ಕುದುರೆಮುಖಕ್ಕೆ ಕಡೆಗೂ ಒಲಿದ ಪರಿಸರ ಸೂಕ್ಷ್ಮ ವಲಯ ಪಟ್ಟ

ಹಲವು ವರ್ಷಗಳ ವಿಳಂಬದ ನಂತರ ಇದೀಗ ಕೇಂದ್ರ ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇಎಸ್ ಝಡ್) ಎಂದು ಘೋಷಿಸಿದೆ. ಇದರೊಂದಿಗೆ 316.67 ಚದರ ಕಿ.ಮೀ ವಿಸ್ತೀರ್ಣದ, ಸಂರಕ್ಷಿತ ಪ್ರದೇಶವು ಇಎಸ್ ಝಡ್ ವ್ಯಾಪ್ತಿಗೆ ಒಳಪಡಲಿದೆ.
ಕುದುರೆಮುಖಕ್ಕೆ ಕಡೆಗೂ ಒಲಿದ ಪರಿಸರ ಸೂಕ್ಷ್ಮ ವಲಯ ಪಟ್ಟ

ಬೆಂಗಳೂರು: ಹಲವು ವರ್ಷಗಳ ವಿಳಂಬದ ನಂತರ ಇದೀಗ ಕೇಂದ್ರ ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇಎಸ್ ಝಡ್) ಎಂದು ಘೋಷಿಸಿದೆ. ಇದರೊಂದಿಗೆ 316.67 ಚದರ ಕಿ.ಮೀ ವಿಸ್ತೀರ್ಣದ, ಸಂರಕ್ಷಿತ ಪ್ರದೇಶವು ಇಎಸ್ ಝಡ್ ವ್ಯಾಪ್ತಿಗೆ ಒಳಪಡಲಿದೆ. ಇದಲ್ಲದೆ, ಇಎಸ್ ಝಡ್ ಗೆ ಸೇರ್ಪಡೆಗೊಂಡ  ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 58 ಗ್ರಾಮಗಳು ಮತ್ತು 108  ರೆವಿನ್ಯೂ ಆವರಣಗಳಲ್ಲಿ  ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸುವ ಮತ್ತು ನಿಯಂತ್ರಿಸುವ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಸೋಮೇಶ್ವರ ವನ್ಯಜೀವಿ ಅಭಯಾರಣ್ಯಕ್ಕೆ ಹೊಂದಿಕೊಂಡಂತೆ ಇಎಸ್‌ ಝಡ್ ನ ರಾಷ್ಟ್ರೀಯ ಉದ್ಯಾನದ ಉತ್ತರ ಭಾಗದಲ್ಲಿ ಇದು ಬರಲಿದೆ. ಜುಲೈ 2 ರಂದು ಅಧಿಸೂಚನೆ ಹೊರಡಿಸಲಾಗಿದ್ದು 108  ರೆವಿನ್ಯೂ ಆವರಣಗಳು ಬೆಳ್ತಂಗಡಿ, ಶೃಂಗೇರಿ, ಕೊಪ್ಪ, ಮೂಡಿಗೆರೆ, ಕಾರ್ಕಳ ತಾಲ್ಲೂಕುಗಳಲ್ಲಿ ಬರಲಿದೆ,  ಮತ್ತೀಗ ಅವೆಲ್ಲವೂ  ಇಎಸ್ ಝಡ್ ಭಾಗವಾಗಲಿದೆ. ಅಧಿಸೂಚನೆಯ ದಿನಾಂಕದಿಂದ ಎರಡು ವರ್ಷಗಳಲ್ಲಿ ರಾಜ್ಯವು ಸೆಕ್ಟರ್ ಮಾಸ್ಟರ್ ಯೋಜನೆಯನ್ನು ಪ್ರಸ್ತಾಪಿಸಿ ರೂಪಿಸಬೇಕು. ಈ ಯೋಜನೆಯು ಇಎಸ್‌ ಝಡ್ ‌ನಲ್ಲಿ ಅಭಿವೃದ್ಧಿಯನ್ನು ನಿಯಂತ್ರಿಸುತ್ತದೆ ಮತ್ತು ನಿಷೇಧಿತ ಮತ್ತು ನಿಯಂತ್ರಿತ ಚಟುವಟಿಕೆಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುತ್ತದೆ. . ಭೂ ಬಳಕೆ ಬದಲಾವಣೆ ಗೆ ಅವಕಾಶವಿರುವುದಿಲ್ಲ. ಹೊಸ ಹೋಟೆಲ್‌ಗಳು ಅಥವಾ ರೆಸಾರ್ಟ್‌ಗಳು ಅಥವಾ ವಾಣಿಜ್ಯ ಸಂಸ್ಥೆಗಳು ಅಥವಾ ಬೆಟ್ಟದ ಇಳಿಜಾರುಗಳಲ್ಲಿ ಹೊಸ ನಿರ್ಮಾಣ ಕಾರ್ಯಕ್ಕೆ  ಅನುಮತಿ ನೀಡಲಾಗುವುದಿಲ್ಲ.

