ಆಗಸ್ಟ್ ಮಧ್ಯಭಾಗದಲ್ಲಿ ಕೆಸಿಇಟಿ ಫಲಿತಾಂಶ ಪ್ರಕಟ: ಡಿಸಿಎಂ ಅಶ್ವತ್ಥನಾರಾಯಣ

ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಕೆಸಿಇಟಿ) ಫಲಿತಾಂಶಗಳನ್ನು ಆಗಸ್ಟ್ 15 ರೊಳಗೆ ಘೋಷಿಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.  ಸಿ.ಎನ್. .ಅಶ್ವತ್ಥನಾರಾಯಣ ಹೇಳಿದ್ದಾರೆ. ಕಾಲೇಜುಗಳು ಸೆಪ್ಟೆಂಬರ್ ವೇಳೆಗೆ ಪ್ರವೇಶಕ್ಕೆ ತಯಾರಿ ನಡೆಸಲು ಅನುಕೂಲವಾಗುತ್ತದೆ. ಆ ವೇಳೆ ಶಾಲೆ-ಕಾಲೇಜುಗಳು ಪು
ಆಗಸ್ಟ್ ಮಧ್ಯಭಾಗದಲ್ಲಿ ಕೆಸಿಇಟಿ ಫಲಿತಾಂಶ ಪ್ರಕಟ: ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು: ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಕೆಸಿಇಟಿ) ಫಲಿತಾಂಶಗಳನ್ನು ಆಗಸ್ಟ್ 15 ರೊಳಗೆ ಘೋಷಿಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.  ಸಿ.ಎನ್. .ಅಶ್ವತ್ಥನಾರಾಯಣ ಹೇಳಿದ್ದಾರೆ. ಕಾಲೇಜುಗಳು ಸೆಪ್ಟೆಂಬರ್ ವೇಳೆಗೆ ಪ್ರವೇಶಕ್ಕೆ ತಯಾರಿ ನಡೆಸಲು ಅನುಕೂಲವಾಗುತ್ತದೆ. ಆ ವೇಳೆ ಶಾಲೆ-ಕಾಲೇಜುಗಳು ಪುನಾರಂಭವಾಗುವ ನಿರೀಕ್ಷೆ ಇದೆ ಎಂದು ಸಿಇಟಿ ಪರೀಕ್ಷೆ ಪ್ರಥಮ ದಿನ ಹೇಳಿದ್ದಾರೆ. 

ಸಾಂಕ್ರಾಮಿಕ ರೋಗದ ಮಧ್ಯೆ ವಿಳಂಬವಾಗಿ ನಡೆದ  ಕೆಸಿಇಟಿಯ ಮೊದಲ ದಿನ 6,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ವರದಿಯಾಗಿದ್ದರೂ ಗಣನೀಯ ಪ್ರಮಾಣದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. . 1,94,419 ನೋಂದಾಯಿತ ಅಭ್ಯರ್ಥಿಗಳಲ್ಲಿ, 75.89 ರಷ್ಟು ಜನರು ಜೀವಶಾಸ್ತ್ರ ಪರೀಕ್ಷೆಯನ್ನು ಬರೆದಿದ್ದಾರೆ ಮತ್ತು 89.22 ಶೇಕಡಾ ಮಂದಿ ಗಣಿತ ಪರೀಕ್ಷೆ ತೆಗೆದುಕೊಂಡಿದ್ದಾರೆ. ಇದು ಹಿಂದಿನ ವರ್ಷದ ಜೀವಶಾಸ್ತ್ರ ಹಾಗೂ ಗಣಿತ ವಿಷಯದ ಪರೀಕ್ಷೆ ತೆಗೆದುಕೊಂಡವರಿಗೆ ಹೋಲಿಸಿದರೆ ಕಡಿಮೆ ಸಂಖ್ಯೆಯಾಗಿದೆ. ಕಳೆದ ಸಾಲಿನಲ್ಲಿ ಶೇ. 79.90 ಮಂದಿ ಜೀವಶಾಸ್ತ್ರ ಹಾಗೂ ಶೇ.  91.92ಮಂದಿ ಗಣಿತ ಪರೀಕ್ಷೆ ಬರೆದಿದ್ದರು.

ಸಿಇಟಿಗೆ ಮುಂಚಿತವಾಗಿ 12 ನೇ ತರಗತಿ ಫಲಿತಾಂಶ ಪ್ರಕಟಣೆ ಆಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.  ಇದರಿಂದಾಗಿ ಅನರ್ಹ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಅಭ್ಯರ್ಥಿಗಳಲ್ಲಿ ಜೀವಶಾಸ್ತ್ರ ವಿಷಯದ 49 ವಿದ್ಯಾರ್ಥಿಗಳು ಗಣಿತದ ವಿಷಯದ 57 ವಿದ್ಯಾರ್ಥಿಗಳು ಕೋವಿಡ್ -19 ಧನಾತ್ಮಕ ವರದಿ ಪಡೆದಿದ್ದಾರೆ. ಅವರು ರಾಜ್ಯದ 22 ಜಿಲ್ಲೆಗಳಲ್ಲಿ ತಮ್ಮ ಪರೀಕ್ಷೆಗಳನ್ನು ಬರೆದಿದ್ದಾರೆ ಎಂದು ಸಚಿವರು ವಿವರಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಕೋವಿಡ್ ಕೇರ್ ಕೇಂದ್ರಗಳಲ್ಲಿ ಸಭಾಂಗಣಗಳನ್ನು ಹಂಚಿಕೆ ಮಾಡಲಾಗಿದ್ದು, ಇನ್ವಿಜಿಲೇಟರ್‌ಗಳು ಸಹ ಹೆಚ್ಚಿನ ಕಾಳಜಿ ವಹಿಸಿದ್ದಾರೆ ಮತ್ತು ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಚ ಮಾಡಲಾಗಿದೆ. 

