ಮೈಸೂರು ಮೃಗಾಲಯ
ರಾಜ್ಯ
ಮೈಸೂರು ಮೃಗಾಲಯದಲ್ಲಿ ಕಾಳಿಂಗ ಸರ್ಪ ಮತ್ತು ಹುಲಿ ಸಾವು
ಮೂರು ದಿನಗಳ ಹಿಂದಷ್ಟೆ ಮಂಗಳೂರಿನ ಪಿಳಿಕುಳ ವನ್ಯಜೀವಿ ಧಾಮದಿಂದ ಚಾಮರಾಜೇಂದ್ರ ಮೃಗಾಲಯಕ್ಕೆ ತಂದಿದ್ದ ಕಾಳಿಂಗ ಸರ್ಪ ಹಾಗೂ ಹುಲಿ ಮೃತಪಟ್ಟಿವೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು: ಮೂರು ದಿನಗಳ ಹಿಂದಷ್ಟೆ ಮಂಗಳೂರಿನ ಪಿಳಿಕುಳ ವನ್ಯಜೀವಿ ಧಾಮದಿಂದ ಚಾಮರಾಜೇಂದ್ರ ಮೃಗಾಲಯಕ್ಕೆ ತಂದಿದ್ದ ಕಾಳಿಂಗ ಸರ್ಪ ಹಾಗೂ ಹುಲಿ ಮೃತಪಟ್ಟಿವೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮೃಗಾಲಯದ ಕಾರ್ಯನಿರ್ವಹಣಾ ನಿರ್ದೇಶಕ ಅಜಿತ್ ಕುಲಕರ್ಣಿ ಈ ಕುರಿತು ಹೇಳಿಕೆ ನೀಡಿದ್ದು, ಹುಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಕಾಳಿಂಗಸರ್ಪವು ಯಕೃತ್ತಿನ ಸಮಸ್ಯೆಯಿಂದ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ ಎಂದಿದ್ದಾರೆ.
ಹೆಚ್ಚುವರಿ ಪರಿಶೀಲನೆಗಾಗಿ ಮೃತ ಹಾವು ಮತ್ತು ಹುಲಿಯ ಘಾಸಿಗೊಳಗಾಗಿದ್ದ ಅಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