ಕೊರೋನಾ ಎಫೆಕ್ಟ್: ಆನ್ ಲೈನ್ 'ರಾಖಿ ಪೋಸ್ಟ್' ಆರಂಭಿಸಿದ ಕರ್ನಾಟಕ ಅಂಚೆ ಇಲಾಖೆ

ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರಗೆ ಬರಲು ಸಹ ಭಯ ಪಡುತ್ತಿದ್ದು, ಇದನ್ನು ಅರ್ಥ ಮಾಡಿಕೊಂಡ ಕರ್ನಾಟಕ ಅಂಚೆ ಇಲಾಖೆ, ಮಹಿಳೆಯರಿಗಾಗಿ ಆನ್ ಲೈನ್ ರಾಕಿ ಪೋಸ್ಟ್ ಆರಂಭಿಸಿದೆ.
ರಾಕಿ ಪೋಸ್ಟ್
ರಾಕಿ ಪೋಸ್ಟ್

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರಗೆ ಬರಲು ಸಹ ಭಯ ಪಡುತ್ತಿದ್ದು, ಇದನ್ನು ಅರ್ಥ ಮಾಡಿಕೊಂಡ ಕರ್ನಾಟಕ ಅಂಚೆ ಇಲಾಖೆ, ಮಹಿಳೆಯರಿಗಾಗಿ ಆನ್ ಲೈನ್ ರಾಕಿ ಪೋಸ್ಟ್ ಆರಂಭಿಸಿದೆ.

ಆಗಸ್ಟ್ 3ರಂದು ರಕ್ಷಾ ಬಂಧನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಂಚೆ ಇಲಾಖೆ ಆನ್ ಲೈನ್ ಮೂಲಕ ರಾಖಿ ಖರೀದಿ ಮತ್ತು ರವಾನೆ ಸೇವೆಯನ್ನು ಆರಂಭಿಸಿದೆ.

ಅಂಚೆ ಇಲಾಖೆಯ ವೆಬ್ ಸೈಟ್ ನಲ್ಲಿ ನಿಮಗೆ ಇಷ್ಟವಾದ ರಾಖಿಯನ್ನು ಆಯ್ಕೆ ಮಾಡಿ, ಅದಕ್ಕೆ ಆನ್ ಲೈನ್ ಮೂಲಕವೇ ಹಣ ಪಾವತಿಸಿ, ಮನೆಯ ವಿಳಾಸ ನೀಡಿದೆ ಹಬ್ಬದಂದು ರಾಖಿ ಮನೆ ತಲುಪುತ್ತದೆ. ಅಲ್ಲದೆ ನೀವು ಮನೆಯಲ್ಲಿದ್ದುಕೊಂಡೇ ಲಡಾಖ್ ಗಡಿಯಲ್ಲಿರುವ ವೀರ ಯೋಧರಿಗೂ ಸಹ ಅಂಚೆ ಮೂಲಕ ರಾಖಿ ರವಾನಿಸಬಹುದು. 

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜನ ಸುರಕ್ಷಿತವಾಗಿ ರಾಖಿ ಖರೀದಿಸಲು ಮತ್ತು ಅದನ್ನು ಅವರಿಗೆ ತಲುಪಿಸಲು ಅಂಚೆ ಇಲಾಖೆ ಆನ್ ಲೈನ್ ರಾಖಿ ಪೋಸ್ಟ್ ಆರಂಭಿಸಿದೆ ಎಂದು ಬೆಂಗಳೂರು ವಿಭಾಗದ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಎಸ್ ಬಾಬು ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com