ರಾಜ್ಯದ 60 ಕೋವಿಡ್ -19 ಧನಾತ್ಮಕ ವಿದ್ಯಾರ್ಥಿಗಳ ಶೇಕಡಾ 100 ರಷ್ಟು ಹಾಜರಾತಿಯ ವಿಶ್ವಾಸವಿದೆ. ಆಂಬ್ಯುಲೆನ್ಸ್‌ಗಳು ಅವರನ್ನು ಪರೀಕ್ಷಾ ಕೇಂದ್ರಕ್ಕೆ ಮತ್ತು ಮನೆಗೆ ತಲುಪಿಸಿದೆ.  ಪರೀಕ್ಷಾ ಕೇಂದ್ರದ ಹೊರಗೆ ಜನಸಂದಣಿಯ ಘಟನೆಗಳು ಸಚಿವರಿಗೆ ವರದಿಯಾಗಿದ್ದರೂ, ಅವರು ಆ ಎಲ್ಲಾ ಆರೋಪವನ್ನೂ ಬದಿಗೊತ್ತಿ , ಅಂತಹ ಯಾವುದೇ ಘಟನೆಗಳಿಗೆ ತಾನು ಸಾಕ್ಷಿಯಾಗಿಲ್ಲ ಎಂದಿದ್ದಾರೆ.

ಸಿಇಟಿಯಲ್ಲಿ ಪ್ರಶ್ನೆಗಳೊಂದಿಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಹಾಯವಾಣಿ

ಕೆ ಆರ್ ಪುರಂ ಮತ್ತು ರಾಮಮೂರ್ತಿ ನಗರದಲ್ಲಿ, ಒಎಂಆರ್ ಹಾಳೆಗಳ ವಿತರಣೆಯಲ್ಲಿ ಗೊಂದಲ ಉಂಟಾಯಿತು, ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಕೈಗಡಿಯಾರಗಳನ್ನು ಧರಿಸಲು ಅವಕಾಶವಿಲ್ಲದ ಕಾರಣ, ಪರೀಕ್ಷಾ ಕೊಠಡಿಯಲ್ಲಿ ಗೋಡೆ ಗಡಿಯಾರಗಳಿಲ್ಲದ ಕಾರಣ ಸಮಯವನ್ನು ನಿರ್ವಹಿಸಲು ಅವರಿಗೆ ಕಷ್ಟವಾಯಿತು. 

ಕೆಸಿಇಟಿಗೆ ಸಂಬಂಧಿಸಿದ ಯಾವುದೇ ತೊಂದರೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಇಲಾಖೆ ಸಹಾಯವಾಣಿ (08-023460460, 080-23564583) ಸ್ಥಾಪಿಸಿದೆ.

ಜಿಕೆವಿಕೆ ಕ್ಯಾಂಪಸ್‌ನ ರೈತ ತರಬೇತಿ ಮತ್ತು ವಸತಿ ಕೇಂದ್ರದಲ್ಲಿ ನಾಲ್ಕು ಲಕ್ಷಣರಹಿತ ಕೋವಿಡ್ -19 ಧನಾತ್ಮಕ ಕೆಸಿಇಟಿ ಅಭ್ಯರ್ಥಿಗಳನ್ನು ಡಿಸಿಎಂ ಅಶ್ವತ್ಥನಾರಾಯಣ ಭೇಟಿ ಮಾಡಿ ಅವರೊಂದಿಗೆ ಮಾತನಾಡಿ ಉತ್ತಮ ಫಲಿತಾಶ ಬರುವಂತೆ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು. ವಿಶೇಷವೆಂದರೆ  ವೈದ್ಯರು ಇಲ್ಲಿ ಪರೀಕ್ಷಾ ಹಾಲ್ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದರು.

ನಾಲ್ಕು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವನ್ನು ಕನಿಷ್ಠ 10 ಸಿಬ್ಬಂದಿ ನಿರ್ವಹಿಸಿದ್ದಾರೆ. "ಇದು ವಿಶೇಷ ಅದ್ಭುತ ಅನುಭವ"  ಅವರು ಹೇಳಿದರು. ಪಿಪಿಇ ಸೂಟ್ ಧರಿಸಿ, ಸಚಿವರು ಆಂಬ್ಯುಲೆನ್ಸ್ ಮೂಲಕ ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ. ತಾವು ಆರಾಮವಾಗಿದ್ದೇವೆ ಎಂದು ವಿದ್ಯಾರ್ಥಿಗಳುಸಚಿವರಿಗೆ ಮನವರಿಕೆ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com