ಸಚಿವ ಶ್ರೀರಾಮುಲು ಪುತ್ರಿ ವಿವಾಹ: ವಧು-ವರರಿಗೆ ಶುಭ ಕೋರಿದ ಸಿಎಂ ಯಡಿಯೂರಪ್ಪ 

ಆರೋಗ್ಯ ಸಚಿವ ಬಿ ಶ್ರೀರಾಮುಲು ಪುತ್ರಿ ರಕ್ಷಿತಾ ವಿವಾಹ ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರುತ್ತಿದ್ದು, ಇಂದು ಬೆಳಗ್ಗೆ ಸಿಎಂ ಬಿ ಎಸ್ ಯಡಿಯೂರಪ್ಪ ಅಲ್ಲಿಗೆ ತೆರಳಿ ವಧು-ವರರಿಗೆ ಶುಭ ಹಾರೈಸಿ ಬಂದಿದ್ದಾರೆ.
ನಿಶ್ಚಿತಾರ್ಥಕ್ಕೆ ಸಿಎಂ ಬಂದಿದ್ದ ಸಂದರ್ಭ
ನಿಶ್ಚಿತಾರ್ಥಕ್ಕೆ ಸಿಎಂ ಬಂದಿದ್ದ ಸಂದರ್ಭ
Updated on

ಬೆಂಗಳೂರು: ಆರೋಗ್ಯ ಸಚಿವ ಬಿ ಶ್ರೀರಾಮುಲು ಪುತ್ರಿ ರಕ್ಷಿತಾ ವಿವಾಹ ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರುತ್ತಿದ್ದು, ಇಂದು ಬೆಳಗ್ಗೆ ಸಿಎಂ ಬಿ ಎಸ್ ಯಡಿಯೂರಪ್ಪ ಅಲ್ಲಿಗೆ ತೆರಳಿ ವಧು-ವರರಿಗೆ ಶುಭ ಹಾರೈಸಿ ಬಂದಿದ್ದಾರೆ.

ಇಂದು ಬೆಳಗ್ಗೆ 9.30ರ ಹೊತ್ತಿಗೆ ವಿವಾಹ ನಡೆಯುತ್ತಿರುವ ಕಲ್ಯಾಣ ಮಂಟಪ ಬಳಿ ಆಗಮಿಸಿದ ಸಿಎಂ ಯಡಿಯೂರಪ್ಪ ವಧು ವರರಿಗೆ ಶುಭ ಹಾರೈಸಿ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಕೂಡಲೇ ವಿಧಾನಸೌಧದತ್ತ ತೆರಳಿದರು.ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಕೂಡ ಇಂದು ವಿವಾಹ ಸಮಾರಂಭಕ್ಕೆ ಹಾಜರಾಗುವ ನಿರೀಕ್ಷೆಯಿದೆ. 


ನಗರದ ಅರಮನೆ ಮೈದಾನದಲ್ಲಿ(ವಸಂತ ಗೇಟ್) ನಡೆಯುವ ವಿವಾಹಕ್ಕೆ ರಾಜ್ಯ, ಹೊರರಾಜ್ಯ ಸೇರಿದಂತೆ ಹಲವು ಕಡೆಗಳಿಂದ ಬಂಧುಗಳು, ಹಿತೈಷಿಗಳು, ಗಣ್ಯರು, ಸಿನಿಮಾ, ಉದ್ಯಮ ಕ್ಷೇತ್ರಗಳ ಪ್ರಮುಖರು, ಸ್ನೇಹಿತರು ಆಗಮಿಸಿ ಶುಭ ಹಾರೈಸಲಿದ್ದಾರೆ. 

ಶ್ರೀರಾಮುಲು ಪುತ್ರಿ ರಕ್ಷಿತಾ ಹೈದರಾಬಾದ್ ಮೂಲದ ರವಿಕುಮಾರ್ ಪುತ್ರ ಲಲಿತ್ ಸಂಜೀವ್ ರೆಡ್ಡಿಯವರ ಬಾಳಸಂಗಾತಿಯಾಗುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com