ಸಿದ್ದರಾಜು
ರಾಜ್ಯ
ಮೈಸೂರು: ವಿದ್ಯಾರ್ಥಿನಿ ಜೊತೆ ಶಿಕ್ಷಕನ ಕಾಮದಾಟ, ಫೋಟೋ ವೈರಲ್!
ವಿದ್ಯಾರ್ಥಿನಿ ಜೊತೆಗಿನ ಶಿಕ್ಷಕನೋರ್ವನ ರಾಸಲೀಲೆಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮೈಸೂರು: ವಿದ್ಯಾರ್ಥಿನಿ ಜೊತೆಗಿನ ಶಿಕ್ಷಕನೋರ್ವನ ರಾಸಲೀಲೆಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮೈಸೂರಿನ ನಂಜನಗೂಡು ತಾಲೂಕಿನ ರಾಂಪುರ ಸರ್ಕಾರಿ ಶಾಲೆಯ ಶಿಕ್ಷಕ 58 ವರ್ಷದ ಸಿದ್ದರಾಜು ತನ್ನ ವಿದ್ಯಾರ್ಥಿನಿ ಜೊತೆ ರಾಸಲೀಲೆ ನಡೆಸಿದ್ದಾನೆ. ಇದರ ಜೊತೆಗೆ ರಾಸಲೀಲೆಯ ಫೋಟೋಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ. ಈ ಫೋಟೋಗಳು ಇದೀಗ ವೈರಲ್ ಆಗಿವೆ.
ಮಾಜಿ ಸಚಿವ ಡಿಟಿ ಜಯಕುಮಾರ್ ಅವರ ಆಪ್ತ ಸಹಾಯಕನಾಗಿದ್ದ ಸಿದ್ದರಾಜು 20 ವರ್ಷದ ತನ್ನ ಹಳೆಯ ವಿದ್ಯಾರ್ಥಿನಿ ಜೊತೆಗೆ ರಾಸಲೀಲೆಯಾಡಿದ್ದಾನೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಶಿಕ್ಷಕ ತಲೆಮರೆಸಿಕೊಂಡಿದ್ದಾನೆ.
ಸಿದ್ದರಾಜು ವರ್ತನೆಯಿಂದ ಬೇಸತ್ತಿರುವ ಗ್ರಾಮಸ್ಥರು ಆತನನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದರು. ಈ ಸಂಬಂಧ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