ಅಟೆಂಡರ್ ಕೈಯಲ್ಲಿ ನೂತನ ಕೋರ್ಟ್ ಸಂಕೀರ್ಣ ಉದ್ಘಾಟಿಸಿ, ಹೃದಯ ವೈಶಾಲ್ಯತೆ ಮೆರೆದ ಮುಖ್ಯ ನ್ಯಾಯಾಧೀಶ!

ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಒಕಾ, ಸಾಮಾನ್ಯ ಅಟೆಂಡರ್ ಕೈಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೂರು ಅಂತಸ್ತುಗಳ ನ್ಯಾಯಾಲಯದ ಕಟ್ಟಡವನ್ನು  ಉದ್ಘಾಟಿಸಿ, ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಕೋರ್ಟ್ ಅಟೆಂಡರ್ ಜಯರಾಜ್
ಕೋರ್ಟ್ ಅಟೆಂಡರ್ ಜಯರಾಜ್

ಚಿಕ್ಕಬಳ್ಳಾಪುರ: ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಒಕಾ, ಸಾಮಾನ್ಯ ಅಟೆಂಡರ್ ಕೈಯಲ್ಲಿ 
ನೂತನವಾಗಿ ನಿರ್ಮಿಸಲಾಗಿರುವ ಮೂರು ಅಂತಸ್ತುಗಳ ನ್ಯಾಯಾಲಯದ ಕಟ್ಟಡವನ್ನು  ಉದ್ಘಾಟಿಸಿ, ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ನ್ಯಾಯಾಲಯದ ಹಿರಿಯ ಅಟೆಂಡರ್ ಜಯರಾಜ್ ತಿಮೊತಿ ಅವರಿಗೆ ರಿಬ್ಬನ್ ಕಟ್ ಮಾಡಲು ಅವಕಾಶ ನೀಡುವ ಮೂಲಕ  ಮುಖ್ಯ ನ್ಯಾಯಾಧೀಶರು ಜನಮನ ಗೆದ್ದಿದ್ದಾರೆ.

ಶಿಷ್ಟಾಚಾರದ ಪ್ರಕಾರ ನ್ಯಾಯಾಧೀಶರು ಕೋರ್ಟ್ ಕಟ್ಟಡವನ್ನು ಉದ್ಘಾಟಿಸುವುದನ್ನು ಯಾವಾಗಲೂ ನೋಡುತ್ತಿರುತ್ತೇವೆ. ಆದರೆ, ಆ ಶಿಷ್ಟಾಚಾರವನ್ನು ಬದಿಗೊತ್ತಿದ್ದ ಒಕಾ ಅವರ ಸಕಾರಾತ್ಮಕ ವರ್ತನೆ ಮರೆಯಲಾಗದು ಎಂದು ಹಿರಿಯ ವಕೀಲರೊಬ್ಬರು ಹೇಳಿದ್ದಾರೆ.

ಈ ಘಟನೆ ವಕೀಲರನ್ನು ಮಾತ್ರವಲ್ಲ, ಸಾರ್ವಜನಿಕರನ್ನು ಅಚ್ಚರಿಗೊಳಿಸಿದೆ. ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರನ್ನು ಕೂಡಾ ಸೆಳೆದಿದೆ. ಅಲ್ಲಿರುವವರೆಗೂ ಈ ಕಟ್ಟಡದಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತೆ ಇರಲಿಲ್ಲ. ನನ್ನ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಭಾವನೆಗಳನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನಿಸಿದ್ದಾಗಿ ಜಯರಾಜ್ ಹೇಳಿದರು.

ಕೋಲಾರದ ಸಣ್ಣ ಹಳ್ಳಿ ಏಲಂನಿಂದ ಬಂದಿರುವ ಜಯರಾಜ್, ಸುಮಾರು 20 ವರ್ಷಗಳಿಂದ ನ್ಯಾಯಾಂಗ ಇಲಾಖೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದಾರೆ. 2007ಕ್ಕೆ ಚಿಕ್ಕಬಳ್ಳಾಪುರಕ್ಕೆ ಬರುವ ಮೊದಲು ಕೋಲಾರ, ಮುಳಬಾಗಿಲು ಮತ್ತು ಕೆಜಿಎಫ್ ನ್ಯಾಯಾಲಯಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಕಳೆದ 12 ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ನ್ಯಾಯಾಧೀಶರ ಅಡಿಯಲ್ಲಿ ಜಯರಾಜ್ ಕೆಲಸ ಮಾಡಿದ್ದಾರೆ.

ಇದರ ಬಗ್ಗೆ ಸಣ್ಣ ಸುಳಿವು ಕೂಡಾ ಇರಲಿಲ್ಲ. ಅದ್ದೂರಿ ಸಮಾರಂಭವಾಗಿದ್ದರಿಂದ ಶುದ್ಧವಾದ ಸಮವಸ್ತ್ರದೊಂದಿಗೆ ಕಾರ್ಯಕ್ರಮಕ್ಕೆ ತೆರಳಿ ಅಧಿಕಾರಿಗಳ ಹಿಂದೆ ನಿಂತಿದ್ದೆ.ವೇದಿಕೆ ಮುಂಭಾಗ ಬರುವಂತೆ ಅಧಿಕಾರಿಗಳನ್ನು ತಮ್ಮನ್ನು ಕರೆದರು. ಏನೋ ಕೆಲಸಕ್ಕೆ ಕರೆಯುತ್ತಿದ್ದಾರೆ ಎಂದು ಭಾವಿಸಿ ಅಲ್ಲಿಗೆ ಹೋದೆ. ಆದರೆ, ಜಿಲ್ಲಾ ನ್ಯಾಯಾಧೀಶರು ಅಲ್ಲಿದ್ದ ಪ್ರೇಕ್ಷಕರಿಗೆ ತಮ್ಮನ್ನು ಪರಿಚಯ ಮಾಡಿಕೊಟ್ಟರು. ಕಟ್ಟಡ ಉದ್ಘಾಟಿಸುವಂತೆ ಮುಖ್ಯ ನ್ಯಾಯಾಧೀಶರು ಸೂಚಿಸಿದರು. ನನ್ನಗೆ ನಂಬಲು ಸಾಧ್ಯವೇ ಆಗಲಿಲ್ಲ ಎಂದು ತಿಳಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇಂತಹ ದೃಶ್ಯಗಳನ್ನು ಸಿನಿಮಾಗಳಲ್ಲಿ ಮಾತ್ರ ನೋಡುತ್ತೇವೆ. ಆದರೆ, ಇದನ್ನು ನಿಜ ನಿಜ ಜೀವನದಲ್ಲೂ ನೋಡಿದ್ದಾಗಿ ಮತ್ತೋರ್ವ ಕೋರ್ಟ್ ಸಿಬ್ಬಂದಿ ತಿಳಿಸಿದರು. 

ಕಳೆದ ಕೆಲ ವರ್ಷಗಳಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ.ನ್ಯಾಯಾಧೀಶರು ಈಗ ಜನ ಸ್ನೇಹಿಯಾಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಡುವಣ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೋಲಾರದ ಹಿರಿಯ ವಕೀಲರೊಬ್ಬರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com