ಮಹಿಳಾ ದಿನಾಚರಣೆ ಪ್ರಯುಕ್ತ ರಾಜ-ರಾಣಿ ರೈಲು ಸಾರಥಿ ಸೇರಿದಂತೆ ಎಲ್ಲಾ ಸಿಬ್ಬಂದಿ 'ಮಹಿಳಾ ಮಯ'

ಅಂತಾರಾಷ್ಟ್ರೀಯ ಮಹಿಳಾ ದಿನಚಾರಣೆ ಅಂಗವಾಗಿ ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ರಾಜರಾಣಿ ಎಕ್ಸ್ ಪ್ರೆಸ್ ನ ಎಲ್ಲಾ ಕೆಲಸವನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಚಾರಣೆ ಅಂಗವಾಗಿ ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ರಾಜರಾಣಿ ಎಕ್ಸ್ ಪ್ರೆಸ್ ನ ಎಲ್ಲಾ ಕೆಲಸವನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೂ ಮುನ್ನವೇ ಮಹಿಳೆಯರ ಸಬಲೀಕರಣದತ್ತ ನಡೆ... ಬೆಂಗಳೂರು– ಮೈಸೂರು ರಾಜ್ಯ ರಾಣಿ ಎಕ್ಸ್‌ಪ್ರೆಸ್‌ ರೈಲನ್ನು ಇಂದು ಮಹಿಳಾ ಸಿಬ್ಬಂದಿಯೇ ಓಡಿಸಿದ್ದಾರೆ.

ಬಾಲಾ ಶಿವಪರ್ವತಿ ಮತ್ತು ಸಹಾಯಕ ಪೈಲಟ್ ರಂಗೋಲಿ ಪಟೇಲ್ ಅವರು ಬೆಂಗಳೂರಿನಿಂದ ರೈಲು ಸಂಖ್ಯೆ 16657 ಮತ್ತು ಮೈಸೂರಿನಿಂದ ರೈಲು ಸಂಖ್ಯೆ 16558 ಅನ್ನು ಓಡಿಸಿದ್ದಾರೆ. ನಿಗದಿತ ಸಮಯಕ್ಕಿಂತ 12 ನಿಮಿಷಗಳ ತಡವಾಗಿ ಅಂದರೆ ಶನಿವಾರ ಬೆಳಿಗ್ಗೆ 10.42 ಕ್ಕೆ ರೈಲು ಬೆಂಗಳೂರಿನಿಂದ ಹೊರಟಿತು. ಆದರೆ  ವಿಳಂಬದ ಕಾರಣಗಳು ಸ್ಪಷ್ಟವಾಗಿಲ್ಲ.

ಮಹಿಳೆಯರಿಗೆ ರೈಲು ಚಲಾಯಿಸಲು ನೀಡಿರುವುದು ಬಹಳ ಸಂತೋಷವಾಗಿದೆ ಎಂದು ಕಳೆದ 8 ವರ್ಷಗಳಿಂದ ರೈಲು ಚಲಾಯಿಸುತ್ತಿರುವ  32 ವರ್ಷದ ಶಿವಪ್ರಿಯ ಸಂತೋಷ ವ್ಯಕ್ತ ಪಡಿಸಿದ್ದಾರೆ.

ಆಂಧ್ರಪ್ರದೇಶದ ಪಿತಾಪುರಂ ಗ್ರಾಮದ ಆರು ವರ್ಷದ ಮಗುವಿನ ತಾಯಿ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಪದವಿ ಪಡೆದಿದ್ದಾರೆ. 

ರೈಲ್ವೆ ಪರೀಕ್ಷೆಗಳನ್ನು ತೆರವುಗೊಳಿಸಿದ ನಂತರ, ಅವರು 2011 ರಲ್ಲಿ ಬೆಂಗಳೂರು ರೈಲ್ವೆ ವಿಭಾಗದಲ್ಲಿ ಸಹಾಯಕ ಲೊಕೊ ಪೈಲಟ್ ಆಗಿ ಸೇರಿದರು. 

ರೈಲಿನಲ್ಲಿ ಮಹಿಳೆ ಮತ್ತು ಪುರುಷ ಚಾಲಕರು ಇಬ್ಬರು ಇರುತ್ತಾರೆ, ಆದರೆ ಇಬ್ಬರು ಮಹಿಳೆಯರು ಇದೇ ಮೊದಲು ಇರುವುದು, ಮಹಿಳಾ ದಿನಾಚರಣೆ ಅಂಗವಾಗಿ ನನಗೆ ಈ ಅವಕಾಶ ಸಿಕ್ಕಿರುವುದು ಬಹಳ ಖುಷಿಯಾಗಿದೆ ಎಂದು ತಿಳಿಸಿದ್ದಾರೆ,.

ಕೇವಲ ಆರು ತಿಂಗಳ ಹಿಂದಷ್ಟೇ ರಂಗೋಲಿ ಪಟೇಲ್ ರೈಲ್ವೆ ಕೆಲಸಕ್ಕ ಸೇರಿದ್ದಾರೆ. ಉತ್ತರ ಪ್ರದೇಶದ 22 ವರ್ಷದ ರಂಗೋಲಿ ಪಟೇಲ್ 2019ರ ಆಗಸ್ಟ್ ನಲ್ಲಿ ಕೆಲಸ ಆರಂಭಿಸಿದರು. ಕಳೆದ ತಿಂಗಳಿಂದ ಮಾತ್ರ ಕರ್ತವ್ಯ ನಿರ್ವಹಿಸತ್ತಿದರುವುದಾಗಿ, ಇದೊಂದು ಉತ್ತಮ  ಅನುಭವ ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com