ರಾಜ್ಯಾದ್ಯಂತ ತೆರೆದಿವೆ ದೇವಸ್ಥಾನ, ಚರ್ಚ್, ಮಸೀದಿಗಳು: ಪಾಲಿಸಬೇಕಾದ ನಿಯಮಗಳೇನು?

ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಎರಡೂವರೆ ತಿಂಗಳಿನಿಂದ ಬಾಗಿಲು ಹಾಕಿದ್ದ ರಾಜ್ಯದ ದೇವಾಲಯ, ಮಸೀದಿ, ಚರ್ಚ್ ಗಳು ಸೋಮವಾರ ತೆರೆದಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಎರಡೂವರೆ ತಿಂಗಳಿನಿಂದ ಬಾಗಿಲು ಹಾಕಿದ್ದ ರಾಜ್ಯದ ದೇವಾಲಯ, ಮಸೀದಿ, ಚರ್ಚ್ ಗಳು ಸೋಮವಾರ ತೆರೆದಿವೆ.

ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಬೆಳಗ್ಗೆಯೇ ಬಂದು ದೇವರ ದರ್ಶನ ಪಡೆದಿದ್ದು ಕಂಡುಬಂತು. ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಧಾರ್ಮಿಕ ಕೇಂದ್ರಗಳು ಬಾಗಿಲು ತೆರೆದಿವೆ.

ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಎರಡೂವರೆ ತಿಂಗಳಿನಿಂದ ಬಾಗಿಲು ಹಾಕಿದ್ದ ರಾಜ್ಯದ ದೇವಾಲಯ, ಮಸೀದಿ, ಚರ್ಚ್ ಗಳು ಸೋಮವಾರ ತೆರೆದಿವೆ.

ಈ ಹಿನ್ನೆಲೆಯಲ್ಲಿ ಇಂದು ನಸುಕಿನಿಂದಲೇ ದೇವಸ್ಥಾನದ ಬಾಗಿಲು ತೆರೆದು ಅರ್ಚಕರು ದೇವರ ಮೂರ್ತಿಗಳನ್ನು ತೊಳೆದು, ಆವರಣಗಳನ್ನು ಸ್ವಚ್ಛಗೊಳಿಸಿ ಪೂಜೆಗೆ ಸಿದ್ಧತೆ ಮಾಡಿಕೊಂಡರು. ಭಕ್ತರು ಸಹ ದೇವಾಲಯಗಳಿಗೆ ಹೋಗುವ ಹುಮ್ಮಸ್ಸಿನಲ್ಲಿದ್ದಾರೆ.

ಕರ್ನಾಟಕದಲ್ಲಿ ದೇವಾಲಯಗಳನ್ನು ಜೂನ್ 1ಕ್ಕೆ ಆರಂಭ ಮಾಡಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಬರಲು ಸರ್ಕಾರ ಕಾಯುತ್ತಿತ್ತು ಎಂದು ಮುಜರಾಯಿ ಇಲಾಖೆ ಸಚಿವ ಶ್ರೀನಿವಾಸ ಪೂಜಾರಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.ದೇವಸ್ಥಾನ, ಮಸೀದಿಗಳು ಇಂದು ಬೆಳಗ್ಗೆಯಿಂದ ತೆರೆದರೂ ಕೂಡ ಕ್ಯಾಥೊಲಿಕ್ ಚರ್ಚ್ ಗಳು ಜೂನ್ 13ರವರೆಗೆ ಕಾಯುತ್ತಿವೆ.

ತಿರುಪತಿ ದೇವಾಲಯದಲ್ಲಿ ಇಂದು ಭಕ್ತರ ದರ್ಶನದ ಪ್ರಾಯೋಗಿಕ ದರ್ಶನ ನಡೆಯಿತು.

ದೇವಸ್ಥಾನದಲ್ಲಿ ಏನು ನಿಯಮ:ದೇವಸ್ಥಾನ ತೆರೆದರೂ ಕೂಡ ಭಕ್ತರಿಗೆ ತೀರ್ಥ, ಪ್ರಸಾದದ ಭಾಗ್ಯ ಸದ್ಯಕ್ಕೆ ಸಿಗುವುದಿಲ್ಲ. 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರನ್ನು ಬಿಡುವುದಿಲ್ಲ. ದೇವಸ್ಥಾನ, ಮಸೀದಿಗಳಿಗೆ ಹೋಗುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹೋಗಬೇಕು. ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಪ್ರವೇಶ ದ್ವಾರದ ಸಮೀಪ ಥರ್ಮಲ್ ಸ್ಕ್ರೀನಿಂಗ್, ಸೋಪ್, ಸ್ಯಾನಿಟೈಸರ್ ಕಡ್ಡಾಯವಾಗಿ ಇರಬೇಕು. ಎಲ್ಲಾ ನಿಯಮಗಳನ್ನು ದೇವಸ್ಥಾನದಲ್ಲಿರುವವರು ಮತ್ತು ಹೊರಗಿನಿಂದ ಹೋಗುವ ಭಕ್ತರು ಕಟ್ಟುನಿಟ್ಟಾಗಿ ಪಾಲಿಸಬೇಕು.

ಮಸೀದಿಗಳಲ್ಲಿ ಅಧಿಕಾರಿಗಳು ಏನು ಹೇಳುತ್ತಾರೆ?: ಮಸೀದಿಗಳಲ್ಲಿ ಪ್ರಾರ್ಥನೆಗೆ ಭಕ್ತರು ಕಡ್ಡಾಯವಾಗಿ ಮ್ಯಾಟ್ ಮತ್ತು ನೀರನ್ನು ತಾವೇ ತರಬೇಕು. ಕೆಲವು ಮಸೀದಿಗಳು ಬೆಳಗ್ಗೆ 5 ಗಂಟೆಗೆ ಫಜಾರ್ ಗೆ ತೆರೆದರೆ ಇನ್ನು ಕೆಲವು ಜೊಹರ್ ನಮಾಜ್ ಗೆ ಮಧ್ಯಾಹ್ನ 1 ಗಂಟೆಗೆ ಮತ್ತೆ ತೆರೆಯುತ್ತವೆ, ಪ್ರಾರ್ಥನೆ ಮುಗಿದ ನಂತರ ಯಾರೂ ಗುಂಪುಗೂಡಿ ಮಾತನಾಡಿಕೊಂಡು ನಿಲ್ಲುವಂತಿಲ್ಲ ಎಂದು ಅಮಿರ್ ಎ-ಶರಿಯತ್ ನ ಎಸ್ ಎ ರಶದಿ ತಿಳಿಸಿದ್ದಾರೆ.

ಆರ್ಚ್ ಬಿಷಪ್ ಪೀಟರ್ ಮಚಾಡೊ ಮಾಹಿತಿ ನೀಡಿ, ಕ್ಯಾಥೊಲಿಕ್ ಚರ್ಚ್ ಗಳು ಜೂನ್ 13ರಿಂದ ಆರಂಭವಾಗುತ್ತವೆ. ಚರ್ಚ್ ಗಳಲ್ಲಿ ಸಾಕಷ್ಟು ಪೂರ್ವ ತಯಾರಿ ನಡೆಸಿ, ಸ್ವಚ್ಛತಾ ಕಾರ್ಯಗಳನ್ನು ಮಾಡಿ ಪುನರಾರಂಭಿಸುತ್ತೇವೆ. ಬೇರೆ ಚರ್ಚ್ ಗಳು ಇಂದು ತೆರೆಯುತ್ತವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com