವರದಿಯಾಗಿದೆ.

ಕಳೆದ ಶನಿವಾರ 37 ಕ್ಷಿಪ್ರ ಕೊರೋನಾ ಪರೀಕ್ಷೆ ಮಾಡಿಸಿದ್ದರಲ್ಲಿ ನಿನ್ನೆ 13 ಕೇಸುಗಳು ಪಾಸಿಟಿವ್ ಎಂದು ಬಂದಿವೆ. 100 ಪರೀಕ್ಷೆಗಳಲ್ಲಿ 30ಕ್ಕೂ ಹೆಚ್ಚು ವರದಿಗಳು ಪಾಸಿಟಿವ್ ಆಗಿವೆ ಎಂದು ಮೈಸೂರು ನಗರ ಆಯುಕ್ತ ತಿಳಿಸಿದ್ದಾರೆ. ಅಂದರೆ ಶೇಕಡಾ 30ರಷ್ಟು ನಗರದಲ್ಲಿ ಪಾಸಿಟಿವ್ ಪ್ರಕರಣಗಳಿವೆ.

ಎನ್ ಆರ್ ಕ್ಷೇತ್ರದ ಸುತ್ತಮುತ್ತ ಪಾಲಿಕೆ ಅಧಿಕಾರಿಗಳು ಮನೆ ಮನೆ ಸರ್ವೇಕ್ಷಣೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾದಾಗ ಮುಂಬೈಯ ಧಾರಾವಿ ಮಾದರಿಯಲ್ಲಿ ಕಂಟೈನ್ ಮೆಂಟ್ ನ್ನು ಪಾಲಿಕೆ ಅಧಿಕಾರಿಗಳು ಘೋಷಿಸಿದ್ದರು. ಸರ್ವೇಕ್ಷಣೆಯಲ್ಲಿ ಸೋಂಕಿನ ಲಕ್ಷಣ ಕಂಡುಬಂದವರನ್ನು ಕರೆದುಕೊಂಡು ಹೋಗಿ ಪರೀಕ್ಷೆ ಮಾಡಲಾಗಿತ್ತು.

ಜಿಲ್ಲಾಡಳಿತ ವಾರದ ಸಣ್ಣ ಲಾಕ್ ಡೌನ್ ನ್ನು ನರಸಿಂಹರಾಜ, ಮಂಡಿ ಮಹಲ್ಲ, ಉದಯಗಿರಿ, ಲಷ್ಕರ್ ಮೊಹಲ್ಲ ಪೊಲೀಸ್ ಠಾಣೆ ಸರಹದ್ದುಗಳಲ್ಲಿ, 400 ಮೀಟರ್ ಕಂಟೈನ್ ಮೆಂಟ್ ವಲಯಗಳಲ್ಲಿನ ಮನೆಗಳಲ್ಲಿ, ಕೆಹೆಚ್ ಬಿ ಕಾಲೊನಿ, ರಾಜೀವ್ ನಗರ, ಬೀಡಿ ಕಾಲೊನಿ ಮತ್ತು ಸತಗಲ್ಲಿಯಲ್ಲಿ ಹೇರಿದೆ. ಜಿಲ್ಲೆಗೆ ನೀಡಿರುವ 2,300 ಪರೀಕ್ಷಾ ಕಿಟ್ ಗಳಲ್ಲಿ 800 ಇಂತಹ ಕ್ಷಿಪ್ರ ಪರೀಕ್ಷಾ ಕಿಟ್ ಗಳನ್ನು ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ.

ಸಂಸದ ಪ್ರತಾಪ ಸಿಂಹ ಎನ್ ಆರ್ ಕ್ಷೇತ್ರದ ಕಾರ್ಯಪಡೆಯಡಿ 10 ಸದಸ್ಯರ ಕಾರ್ಯಕರ್ತರ ತಂಡವನ್ನು ಪ್ರತಿ ವಾರ್ಡ್ ಗೆ ರಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com