ಅಕ್ರಮ ಬೇಟೆಗಾರರ ಎಡೆಮುರಿ ಕಟ್ಟಲು ಸಿದ್ಧವಾಗಿದೆ ಕಾಲ್ ಭೈರವ ತಂಡ

ರಾಜ್ಯದಲ್ಲಿ ಅಕ್ರಮ ಬೇಟೆ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿವೆ. ಶಿರಸಿ ಅರಣ್ಯ ಇಲಾಖೆಯಲ್ಲಿ  ಇಂತಹ ಚಟುವಟಿಕೆಗಳು ಹೆಚ್ಚಿದ ಹಿನ್ನೆಲೆಯಲ್ಲಿ  ವನ್ಯಜೀವಿಗಳನ್ನು ರಕ್ಷಿಸುವ ಸಲುವಾಗಿ ಆರು ಕಾಲ್ ಭೈರವ ತಂಡ ರಚಿಸಲಾಗಿದೆ. ಈ ತಂಡಗಳು ಹಗಲು ರಾತ್ರಿ ಗಸ್ತು ತಿರುಗುತ್ತಿರುತ್ತವೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾದಿಂದಾಗಿ  ರಾಜ್ಯದ ಅರಣ್ಯ ಗಳಲ್ಲಿ ನಿಷೇಧಿತ ಕಾರ್ಯಚಟುವಟಿಕೆಗಳು ಹೆಚ್ಚಾಗುತ್ತಿವೆ, ಇದರಿಂದ ಅರಣ್ಯ ಇಲಾಖೆ ಸಮಸ್ಯೆಗಳು ಹೆಚ್ಚಾಗಿದೆ. 

ರಾಜ್ಯದಲ್ಲಿ ಅಕ್ರಮ ಬೇಟೆ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿವೆ. ಶಿರಸಿ ಅರಣ್ಯ ಇಲಾಖೆಯಲ್ಲಿ  ಇಂತಹ ಚಟುವಟಿಕೆಗಳು ಹೆಚ್ಚಿದ ಹಿನ್ನೆಲೆಯಲ್ಲಿ  ವನ್ಯಜೀವಿಗಳನ್ನು ರಕ್ಷಿಸುವ ಸಲುವಾಗಿ ಆರು ಕಾಲ್ ಭೈರವ ತಂಡ ರಚಿಸಲಾಗಿದೆ. ಈ ತಂಡಗಳು ಹಗಲು ರಾತ್ರಿ ಗಸ್ತು ತಿರುಗುತ್ತಿರುತ್ತವೆ. 

ಇತ್ತೀಚೆಗೆ ಸಿದ್ದಾಪುರ ಅರಣ್ಯ ವಲಯಾಧಿಕಾರಿಗಳು ವನ್ಯಜೀವಿ ಮಾಂಸವನ್ನು ಸಂಸ್ಕರಿಸಿದ ಕಳ್ಳ ಬೇಟೆಗಾರರನ್ನು ಬಂಧಿಸಿದ್ದರು ಮತ್ತು ಮೀಸಲು ಅರಣ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆದರು.

ಕೆನರಾ ಸರ್ಕಲ್ ನ ಸಿಸಿಎಫ್ ಯತೀಶ್ ಕುಮಾರ್ ರಾತ್ರಿ ಪಾಳಿಯ ಗಸ್ತು ಹೆಚ್ಚಿಸಲು ತಂಡವನ್ನು ಮತ್ತಷ್ಟು ಸದೃಢಗೊಳಿಸಿದ್ದಾರೆ, ಈ ತಂಡ 12 ಗಂಟೆ ಗಸ್ತು ತಿರುಲಿದೆ.

ಪ್ರತಿ ತಂಡದಲ್ಲಿ  ಇಬ್ಬರು ಆರ್ ಎಫ್ ಒ ಮತ್ತು ಇಬ್ಬರು ಗಾರ್ಡ್ ಮತ್ತು ಇಬ್ಬರು ವಾಚರ್ ಇರುತ್ತಾರೆ. ಈ ತಂಡ ಜುಲೈ 19 ರಂದು ಬೇಟೆಗಾಗಿ ಹೊಂಚು ಹಾಕುತ್ತಿದ್ದ ಇಬ್ಬರನ್ನು ನಿಡಗೋಡು ಪ್ರದೇಶದ ಅರಸಿಕಟ್ಟೆ ಪ್ರದೇಶದಲ್ಲಿ ಸೆರೆ ಹಿಡಿದಿದ್ದರು. 

ಹೊನ್ನೆಹಡ್ಡದ ಚಂದ್ರ ಶೇಖರ್ ನಾಯಕ್ ಮತ್ತು ರಾಮಚಂದ್ರ ನಾಯಕ್ ಅವರನ್ನು ಬಂಧಿಸಿ ಅವರಿಂದ ಗನ್ ಮತ್ತು ಕಾಟ್ರಿಜ್ ಗಳನ್ನು ವಶಕ್ಕೆ ಪಡೆದು ಅವರ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಜುಲೈ 24 ರಂದು ಕಾಲ್ ಬೈರವ್ ತಂಡ ಬೊಗಳುವ ಜಿಂಕೆ ಮಾಂಸ ವಶಪಡಿಸಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com