ಕರ್ನಾಟಕ ಮೂಲದ ಅಧಿಕಾರಿ ಈಗ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ನ ಕಮಾಂಡರ್

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಚಿನಾರ್ ಕಾರ್ಪ್ಸ್ ನ 49ನೇ ಕಮಾಂಡರ್ ಆಗಿ ಕರ್ನಾಟಕ ಮೂಲದ ಲೆಫ್ಟಿನೆಂಟ್ ಗವರ್ನರ್ ಜನರಲ್ ಬಿ ಎಸ್ ರಾಜು ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು. 
ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡ ಲೆಫ್ಟಿನೆಂಟ್ ಗವರ್ನರ್ ಜನರಲ್ ಬಿ ಎಸ್ ರಾಜು
ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡ ಲೆಫ್ಟಿನೆಂಟ್ ಗವರ್ನರ್ ಜನರಲ್ ಬಿ ಎಸ್ ರಾಜು

 ಬೆಂಗಳೂರು: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಚಿನಾರ್ ಕಾರ್ಪ್ಸ್ ನ 49ನೇ ಕಮಾಂಡರ್ ಆಗಿ ಕರ್ನಾಟಕ ಮೂಲದ ಲೆಫ್ಟಿನೆಂಟ್ ಗವರ್ನರ್ ಜನರಲ್ ಬಿ ಎಸ್ ರಾಜು ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು. 


ದಾವಣಗೆರೆ ಮೂಲದ ಲೆಫ್ಟಿನೆಂಟ್ ಜನರಲ್ ರಾಜು ಬಿಜಾಪುರದ ಸೈನಿಕ ಶಾಲೆ ಮತ್ತು ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಅವರು ಕರ್ನಾಟಕದ ಮೂಲದವರೇ ಆದ ಶಕುಂತಲಾ ಅವರನ್ನು ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳು, ಮಗಳು ಮತ್ತು ಮಗ ಇಬ್ಬರೂ ಎಂಜಿನಿಯರ್ ಆಗಿದ್ದಾರೆ.


ಭಾರತೀಯ ಸೇನಾ ಪಡೆಗೆ 1984ರ ಡಿಸೆಂಬರ್ ನಲ್ಲಿ ಸೇರಿದ ಲೆ.ಜ.ರಾಜು ಅವರು ತಮ್ಮ 36 ವರ್ಷಗಳ ವೃತ್ತಿಯಲ್ಲಿ ಹಲವು ಕಮಾಂಡ್ ಹುದ್ದೆಗಳನ್ನು ನಿರ್ವಹಿಸಿದ್ದಾರೆ. 5 ವರ್ಷಗಳ ಕಾಲ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರು. ಚಿನಾರ್ ಕಾರ್ಪ್ಸ್ ಗೆ ಕಮಾಂಡರ್ ಆಗುವ ಮುನ್ನ ಸೇನಾ ಕೇಂದ್ರ ಕಚೇರಿಯಲ್ಲಿ ಸಿಬ್ಬಂದಿ ಸೇವೆಗಳ ಮಹಾ ನಿರ್ದೇಶಕರಾಗಿದ್ದರು.


ಏನಿದು ಚಿನಾರ್ ಕಾರ್ಪ್ಸ್: ಕಾಶ್ಮೀರ ಕಣಿವೆಯಲ್ಲಿ ಮಿಲಿಟರಿ ಕಾರ್ಯಾಚರಣೆ ಮಾಡುವ ಭಾರತೀಯ ಸೇನೆಯ ಕಾಲಾಳುಪಡೆಯಾಗಿದೆ. ಇದುವರೆಗೆ ಪಾಕಿಸ್ತಾನ ಮತ್ತು ಚೀನಾದೊಂದಿಗೆ ನಡೆದ ಎಲ್ಲಾ ಮಿಲಿಟರಿ ಸಂಘರ್ಷಗಳಲ್ಲಿ ಇದು ಭಾಗಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com