ದೇಸಿ ಉತ್ಪನ್ನಗಳಿಗೆ ಮೊರೆ ಹೋಗಿ, ನಮ್ಮ ವಸ್ತುಗಳನ್ನು ಬಳಸಿ: ಟ್ವಿಟ್ಟರ್ ನಲ್ಲಿ ಅಭಿಯಾನ ಆರಂಭಿಸಿದ ಸಚಿವ ಸಿ.ಟಿ. ರವಿ

ಸ್ಥಳೀಯತೆಗೆ, ದೇಸಿ ಉತ್ಪನ್ನಗಳಿಗೆ ಧ್ವನಿಯಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು ಸ್ಥಳೀಯ ರೈತರು, ಕರಕುಶಲಕರ್ಮಿಗಳು, ಸ್ಥಳೀಯ ಕೈಗಾರಿಕಾ ವಸ್ತುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗಿದೆ.
ಸಚಿವ ಸಿ ಟಿ ರವಿ
ಸಚಿವ ಸಿ ಟಿ ರವಿ

ಬೆಂಗಳೂರು: ಸ್ಥಳೀಯತೆಗೆ, ದೇಸಿ ಉತ್ಪನ್ನಗಳಿಗೆ ಧ್ವನಿಯಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು ಸ್ಥಳೀಯ ರೈತರು, ಕರಕುಶಲಕರ್ಮಿಗಳು, ಸ್ಥಳೀಯ ಕೈಗಾರಿಕಾ ವಸ್ತುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗಿದೆ.

ಭಾರತ-ಚೀನಾ ಗಡಿ ಸಂಘರ್ಷ, ಕೊರೋನಾ ವೈರಸ್ ಸಮಯದಲ್ಲಿ ಸ್ಥಳೀಯತೆಗೆ ಆದ್ಯತೆ ಹೊಸ ಮಂತ್ರವಾಗಿದೆ. ಸ್ಥಳೀಯ ವಸ್ತುಗಳಿಗೆ ಆದ್ಯತೆ ಕೊಡಲು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ ಟಿ ರವಿ ದೇಸಿ ವಸ್ತುಗಳನ್ನು ಕೊಳ್ಳಿ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.

ಅದಕ್ಕೆ ಟ್ವಿಟ್ಟರ್ ಸೇರಿದಂತೆ ಇತರ ಸೋಷಿಯಲ್ ಮೀಡಿಯಾಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಿರುವ ಅವರು ಕರ್ನಾಟಕದ ಪಾಂಡುರಂಗ ಕಾಫಿ ವರ್ಕ್ಸ್ ನಿಂದ ಹಿಡಿದು ಮೈಸೂರು ಸ್ಯಾಂಡಲ್ ಸೋಪ್, ಒಲಿಂಪಿಕ್ ಟೆನಿಸ್ ಬಾಲ್ ನಿಂದ ಹಿಡಿದು ಸೊಹ್ಮ್ ರಬ್ಬರ್ ಟೆಕ್ ವರೆಗೆ ದೇಶೀ ಉತ್ಪನ್ನಗಳನ್ನು ಬಳಸುವಂತೆ ಪ್ರಚುರಪಡಿಸುತ್ತಿದ್ದಾರೆ. ಪಾಂಡುರಂಗ ಕಾಫಿ ಚಿಕ್ಕಮಗಳೂರು ಮೂಲದ್ದಾಗಿದ್ದು ವಿದೇಶಗಳಿಗೆ ಸಹ ಕಾಫಿ ಪೌಡರ್ ನ್ನು ಪೂರೈಕೆ ಮಾಡುತ್ತದೆ. ಉತ್ತರ ಕನ್ನಡ ಜಿಲ್ಲೆಯ ಹೆಗ್ಡೆ ಗ್ರಾಮದಲ್ಲಿ ಟೆನ್ನಿಸ್ ಬಾಲ್ ತಯಾರಾಗುತ್ತದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿದ ಸಚಿವ ಸಿ ಟಿ ರವಿ, ಸಾಧ್ಯವಾದ ಕಡೆಗಳಲ್ಲೆಲ್ಲ ಸರ್ಕಾರ ದೇಸಿ ಉತ್ಪನ್ನಗಳನ್ನು ಬಳಕೆ ಮಾಡುತ್ತದೆ. 1990ರ ದಶಕದಲ್ಲಿ ರಾಜೀವ್ ದೀಕ್ಷಿತ್ ಅವರ ಮಾತುಗಳನ್ನು ಕೇಳಿದ ನಂತರ ಕೊಕಾ ಕೋಲ ಕುಡಿಯುವುದನ್ನು ಬಿಟ್ಟೆ. ನಮ್ಮ ಉತ್ಪನ್ನಗಳನ್ನು ಬಳಸಲು ಪ್ರಚಾರ ಮಾಡಿದರೆ ಯುವಕರು ಅವುಗಳನ್ನು ಬಳಸಲು ಆರಂಭಿಸುತ್ತಾರೆ. ನಮ್ಮ ದೇಶದ, ರಾಜ್ಯದ ಕಂಪೆನಿಗಳಿಗೆ ನಾವು ಕೊಡುಗೆ ಸಲ್ಲಿಸಬಹುದು. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸಹ ನಮ್ಮ ದೇಶ, ರಾಜ್ಯಗಳ ಸೋಪ್, ಶಾಂಪ್, ಕರ್ಟೈನ್, ಬೆಡ್ ಶೀಟ್ ಗಳನ್ನು ಬಳಸುವಂತೆ ಆದೇಶ ನೀಡುತ್ತೇನೆ. ಹೊಟೇಲ್, ಲಾಡ್ಜ್, ಜಂಗಲ್ ರೆಸಾರ್ಟ್ ಮತ್ತು ರೆಸಾರ್ಟ್ ಗಳಲ್ಲಿ ಇವುಗಳನ್ನು ಬಳಸಿದರೆ ಹೆಚ್ಚು ಉಪಯೋಗವಾಗುತ್ತದೆ. ಚೀನಾ ದೇಶದ ಉತ್ಪನ್ನಗಳಿಗೆ ನಿಷೇಧ ಹೇರಲು ಇದು ಆರಂಭವಷ್ಟೆ ಎಂದರು.

ಕರ್ನಾಟಕದಲ್ಲಿ ಜನರನ್ನು ಆಕರ್ಷಿಸುವಂತಹ ಉತ್ಪನ್ನಗಳಿವೆ. ಅವುಗಳು ಮೈಸೂರು ಸ್ಯಾಂಡಲ್ ಸೋಪ್, ಇಳಕಲ್ ಸೀರೆ, ಚನ್ನಪಟ್ಣ ಬೊಂಬೆ, ಬಿದ್ರಿ ಕೆಲಸ ಹೀಗೆ ಹಲವು. ಹಲವು ಕ್ಷೇತ್ರಗಳಲ್ಲಿ ಹಲವು ಉತ್ಪಾದನಾ ಘಟಕಗಳಿವೆ. ಮಾರುಕಟ್ಟೆಯಲ್ಲಿ ಹೊರಗಿನಿಂದ ಬಂದ ಕಡಿಮೆ ಬೆಲೆಯ ವಸ್ತುಗಳು ಸಿಕ್ಕಿದಾಗ ಈ ಉತ್ಪನ್ನಗಳು ಮರೆಗೆ ಸರಿದವು, ಇಲ್ಲವೇ ಕೊಳ್ಳುವವರು ಇಲ್ಲದೆ ಬಾಗಿಲು ಮುಚ್ಚಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com