ಕಾಫಿ ಡೇ ಸ್ಥಾಪಕ ಸಿದ್ದಾರ್ಥ್ ಸಾವು: ಖಾಸಗಿ ಷೇರು ಹೂಡಿಕೆದಾರರು, ಐಟಿ ಇಲಾಖೆಗೆ ಕ್ಲೀನ್ ಚಿಟ್

ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್ ಸಾವಿನ ಸುಮಾರು ಒಂದು ವರ್ಷದ ನಂತರ , ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ನೇಮಕ ಮಾಡಿದ ತನಿಖಾ ಸಮಿತಿಯುಖಾಸಗಿ ಷೇರು ಹೂಡಿಕೆದಾರರಿಗೆ ಮತ್ತು ಅವರ ಕೊನೆಯ ಪತ್ರದಲ್ಲಿ ಹೆಸರಿಸಲಾದ ಆದಾಯ ತೆರಿಗೆ ಇಲಾಖೆಗೆ ವರ್ಚುವಲ್ ಕ್ಲೀನ್ ಚಿಟ್ ನೀಡಿದೆ.
ವಿ.ಜಿ. ಸಿದ್ಧಾರ್ಥ್
ವಿ.ಜಿ. ಸಿದ್ಧಾರ್ಥ್

ನವದೆಹಲಿ: ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್ ಸಾವಿನ ಸುಮಾರು ಒಂದು ವರ್ಷದ ನಂತರ , ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ನೇಮಕ ಮಾಡಿದ ತನಿಖಾ ಸಮಿತಿಯುಖಾಸಗಿ ಷೇರು ಹೂಡಿಕೆದಾರರಿಗೆ ಮತ್ತು ಅವರ ಕೊನೆಯ ಪತ್ರದಲ್ಲಿ ಹೆಸರಿಸಲಾದ ಆದಾಯ ತೆರಿಗೆ ಇಲಾಖೆಗೆ ವರ್ಚುವಲ್ ಕ್ಲೀನ್ ಚಿಟ್ ನೀಡಿದೆ.

ಖಾಸಗಿ ಷೇರು ಹೂಡಿಕೆದಾರರು  ಮತ್ತು ಇತರ ಸಾಲದಾತರಿಂದ ನಿರಂತರ ರಿಮೈಂಡರ್ ಕಾರಣಕ್ಕೆ  ಸಿದ್ದಾರ್ಥ್ ಆತ್ಮಹತ್ಯೆಯಂತಹಾ ಕೃತ್ಯಕ್ಕೆ ಮುಂದಾಗಿದ್ದರೆಂದು  ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಖಾಸಗಿ ಷೇರು ಹೂಡಿಕೆದಾರರು ಮತ್ತು ಸಾಲದಾತರು ನೀಡುವ ಇಂತಹ ರಿಮೈಂಡರ್ ಗಳು ಹಾಗೂ ಪಾಲೋ  ಅಪ್ ಗಳು ಉದ್ಯಮದಲ್ಲಿ ವಿಶೇಷವೇನಲ್ಲ. ಮತ್ತು ಖಾಸಗಿ ಷೇರು ಹೂಡಿಕೆದಾರರು ಅಂಗೀಕೃತ ಕಾನೂನು ಮತ್ತು ವ್ಯವಹಾರ ಮಾನದಂಡಗಳ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದಾರೆಂದು ನಾವು ನಂಬುತ್ತೇವೆ" ಎಂದು ವರದಿ ಹೇಳಿದೆ.

