ಟಿಕ್‌ಟಾಕ್ ವಿಡಿಯೋ ಮೂಲಕ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ: ಬಂಟ್ವಾಳದಲ್ಲಿ ನಾಲ್ವರು ಅರೆಸ್ಟ್

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಂಟ್ವಾಳ ಗ್ರಾಮೀಣ ಠಾಣೆ ಪೊಲೀಸ್ ಸಿಬ್ಬಂದಿ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಬಂಟ್ವಾಳ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಂಟ್ವಾಳ ಗ್ರಾಮೀಣ ಠಾಣೆ ಪೊಲೀಸ್ ಸಿಬ್ಬಂದಿ ನಾಲ್ವರನ್ನು ಬಂಧಿಸಿದ್ದಾರೆ.

ಸಜಿಪನಡು ನಿವಾಸಿಗಳಾದ ಮೊಹಮ್ಮದ್ ಮಸೂದ್ (20), ಮೊಹಮ್ಮದ್ ಅಜೀಮ್ (20), ಅಬ್ದುಲ್ ಲತೀಫ್ (20) ಮತ್ತು ಮೊಹಮ್ಮದ್ ಅರ್ಫಾಜ್ (20) ಬಂಧಿತರು. ಹಿಂದೂ ಸ್ಮಶಾನವೊಂದರಲ್ಲಿ ಶಿವನ ವಿಗ್ರಹದ ಸುತ್ತಲೂ ಬೂಟುಗಳನ್ನು ಧರಿಸಿ ಅಸಭ್ಯವಾಗಿ ನೃತ್ಯ ಮಾಡಿದ್ದ ಇವರು ತಮ್ಮ ಈ ನೃತ್ಯವನ್ನು ಟಿಕ್ ಟಾಕ್ ವಿಡಿಯೋ ಮಾಡಿದ್ದಾರೆ ಎಂದು ವರದಿಯಾಗಿದೆ.

ಲಾಕ್ ಡೌನ್ ಅವಧಿಯಲ್ಲಿ ಅವರು ಅಕ್ರಮವಾಗಿ ಕಾಂಚಿನಡ್ಕ  ಪಡವ, ಶಜಿಪನಾಡಿನ ಶವಾಗಾರಕ್ಕೆ ಪ್ರವೇಶಿಸಿ, ಬೂಟುಗಳನ್ನು ಧರಿಸಿದಂತೆಯೇ ಶಿವನ ವಿಗ್ರಹದ ಬಳಿ  ಕುಳಿತು ಅದರ ಸುತ್ತಲೂ ನರ್ತಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಗ್ರಹದ ಬಳಿ ಬಿಯರ್ ಬಾಟಲಿಗಳು ಮತ್ತು ಗಾಂಜಾ ಸೇವಗೆ ಸಂಬಂಧಿಸಿ ಪುರಾವೆಗಳು ಸಹ ದೊರಕಿದ್ದು ಅವರು ಆಲ್ಕೋಹಾಲ್ ಮತ್ತು ಗಾಂಜಾ ಸೇವಿಸುವ ವಿಡಿಯೋ ಕೂಡ ವೈರಲ್ ಆಗಿದೆ.

ಆರೋ[ಪಿಗಳು ಹಿಂದೂ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದ್ದಾರೆಂದು ರುದ್ರಭೂಮಿಯ ಆಡಳಿತದ ನಿರ್ವಾಹಕರು ಪೊಲೀಸರಿಗೆ ದೂರು ನೀಡಿದ್ದರು.

ಬಂಟ್ವಾಳ ಡಿವೈಎಸ್ಪಿ ವ್ಯಾಲೆಂಟೈನ್ ಡಿಸೋಜಾ  ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ  ಸರ್ಕಲ್ ಇನ್ಸ್‌ಪೆಕ್ಟರ್ ಟಿ ಡಿ ನಾಗರಾಜ್ ಅವರ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಹಾಗೂ ಇತರರಿದ್ದ ತಂಡವು ದೂರು ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com