ಲಾಕ್ ಡೌನ್ ವೇಳೆಯಲ್ಲಿ ಹಳೇಯ ಫೋಟೋಗಳ ಹೊಸ ತಲೆ ನೋವು: ವೈರಲ್ ಫೋಟೋಗಳ ಅಸಲಿಯತ್ತೇನು?

ರಾಷ್ಟ್ರವ್ಯಾಪಿ ಕೊರೋನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ನಕಲಿ ಮಾಹಿತಿಯ ಜೊತೆಗೆ ಹಳೇಯ ಫೋಟೋಗಳು ವೈರಲ್ ಆಗುತ್ತಿವೆ. ಈ ವೈರಲ್ ಫೋಟೋಗಳು ಆನ್ ಲೈನ್ ಗಿರಕಿ ಹೊಡೆಯುತ್ತಿದ್ದು ಹೊಸ ಫೋಟೋಗಳೆಂಬಂತೆ
ಹಳೇಯ ಫೋಟೋಗಳು ಮತ್ತೆ ವೈರಲ್
ಹಳೇಯ ಫೋಟೋಗಳು ಮತ್ತೆ ವೈರಲ್
Updated on

ಹುಬ್ಬಳ್ಳಿ: ರಾಷ್ಟ್ರವ್ಯಾಪಿ ಕೊರೋನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ನಕಲಿ ಮಾಹಿತಿಯ ಜೊತೆಗೆ ಹಳೇಯ ಫೋಟೋಗಳು ವೈರಲ್ ಆಗುತ್ತಿವೆ. ಈ ವೈರಲ್ ಫೋಟೋಗಳು ಆನ್ ಲೈನ್ ಗಿರಕಿ ಹೊಡೆಯುತ್ತಿದ್ದು ಹೊಸ ಫೋಟೋಗಳೆಂಬಂತೆ ಬಿಂಬಿಸಲಾಗುತ್ತಿದೆ.

ಬೆಂಗಳೂರು ರಸ್ತೆಯಲ್ಲಿ ನವಿಲುಗಳು ಓಡಾಟ, ಹೆದ್ದಾರಿಯಲ್ಲಿ ಜಿಂಕೆ , ಇವುಗಳಲ್ಲಿ ಬಹುತೇಕ ಫೋಟೋಗಳು ಹಳೇಯವು,  ಮತ್ತೆ ನಕಲಿ ವಿಳಾಸದಲ್ಲಿ ಅಪ್ ಲೋಡ್ ಮಾಡುವುದು ಹೊಸ ಟ್ರೆಂಡ್ ಆಗಿದೆ. 

ಚಿರತೆಯೊಂದು ಹಸುವಿನ ಜೊತೆ ಇದ್ದ ಛಾಯಾಚಿತ್ರ ಬಹಳ ಹಿಂದಿನದ್ದು,  ಹಲವು ವರ್ಷಗಳ ಹಿಂದೆ ಗುಜರಾತ್ ನಲ್ಲಿ ತೆಗೆದ ಫೋಟೋ ಇದಾಗಿತ್ತು. ಇದನ್ನು ಅಸ್ಸಾಂ ನಲ್ಲಿ ತೆಗೆದದ್ದು ಎಂದು ನಕಲಿ ಲೋಕೇಷನ್ ಹಾಕಿ ಅಪ್ ಲೋಡ್ ಮಾಡಲಾಗಿತ್ತು. ಇದನ್ನು ತೆಗೆದ ಫೋಟೋ ಗ್ರಾಫರ್ ಗೆ ಗೊಂದಲ ಉಂಟಾಗಿತ್ತು.

ಬೆಂಗಳೂರಿನ ಕಾರ್ತಿಕ್ ರಗುವೇದಿ ಎಂಬುವರು ಇದೇ ರೀತಿಯ ಗೊಂದಲಕ್ಕೊಳಗಾಗಿದ್ದರು. ನಾಗರಹೊಳೆ ಅಭಯಾರಣ್ಯದಲ್ಲಿ 2015ರಲ್ಲಿ ತೆಗೆದ ಫೋಟೋ ವನ್ನು ವಿವಿಧ ಸ್ಥಳಗಳಲ್ಲಿ ತಪ್ಪು ತಪ್ಪು ಶೀರ್ಷಿಕೆ ನೀಡಿ ಅಪ್ ಲೋಡ್ ಮಾಡಲಾಗಿತ್ತು.

2015 ರಲ್ಲಿ ಕೇರಳಕ್ಕೆ ಸಂಪರ್ಕ ಮಾಡುವ ನಾಗರಹೊಳೆ ಅಭಯಾರಣ್ಯದಲ್ಲಿ ಸಂಚರಿಸುತ್ತಿದ್ದ ಸಮಯದಲ್ಲಿ ರಸ್ತೆಯಲ್ಲಿ ಕುಳಿತಿದ್ದ ಹುಲಿಯ ಫೋಟೋ ಅದು,ಬಸ್ ಬಂದು ನಿಂತು 20 ನಿಮಿಷವಾದರೂ ಹುಲಿ ಅಲ್ಲಿಯೇ ಕುಳಿತಿತ್ತು,ಅದಾದ ನಂತರ ಕೆಲವು ಕ್ಷಣಗಳಲ್ಲಿ ಅದು ಅಲ್ಲಿಂದ ಮರಗಳ ಪೊದೆಗೆ ನುಗ್ಗಿತ್ತು ಎಂದು ರಘುವೇದಿ ವಿವರಿಸಿದ್ದಾರೆ.

ತಾವು ತೆಗೆದ ಫೋಟೋಗಳಿಗೆ ವಾಟರ್ ಮಾರ್ಕ್ ಹಾಕಬೇಕು ಜೊತೆಗೆ ಫೋಟೋ ಗ್ರಾಪರ್ ಗಳು ಇಂತಹುಗಳ ಬಗ್ಗೆ ಜಾಗ್ರತೆಯಿಂದಿರಬೇಕು ಎಂದು ವನ್ಯಜೀವಿ ಛಾಯಾಗ್ರಾಹಕ ಉಮೇಶ್ ಜಿ ಇ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com