ಆದಾಯ ತೆರಿಗೆ ಇಲಾಖೆಯಿಂದ ಯಾವುದೇ "ಅಜಾಗರೂಕ ಕಿರುಕುಳ" ನೀಡಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲವೆಂದು ವರದಿ ಹೇಳಿದೆ. ಆದಾಗ್ಯೂ, ಐಟಿ ಇಲಾಖೆಯಿಂದ ಮೈಂಡ್‌ಟ್ರೀ ಷೇರುಗಳ ಲಗತ್ತಿಸುವಿಕೆಯಿಂದಾಗಿ ಉದ್ಭವಿಸಬಹುದಾದ ಗಂಭೀರ ಬಿಕ್ಕಟ್ಟನ್ನು ಹಣಕಾಸು ದಾಖಲೆಗಳು ಸೂಚಿಸುತ್ತವೆ ಎಂದು ಅದು ಹೇಳಿದೆ.

ಇದಲ್ಲದೆ, ಸಿದ್ಧಾರ್ಥ್ ಖಾಸಗಿ ಸಂಸ್ಥೆಯಾದ ಮ್ಯಾಸೆಲ್ 2,693 ಕೋಟಿ ರೂ.ಗಳನ್ನು ಕಾಫಿ ಡೇ ಎಂಟರ್‌ಪ್ರೈಸಸ್‌ಗೆ ನೀಡಬೇಕಿದೆ ಎಂದು ತನಿಖೆಯಿಂದ ತಿಳಿದುಬಂದಿದೆ, ಈ ವರದಿ ಬಗ್ಗೆ ಗಮನಹರಿಸಬೇಕಾಗಿದೆ" ಎಂದು ಹೇಳಿದೆ.ಕೆಫೆ ಕಾಫಿ ಡೇ ಸಂಸ್ಥಾಪಕರ ಮೃತದೇಹವನ್ನು ಕಳೆದ ವರ್ಷ ಜುಲೈ 31 ರಂದು ಮಂಗಳೂರಿನ ನೇತ್ರಾವತಿ ನದಿಯಲ್ಲಿ ಪತ್ತೆ ಮಾಡಲಾಗಿತ್ತು. ಅವರ ಕೊನೆಯ ಡೆತ್ ನೋಟ್  ಹೂಡಿಕೆದಾರರು ಮತ್ತು ತೆರಿಗೆ ಅಧಿಕಾರಿಗಳ ಪಾತ್ರದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತು.

 "ಇತರ ಸಾಲದಾತರಿಂದ ಉಂಟಾಗುವ ತೀವ್ರ ಒತ್ತಡವು ನನ್ನನ್ನು ಸಾವ್ಯುವಂತಹಾ ಪರಿಸ್ಥಿತಿಗೆ ತಳ್ಳುತ್ತಿದೆ. . ಹಿಂದಿನ ಮೈಂಡ್ಟ್ರೀ ಒಪ್ಪಂದವನ್ನು ನಿರ್ಬಂಧಿಸುವ ಹಾಗೂ ನಂತರದಲ್ಲಿ ಸ್ವಾಧೀನಪಡಿಸಿಕೊಳ್ಳುವ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ನಮ್ಮ ಷೇರುಗಳನ್ನು ಲಗತ್ತಿಸುವ ರೂಪದಲ್ಲಿ ಆದಾಯ ತೆರಿಗೆ ಇಲಾಖೆಯ ಹಿಂದಿನ ಡಿಜಿ ಅವರಿಂದ  ಸಾಕಷ್ಟು ಕಿರುಕುಳ ಉಂಟಾಗಿದೆ, ನಮ್ಮ ಕಾಫಿ ಡೇ  ಷೇರುಗಳಲ್ಲಿ, ಪರಿಷ್ಕೃತ ರಿಟರ್ನ್ಸ್ ಅನ್ನು ನಮ್ಮಿಂದ ಸಲ್ಲಿಸಲಾಗಿದ್ದರೂ,  ನನಗೆ ಅನ್ಯಾಯವಾಗಿದೆ,  ಇದು ಗಂಭೀರ ಬಿಕ್ಕಟ್ಟಿಗೆ ಕಾರಣವಾಗಿದೆ. " ಸಿದ್ದಾರ್ಥ್ ಬರೆದಿದ್ದೆನ್ನಲಾದ ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com