ಪ್ರವಾಸಿಗರಿಗೆ ವಯಸ್ಸಿನ ಮಿತಿ:ಸಂಕಷ್ಟದಲ್ಲಿ ಆತಿಥ್ಯ ವಲಯ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರವಾಸೋದ್ಯಮಕ್ಕೆ ರಾಜ್ಯದಲ್ಲಿ ಅನುಮತಿ ಕೊಡಲು ನಿರ್ಧರಿಸಿದರೂ ಕೂಡ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಹೋಮ್ ಸ್ಟೇಗಳಲ್ಲಿ, ರೆಸಾರ್ಟ್, ಹೊಟೇಲ್ ಗಳಲ್ಲಿ ಉಳಿದುಕೊಳ್ಳಲು ಅನುಮತಿಯಿಲ್ಲ ಎಂದು ಜಿಲ್ಲಾಡಳಿತ, ತಹಶಿಲ್ದಾರ್ ಕಟ್ಟುನಿಟ್ಟಾಗಿ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರವಾಸೋದ್ಯಮಕ್ಕೆ ರಾಜ್ಯದಲ್ಲಿ ಅನುಮತಿ ಕೊಡಲು ನಿರ್ಧರಿಸಿದರೂ ಕೂಡ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಹೋಮ್ ಸ್ಟೇಗಳಲ್ಲಿ, ರೆಸಾರ್ಟ್, ಹೊಟೇಲ್ ಗಳಲ್ಲಿ ಉಳಿದುಕೊಳ್ಳಲು ಅನುಮತಿಯಿಲ್ಲ ಎಂದು ಜಿಲ್ಲಾಡಳಿತ, ತಹಶಿಲ್ದಾರ್ ಕಟ್ಟುನಿಟ್ಟಾಗಿ ಹೇಳಿದೆ.

ಆತಿಥ್ಯ ವಲಯದ ಸದಸ್ಯರ ಜೊತೆ ಜಿಲ್ಲಾಡಳಿತ ಈ ಕುರಿತು ಸಭೆ ನಡೆಸಲಿದ್ದು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಬಗ್ಗೆ ಹೇಳಲಿದೆ. ಆದರೆ ಇದು ಆತಿಥ್ಯ ಸೇವೆಯ ಮಾಲೀಕರು ಮತ್ತು ರಜೆಯಲ್ಲಿ ಹೊರಗೆ ಹೋಗಬೇಕೆಂದು ಬಯಸುವವರಿಗೆ ಸರ್ಕಾರದ ನಿರ್ಧಾರ ಸಮಾಧಾನ, ಸಂತೋಷ ತಂದಿಲ್ಲ.

ಬೇರೆ ಕಡೆಗಳಲ್ಲಿ ರಜೆಯ ಮಜಾ ಮಾಡುವುದಕ್ಕಿಂತ ಅರಣ್ಯ ಪ್ರದೇಶಗಳಲ್ಲಿರುವ ಹೋಮ್ ಸ್ಟೇಗಳಿಗೆ ಹೋಗುವುದು ಹೆಚ್ಚು ಸುರಕ್ಷಿತ ಎಂದು ಜನರು ಭಾವಿಸುತ್ತಿರುವುದರಿಂದ ಹೋಂ ಸ್ಟೇಗಳಿಗೆ ಬೇಡಿಕೆ ಬರುತ್ತಿದೆ. ಆದರೆ ವಯಸ್ಸಿನ ಮಿತಿಯಿರುವುದರಿಂದ ಹಲವು ಕುಟುಂಬಗಳಿಗೆ ಹೋಗಲು ಸಾಧ್ಯವಾಗದೆ ಪ್ರವಾಸಿಗರು ಕಡಿಮೆಯಾಗುತ್ತಿದ್ದಾರೆ ಎಂದು ಹೋಂ ಸ್ಟೇ ಮಾಲೀಕ ಲೋಕೇಶ್ ಎಂ ಹೇಳುತ್ತಾರೆ.

ಪ್ರವಾಸಿಗರು ಕೂಡ ಅದೇ ಅಭಿಪ್ರಾಯ ಹೊಂದಿದ್ದಾರೆ.ನಮ್ಮ 8 ವರ್ಷದ ವರ್ಷದ ಮಗಳ ಜೊತೆ ಅರಣ್ಯ ಪ್ರದೇಶದ ಹತ್ತಿರ ಹೋಮ್ ಸ್ಟೇಗಳಿಗೆ ಹೋಗಲು ಯೋಚಿಸಿದ್ದೆವು. ಆದರೆ ನಮ್ಮ ಮಗಳು 10 ವರ್ಷಕ್ಕಿಂತ ಕೆಳಗಿನವಳಾಗಿರುವುದರಿಂದ ವಾಸ್ತವ್ಯ ನೀಡಲು ಸಾಧ್ಯವಿಲ್ಲ ಎಂದು ವಿಚಾರಿಸಿದಾಗ ಹೇಳಿದರು. ಈಗ ನಮಗೆ ಹೋಗಲು ಸಾಧ್ಯವಾಗುವುದಿಲ್ಲ. ಇಂತಹ ನಿಯಮ ಸರಿಯಿಲ್ಲ. ಸರ್ಕಾರ ಸಲಹೆ ನೀಡಿದೆಯಷ್ಟೆ ಹೊರತು ಆದೇಶ ಹೊರಡಿಸಿಲ್ಲ ಎಂದು ಐಟಿ ವೃತ್ತಿಪರೆ ಸುನಂದಾ ಯು ಹೇಳುತ್ತಾರೆ.

ಪ್ರವಾಸಿಗರು ಎಲ್ಲಿಂದ ಬರುತ್ತಾರೆ ಎಂದು ನೋಡಿಕೊಂಡು ಸ್ಥಳೀಯಾಡಳಿತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಈ ಬಗ್ಗೆ ನ್ಯೂ ಸಂಡೆ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಕೆ ಎನ್ ರಮೇಶ್, ಹೋಮ್ ಸ್ಟೇಗಳಲ್ಲಿ ಶುಚಿತ್ವದ ಬಗ್ಗೆ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಸಂಬಂಧಪಟ್ಟವರು ಸುರಕ್ಷಿತವಾಗಿರುವಂತೆ ಇಲಾಖೆ ಸಲಹೆ ನೀಡಿದೆ. ಆದರೂ ಆಯಾ ಜಿಲ್ಲಾಡಳಿತ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com