
ಮೈಸೂರು: ಮೈಸೂರಿನ ಟಿ ನರಸಿಪುರ ಪೊಲೀಸ್ ಠಾಣೆಯ ಒಳಗೆ ಇಡಲಾಗಿದ್ದ 50 ಸಜೀವ ಗುಂಡುಗಳು ನಾಪತ್ತೆಯಾಗಿದ್ದು, ಅಲ್ಲದೇ ಇದೇ ಠಾಣೆಯಲ್ಲಿ ಇದೀಗ ಗುಂಡುಗಳ ನಾಪತ್ತೆ ಪ್ರಕರಣ ದಾಖಲಾಗಿದೆ.
ಮೇ.28 ರಂದು ಜಿಲ್ಲಾ ಶಸಸ್ತ್ರ ಮೀಸಲು ಪಡೆ ತಂಡ ಶಿಷ್ಠಾಚಾರದಂತೆ ಟಿ.ನರಸೀಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಶಸಸ್ತ್ರ ಮೀಸಲು ಪಡೆಯಿಂದ ನೀಡಲಾಗುವ ಗನ್,ಬುಲೆಟ್ ಸೇರಿದಂತೆ ಇತರೆ ಪದಾರ್ಥಗಳ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಠಾಣೆಗೆ ನೀಡಿದ್ದ ಎಲ್ಲ ಗನ್ ಹಾಗೂ ಬುಲೆಟ್‌ಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗಿರುವುದು ಕಂಡು ಬಂದಿದೆ.
ಟಿ.ನರಸೀಪುರ ಠಾಣಾ ವ್ಯಾಪ್ತಿಗೆ ನೀಡಿದ್ದ 303 ರೈಫಲ್ಗೆ ಬಳಸುವ ಗುಂಡುಗಳಲ್ಲಿ 50 ಸಜೀವ ಗುಂಡುಗಳು ನಾಪತ್ತೆಯಾಗಿವೆ. ಠಾಣೆಗೆ 303 ರೈಫಲ್‌ಗೆ ಬಳಸಲು ಒಟ್ಟು 2,500 ಗುಂಡುಗಳನ್ನ ನೀಡಲಾಗಿತ್ತು. ಆದರೆ ಪರಿಶೀಲನೆ ವೇಳೆ 2,450 ಗುಂಡುಗಳು ಮಾತ್ರ ಇದ್ದು, 50 ಸಜೀವ ಗುಂಡುಗಳು ನಾಪತ್ತೆಯಾಗಿವೆ.
ಠಾಣೆಯಲ್ಲಿ ಈ ಬಗ್ಗೆ ಯಾವುದೇ ಲೆಕ್ಕ ಇಲ್ಲ. ಇನ್ನೂ ಎಲ್ಲಿಯೂ ಸಹ ಫೈರಿಂಗ್ ಅಥವಾ ಫೈರಿಂಗ್ ತರಬೇತಿಯೂ ನಡೆದಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವ ಶಸಸ್ತ್ರ ಮಿಸಲು ಪಡೆ ಸಿಬ್ಬಂದಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಸಿ.ಬಿ. ರಿಷ್ಯಂತ್‌ಗೆ ಮೇ.31ರಂದು ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿದ್ದಾರೆ.
ಈ ವರದಿಯಲ್ಲಿ ಠಾಣೆಯಲ್ಲಿ 303 ರೈಫಲ್‌ಗೆ ಬಳಸುವ 50 ಸಜೀವ ಗುಂಡು ನಾಪತ್ತೆಯಾಗಿವೆ ಎಂದು ಉಲ್ಲೇಖಿಸಿದ್ದಾರೆ. ಈ ಸಂಬಂಧ ಅದೆ ಠಾಣೆಯಲ್ಲಿ ದೂರು ದಾಖಲಾಗಿದ್ದು 50 ಸಜೀವ ಗುಂಡುಗಳು ಠಾಣೆಯಿಂದ ಕಳ್ಳತನವಾಗಿರುವ ಶಂಕೆ ಮೇಲೆ ಎಫ್‌ಐಆರ್ ದಾಖಲಾಗಿದೆ.
Advertisement