ವಿಜಯಪುರ: ಮುಳ್ಳುಹಂದಿಯನ್ನು ಬೇಟೆಯಾಡಿ ಟಿಕ್ ಟಾಕ್ ನಲ್ಲಿ ವೀಡಿಯೋ ಮಾಡಿದ ಯುವಕ ಅಂದರ್

ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬೇಟೆಯಾಡುತ್ತಿರುವ ಚಿತ್ರ, ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ವಿಜಯಪುರದ ಯುವಕನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ಜೈಲಿಗಟ್ಟಿದ್ದಾರೆ. . ಆರೋಪಿ ಮುಳ್ಳುಹಂದಿಯನ್ನು ಬೇಟೆಯಾಡಿದ್ದಾನೆ ಮತ್ತು ಅದನ್ನು ಬೇಟೆಯಾಡುವ  ವೀಡಿಯೊವನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಆರೋಪಿ ಮಂಜುನಾಥ್ ಬಡಿಗೇರ
ಆರೋಪಿ ಮಂಜುನಾಥ್ ಬಡಿಗೇರ
Updated on

ವಿಜಯಪುರ: ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬೇಟೆಯಾಡುತ್ತಿರುವ ಚಿತ್ರ, ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ವಿಜಯಪುರದ ಯುವಕನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ಜೈಲಿಗಟ್ಟಿದ್ದಾರೆ. . ಆರೋಪಿ ಮುಳ್ಳುಹಂದಿಯನ್ನು ಬೇಟೆಯಾಡಿದ್ದಾನೆ ಮತ್ತು ಅದನ್ನು ಬೇಟೆಯಾಡುವ  ವೀಡಿಯೊವನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಥಳೀಯ ಅರಣ್ಯ ಅಧಿಕಾರಿಗಳು ಸಿಂಧಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸಿ ಮತ್ತು ವೃತ್ತಿಯಲ್ಲಿ ಚಾಲಕನಾಗಿರುವ ಮಂಜುನಾಥ್ ಸಿ ಬಡಿಗೇರ (22)  ಎಂಬಾತನನ್ನು  ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಡಿಯೋದಲ್ಲಿ ಕಾಣಿಸಿಕೊಂಡ ಉಳಿದ ಮೂವರು ಸದಸ್ಯರನ್ನು ಬಂಧಿಸಲು ಅರಣ್ಯ ಅಧಿಕಾರಿಗಳು ತಂಡಗಳನ್ನು ರಚಿಸಿದ್ದಾರೆ.

ಭಾನುವಾರ, ನಾಲ್ವರು ಯುವಕರು ಹೊನ್ನಳ್ಳಿ ಗ್ರಾಮದ ಹೊರವಲಯದಲ್ಲಿ ಮುಳ್ಳುಹಂದಿ ಕಂಡು ಅದನ್ನು ಬೇಟೆಯಾಡಿದ್ದಲ್ಲದೆ ಕೊಂದು ಹಾಕಿದ್ದಾರೆ.ಆ ಗುಂಪಿನ ಸದಸ್ಯನೊಬ್ಬ  ಮಜುನಾಥ್ ಬಡಿಗೇರ  ಎಂಬಾತನ ಟಿಕ್ ಟಾಕ್  ನಲ್ಲಿ ತಾವು ಬೇಟೆಯಾಡುವ ದೃಶ್ಯಗಳನ್ನು ಅಪ್ ಮಾಡಿದ್ದ. ಸಾಮಾಜಿಕ ತಾಣದಲ್ಲಿ ಅಪ್ ಲೋಡ್ ಆಗಿದ್ದ ಈ ದೃಶ್ಯಗಳು ಮೊದಲಿಗೆ ಕಲಬುರಗಿ ಜಿಲ್ಲಾ ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ವರು ತನಿಖೆ ನಡೆಸುತ್ತಿರುವಾಗ, ಈ ಘಟನೆ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದಿರುವುದು ಪತ್ತೆಯಾಗಿತ್ತು. ಯಾವುದೇ ವಿಳಂಬವಿಲ್ಲದೆ, ಕಲಬುರಗಿಯ ಅರಣ್ಯ ಅಧಿಕಾರಿಗಳು ಈ ಮಾಹಿತಿಯನ್ನು ವಿಜಯಪುರ ಜಿಲ್ಲಾ ಕಚೇರಿಗೆ ರವಾನಿಸಿದ್ದಾರೆ. ತಕ್ಷಣ ಎಚ್ಚರಗೊಂಡ  ಅರಣ್ಯ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿ ಗುಂಪಿನ ಸದಸ್ಯನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾದರು. 

