ಕರ್ನಾಟಕಕ್ಕೆ ಆಗಮಿಸಿದ ಹುಲಿ
ಕರ್ನಾಟಕಕ್ಕೆ ಆಗಮಿಸಿದ ಹುಲಿ

ಮಹಾರಾಷ್ಟ್ರದಿಂದ 300 ಕಿಮೀ ಕ್ರಮಿಸಿ ಕರ್ನಾಟಕದ ಹೊಸ ಮನೆಗೆ ಆಗಮಿಸಿದ ವ್ಯಾಘ್ರ!

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಜನರಿಗೆ ಗಡಿ ದಾಟಲು ಅವಕಾಶವಿಲ್ಲ, ಆದರೆ ಇದೇ ನಿಯಮ ಪ್ರಾಣಿಗಳಿಗಿಲ್ಲ, ಹೀಗಾಗಿ ಹುಲಿಯೊಂದು 300 ಕಿಮೀ ಕ್ರಮಿಸಿ ಕರ್ನಾಟಕಕ್ಕೆ ಆಗಮಿಸಿದೆ.

ಹುಬ್ಬಳ್ಳಿ: ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಜನರಿಗೆ ಗಡಿ ದಾಟಲು ಅವಕಾಶವಿಲ್ಲ, ಆದರೆ ಇದೇ ನಿಯಮ ಪ್ರಾಣಿಗಳಿಗಿಲ್ಲ, ಹೀಗಾಗಿ ಹುಲಿಯೊಂದು 300 ಕಿಮೀ ಕ್ರಮಿಸಿ ಕರ್ನಾಟಕಕ್ಕೆ ಆಗಮಿಸಿದೆ.

ಮಹಾರಾಷ್ಟ್ರದ ಚಂಡೋಳಿ ರಾಷ್ಟ್ರೀಯ ಉದ್ಯಾನವನದ ಸಹ್ಯಾದ್ರಿ ಹುಲಿ ಸಂರಕ್ಷಣಾ ಧಾಮದಿಂದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಣಾ ಧಾಮಕ್ಕೆ ಬಂದಿದೆ.

ಹುಲಿ 2018 ರಲ್ಲಿ ಸಹ್ಯಾದ್ರಿ ಟೈಗರ್ ರಿಸರ್ವ್ ನಂದೂರ್‌ಬಾರ್‌ನಲ್ಲಿ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿತ್ತು. 2020 ರ ಮೇನಲ್ಲಿ ದಾಂಡೇಲಿಯ ಕಾಳಿ ಟೈಗರ್ ರಿಸರ್ವ್‌ನಲ್ಲಿ ಅದೇ ಹುಲಿ ಬಂದಿದೆ. 2020 ರ ಏಪ್ರಿಲ್ ಮತ್ತು ಮೇ ನಡುವೆ ಹುಲಿ (ಟಿ -31) ಹಲವು ಬಾರಿ ಕಾಣಿಸಿಕೊಂಡಿತ್ತು ಎಂದು ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ, ಹುಲಿ 150 ಚದರ ಕಿ.ಮೀ ಪ್ರದೇಶವನ್ನು ಚಲಿಸಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಎರಡು ವನ್ಯಜೀವಿ ಪ್ರದೇಶಗಳ ನಡುವಿನ ಅಂತರವು ಸುಮಾರು 225 ಕಿ.ಮೀ ಆದರೆ ಹುಲಿ ಛಿದ್ರಗೊಂಡ ಭೂದೃಶ್ಯದ ಮೂಲಕ ಚಲಿಸಲು ಹೆಚ್ಚು ಸಮಯ ತೆಗೆದುಕೊಂಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕರ್ನಾಟಕ-ಗೋವಾ-ದಕ್ಷಿಣ ಮಹಾರಾಷ್ಟ್ರದ ಸಂಪರ್ಕಿತ ಭೂದೃಶ್ಯದಲ್ಲಿ ಕಾಳಿ ಹುಲಿ ಮೀಸಲು ಹುಲಿಗಳಿಗೆ ಗಮನಾರ್ಹ ಆಕರ್ಷಣೆಯಾಗಿ ಹೊರಹೊಮ್ಮುತ್ತಿದೆ ಎಂದು  ಇಲಾಖೆ ಗಮನಿಸಿದೆ.

2020 ರಲ್ಲಿ ಕಾಳಿ ಟೈಗರ್ ರಿಸರ್ವ್‌ನಲ್ಲಿ ಸುಮಾರು 25 ವಯಸ್ಕ ಹುಲಿಗಳನ್ನು ಕ್ಯಾಮೆರಾ ಬಲೆಗಳಲ್ಲಿ ದಾಖಲಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಕಾಳಿಯ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಪ್ರಯತ್ನಗಳು ಈಗ ಫಲಿತಾಂಶ ನೀಡುತ್ತಿದೆ. ಕಾಳಿ ಮೀಸಲು ಇಡೀ ಉತ್ತರ ಕರ್ನಾಟಕ-ಗೋವಾ-ದಕ್ಷಿಣ ಮಹಾರಾಷ್ಟ್ರ ಭೂದೃಶ್ಯಕ್ಕೆ ಹುಲಿಗಳ ಮೂಲವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಾಳಿ ಹುಲಿ ಸಂರಕ್ಷಣಾ ಅರಣ್ಯ ವಿಭಾಗದ ನಿರ್ದೇಶಕ ಮರಿಯಾ ಕ್ರಿಸ್ಟಾ ರಾಜು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com