“ಇದು ಪಶ್ಚಿಮ ಘಟ್ಟದ ​​ಅರಣ್ಯ ಪ್ರದೇಶವಾಗಿದ್ದು, ಕಳೆದ 15 ವರ್ಷಗಳಲ್ಲಿ ನಿಧಾನವಾಗಿ ಪುನಶ್ಚೇತನಗೊಂಡಿದೆ. ಇಎಸ್ ಝಡ್  ತನ್ನ ಅಪರೂಪದ ಸಸ್ಯ ಮತ್ತು ಪ್ರಾಣಿಗಳ ರಕ್ಷಣೆಯನ್ನು ಖಚಿತಪಡಿಸುತ್ತದೆ. ” ಗೌರವಾನ್ವಿತ ವನ್ಯಜೀವಿ ವಾರ್ಡನ್ ಅಧಿಸೂಚನೆಯನ್ನು ಸ್ವಾಗತಿಸಿ ಮಾತನಾಡಿದ್ದಾರೆ.  ಮೂರು ಜಿಲ್ಲೆಗಳ ಗಡಿಯಲ್ಲಿ ಬರುವ ಕುದುರೆಮುಖ ಕಡಿಮೆ ಎತ್ತರದ ಮರದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳನ್ನು ಮತ್ತು ಪಶ್ಚಿಮ ಘಟ್ಟದ ​​ಸಂಪೂರ್ಣ ವಿಸ್ತಾರದಲ್ಲಿ ಶೋಲಾ-ಗ್ರಾಸ್‌ಲ್ಯಾಂಡ್ ವಿಶೇಹ್ಶ್ಷಗಳನ್ನು ಹೊಂದಿರುವ ವಿಶಿಷ್ಟ ಪ್ರದೇಶವಾಗಿದೆ.

ಸಮುದ್ರ ಮಟ್ಟದಿಂದ 135 ಮೀಟರ್ ಎತ್ತರದಿಂದ 1,900 ಮೀಟರ್ ವರೆಗೆ ವಿಸ್ತರಿಸಿದ ಕುದುರೆಮುಖದಲ್ಲಿ 2005ರಲ್ಲಿ ಕೆಐಒಸಿಎಲ್ ಕಂಪನಿಯು ಗಣಿಗಾರಿಕೆಯನ್ನು ನಿಲ್ಲಿಸಿತು. ಕುದುರೆಮುಖ ಸಸ್ಯ ಸಂಪತ್ತುಪ್ರಾಣಿಗಳ ಮೌಲ್ಯವು ನಿರ್ಣಾಯಕ ಮಹತ್ವದ್ದಾಗಿದೆ. ಭಾರತ ಮತ್ತು ವಿಶ್ವದ ಸಿಂಹಗಳ ಮೂತಿಯ ಹೋಲುವ ಮಕಾಕ್ಸ್ ಗಳ ಏಕೈಕ ತಾಣವೂ ಹೌದು. ಅಲ್ಲದೆ ವಿಶ್ವದ ಅತಿ ಉದ್ದದ ವಿಷಪೂರಿತ ಹಾವು, ಕಾಳಿಂಗ ಸರ್ಪ (ಕಿಂಗ್ ಕೋಬ್ರಾ)ತ್ತು ಮಲಬಾರ್ ಸ್ಲೆಂಡರ್ ಲೋರಿಸ್ಟ್  ಗಳ ನೆಲೆಯೂ ಆಗಿದೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com