ಪ್ರಾಥಮಿಕ ತನಿಖೆಯಲ್ಲಿ, ಅರಣ್ಯ ಅಧಿಕಾರಿಗಳು ಆರೋಪಿ ಮಂಜುನಾಥನಲ್ಲದೆ ಇನ್ನೂ ಮೂವರು ಸದಸ್ಯರು ಕೃತ್ಯ ನಡೆಸಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿದರು, ಆದರೆ ಅವರು ಅಳಿವಿನಂಚಿನಲ್ಲಿರುವ ಮುಳ್ಳುಹಂದಿಯನ್ನು ಬೇಟೆಯಾಡಿ ಕೊಂದುಹಾಕಿದ ಕಾರಣ ಆತನನ್ನು ಬಂಧಿಸಲಾಗಿದೆ.

ಸಿಂಧಗಿಯ ರೇಂಜರ್ ಬಸಂಗೌಡಾ ಬಿರಾದಾರ್,ಮಾತನಾಡಿ  "ಕಲಬುರಗಿಯ ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ ಕೂಡಲೇ ನಾವು ಹಳ್ಳಿಗೆ ಧಾವಿಸಿದ್ದೇವೆ. ಪ್ರಸ್ತುತ ನಾವು ವೀಡಿಯೊದಲ್ಲಿರುವ ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ. ಉಳಿದಮೂವರು ಆರೋಪಿಗಳು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದು, ಅವರಲ್ಲಿ ಒಬ್ಬರು ಹಳ್ಳಿಯ ಪಂಚಾಯತ್‌ನಲ್ಲಿ ವಾಟರ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಾರೆ. ಒಮ್ಮೆ ನಾವು ಎಲ್ಲ ಸದಸ್ಯರನ್ನು ಬಂಧಿಸಿ ಬಳಿಕ ಅವರನ್ನು ಬೇಟೆಯಾಡಿದ್ದ ಸ್ಥಳಕ್ಕೆ ಪರಿಶೀಲನೆಗಾಗಿ ಕರೆದೊಯ್ಯಲಿದ್ದೇವೆ" ಎಂದರು.

"ನಾವು ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್, 1972 ರ ಅಡಿಯಲ್ಲಿ ಪ್ರಕರಣವನ್ನು ಜಾರಿ ಮಾಡಿದ್ದೇವೆ. ಈ ಪ್ರದೇಶದಲ್ಲಿ ನಾವು ಮುಳ್ಳುಹಂದಿಗಳು ಕೆಲವೇ ಕೆಲವು ಸಂಖ್ಯೆಯಲ್ಲಿದೆ.  ಮತ್ತು ಇದು ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ. ಇವು ರಾತ್ರಿಯ ವೇಳೆ ಮಾತ್ರ ಹೊರಗೆ ಕಾಣಿಸುತ್ತದೆ. ಯುವಕರ ಗುಂಪು ಪ್ರಾಣಿಗಳನ್ನು ಹಿಡಿಯಲು ಹೇಗೆ ಯಶಸ್ವಿಯಾಯಿತು ಎಂದು ತಿಳಿಯಲು ಇನ್ನಷ್ಟು ತನಿಖೆ ನಡೆಯಬೇಕು" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com